ಘಟನೆಯ ದೃಶ್ಯಾವಳಿ
ಘಟನೆಯ ದೃಶ್ಯಾವಳಿ

ಕಡ್ಡಾಯ ಲಸಿಕೆ ವಿರುದ್ಧ ಅಮೆರಿಕದಲ್ಲಿ ಭಾರೀ ಪ್ರತಿಭಟನೆ: ಓರ್ವನಿಗೆ ಇರಿತ

ಜಗತ್ತಿನ ಹಿರಿಯಣ್ಣ ಎಂದೇ ಕರೆಯಲ್ಪಡುವ ಅಮೆರಿಕದಲ್ಲಿ ಕಡ್ಡಾಯ ಲಸಿಕೆ ಕಾನೂನಿನ ವಿರುದ್ಧ ನಡೆದ ಭಾರೀ ಪ್ರತಿಭಟನೆ ವೇಳೆ ಘರ್ಷಣೆ ಸಂಭವಿಸಿದೆ. 

ವಾಷಿಂಗ್ಟನ್: ಜಗತ್ತಿನ ಹಿರಿಯಣ್ಣ ಎಂದೇ ಕರೆಯಲ್ಪಡುವ ಅಮೆರಿಕದಲ್ಲಿ ಕಡ್ಡಾಯ ಲಸಿಕೆ ಕಾನೂನಿನ ವಿರುದ್ಧ ನಡೆದ ಭಾರೀ ಪ್ರತಿಭಟನೆ ವೇಳೆ ಘರ್ಷಣೆ ಸಂಭವಿಸಿದೆ. ಈ ಸಂದರ್ಭ ಎರಡು ಬಣಗಳ ನಡುವೆ ನಡೆದ ಗಲಭೆಯಲ್ಲಿ ಓರ್ವನಿಗೆ ಚಾಕು ಇರಿದ ಪ್ರಕರಣ ನಡೆದಿದೆ. 

ಪ್ರತಿಭಟನಾಕಾರರು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಎಂದು ತಿಳಿದುಬಂದಿದೆ. ಪ್ರತಿಭಟನೆ ಸಂದರ್ಭ ಅಮೆರಿಕ ರಾಷ್ಟ್ರಧ್ವಜ ಮತ್ತು ಟ್ರಂಪ್ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. 

ಪ್ರತಿಭಟನೆಯ ವರದಿಗಾರಿಕೆಗೆಂದು ತೆರಳಿದ್ದ ಪತ್ರಕರ್ತನ ವಿರುದ್ಧ ತಿರುಗಿ ಬಿದ್ದ ಪ್ರತಿಭಟನಾಕಾರರು ಆತನನ್ನು ಥಳಿಸಿದ ಘಟನೆ ನಡೆದಿದೆ. 

ಜೊ ಬೈಡನ್ ಸರ್ಕಾರ ಕೊರೊನಾ ಲಸಿಕೆ ಕಡ್ಡಾಯಗೊಳಿಸುವುದರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಮಾಸ್ಕ್ ಧರಿಸುವುದರ ವಿರುದ್ಧವೂ ಕೂಗು ಹಾಕಿದರು ಎಂದು ತಿಳಿದುಬಂದಿದೆ.  

Related Stories

No stories found.

Advertisement

X
Kannada Prabha
www.kannadaprabha.com