ಭಾರತದ ಸ್ನೇಹಕ್ಕೆ ಆರ್‌ಎಸ್‌ಎಸ್‌ ಸಿದ್ಧಾಂತ ಅಡ್ಡಿ ಎಂದ ಪಾಕ್ ಪ್ರಧಾನಿ: ಇಮ್ರಾನ್ ಖಾನ್ ವಿರುದ್ಧ ಶಿವಸೇನೆ ತೀವ್ರ ಕಿಡಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸಿದ್ಧಾಂತಗಳೇ ಪಾಕಿಸ್ತಾನ ಮತ್ತು ಭಾರತದ ನಡುವೆ ಸೌಹಾರ್ದಯುತ ಮಾತುಕತೆಗೆ ಅಡ್ಡಿಯಾಗಿದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದು, ಈ ಹೇಳಿಕೆಗೆ ಶಿವಸೇನೆ ತೀವ್ರವಾಗಿ ಕಿಡಿಕಾರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸಿದ್ಧಾಂತಗಳೇ ಪಾಕಿಸ್ತಾನ ಮತ್ತು ಭಾರತದ ನಡುವೆ ಸೌಹಾರ್ದಯುತ ಮಾತುಕತೆಗೆ ಅಡ್ಡಿಯಾಗಿದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದು, ಈ ಹೇಳಿಕೆಗೆ ಶಿವಸೇನೆ ತೀವ್ರವಾಗಿ ಕಿಡಿಕಾರಿದೆ. 

ಉಜ್ಬೇಕಿಸ್ತಾನದಲ್ಲಿನ ಸೆಂಟ್ರಕ್‌-ದಕ್ಷಿಣ ಏಷ್ಯಾ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಇಮ್ರಾನ್ ಖಾನ್ ಅವರು, ಪಾಕಿಸ್ತಾನ ಮತ್ತು ಭಾರತದ ನಡುವೆ ಸೌಹಾರ್ದಯುತ ಮಾತುಕತೆಗೆ ಆರ್‌ಎಸ್‌ಎಸ್‌ ಸಿದ್ಧಾಂತಗಳು ಅಡ್ಡಿಯಾಗಿದೆ. ಬಹಳ ಕಾಲದಿಂದ ಭಾರತದೊಂದಿಗೆ ಉತ್ತಮ ನಾಗರಿಕ ನೆರೆ ರಾಜ್ಯವಾಗಿ ಮುಂದವರಿಯಲು ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದರು. 

ಇಮ್ರಾನ್ ಖಾನ್ ಅವರ ಈ ಹೇಳಿಕೆ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ತೀವ್ರವಾಗಿ ಕಿಡಿಕಾರಿದ್ದು, ಆಫ್ಘಾನಿಸ್ತಾನದಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ಪರಿಸ್ಥಿತಿ ಗೆ ಪಾಕಿಸ್ತಾನವೇ ಕಾರಣ ಎಂದು ಹೇಳಿದ್ದಾರೆ. 

ಪಾಕಿಸ್ತಾನ ತಾಲಿಬಾನ್‌ನ ಸೃಷ್ಟಿಕರ್ತ. ವಿಶ್ವದ ತಲೆದೋರಿರುವ ಭಯೋತ್ಪಾದನೆ ಸಮಸ್ಯೆಗೆ ಪಾಕಿಸ್ತಾನವೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ. 

ತಾಲಿಬಾನ್ ಸೃಷ್ಟಿಕರ್ತ ಯಾರು? ಪಾಕಿಸ್ತಾನ. ತಾಲಿಬಾನ್ ಸಹಾಯದಿಂದ ಪಾಕಿಸ್ತಾನ ಇಡೀ ವಿಶ್ವಕ್ಕೆ ಭಯೋತ್ಪಾದನೆ ಹರಡುವಂತೆ ಮಾಡಿದೆ. ಇಮ್ರಾನ್ ಖಾನ್ ಅವರನ್ನು ಯಾರೂ ನಂಬಬಾರದು ಎಂದಿದ್ದಾರೆ. 

ಆರ್'ಎಸ್ಎಸ್ ಸಿದ್ದಾಂತವೇನು? ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದೆ ಎಂಬುದು. ಅದು ಸತ್ಯ. ಇಡೀ ದೇಶದ ಭಾವನೆ ಕೂಡ ಇದೇ ಆಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com