ವಿಶ್ವಸಂಸ್ಥೆ ಭದ್ರತಾ ಮಂಡಳಿ
ವಿಶ್ವಸಂಸ್ಥೆ ಭದ್ರತಾ ಮಂಡಳಿ

2022-24ರ ಅವಧಿಗೆ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ ಭಾರತ ಆಯ್ಕೆ!

ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಒಂದಾದ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ 2022-24ರ ಅವಧಿಗೆ ಭಾರತ ಆಯ್ಕೆಯಾಗಿದೆ.

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಒಂದಾದ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ 2022-24ರ ಅವಧಿಗೆ ಭಾರತ ಆಯ್ಕೆಯಾಗಿದೆ.

ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಮೂರು ಆಯಾಮಗಳನ್ನು ಸುಸ್ಥಿರ ಅಭಿವೃದ್ಧಿಯತ್ತ ಮುನ್ನಡೆಸುವುದು ಆರ್ಥಿಕ ಮತ್ತು ಸಾಮಾಜಿಕ ಮಂಡಳಿ(ಇಕೋಸಾಕ್) ಮುಖ್ಯ ಕೆಲಸವಾಗಿದೆ. ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸಿ ಸದಸ್ಯ ರಾಷ್ಟ್ರಗಳಿಗೆ ನೀತಿ ಶಿಫಾರಸುಗಳನ್ನು ರೂಪಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. 

ಸೋಮವಾರ ನಡೆದ ಚುನಾವಣೆಯಲ್ಲಿ ಅಫ್ಘಾನಿಸ್ತಾನ, ಕಜಕಿಸ್ತಾನ್ ಮತ್ತು ಒಮಾನ್ ಜೊತೆಗೆ ಏಷ್ಯಾ-ಪೆಸಿಫಿಕ್ ರಾಜ್ಯಗಳ ವಿಭಾಗದಲ್ಲಿ ಭಾರತವನ್ನು ಆಯ್ಕೆ ಮಾಡಲಾಗಿದೆ.

ಆಫ್ರಿಕನ್ ರಾಷ್ಟ್ರಗಳಿಂದ, ಕೋಟ್ ಡಿ ಐವೊಯಿರ್, ಎಸ್ವಾಟಿನಿ, ಮಾರಿಷಸ್, ಟುನೀಶಿಯಾ ಮತ್ತು ಪೂರ್ವ ಯುರೋಪಿಯನ್ ನಿಂದ ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾ ಆಯ್ಕೆಯಾಗಿದ್ದರೆ, ಕೆರಿಬಿಯನ್ ನಿಂದ ಬೆಲೀಜ್, ಚಿಲಿ ಮತ್ತು ಪೆರು ದೇಶಗಳು ಆಯ್ಕೆಯಾಗಿವೆ.

#ECOSOCಗಾಗಿ ಭಾರತದ ಪರ ವಿಶ್ವಾಸ ಮತ ಚಲಾಯಿಸಿದ್ದಕ್ಕಾಗಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದಗಳು ಎಂದು ವಿಶ್ವಸಂಸ್ಥೆ ಭಾರತದ ರಾಯಭಾರಿ ಟಿ ಎಸ್ ತಿರುಮೂರ್ತಿ ಟ್ವೀಟ್ ಮಾಡಿದ್ದಾರೆ.

ECOSOC ಗಾಗಿ 54 ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ಸಾಮಾನ್ಯ ಸಭೆಯಿಂದ ಆಯ್ಕೆ ಮಾಡಲಾಗುತ್ತದೆ. ಮಂಡಳಿಗೆ ಸದಸ್ಯರನ್ನು ಭೌಗೋಳಿಕ ಪ್ರಾತಿನಿಧ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗಿದ್ದು, 14 ಆಫ್ರಿಕನ್ ರಾಷ್ಟ್ರಗಳು, 11 ಏಷ್ಯಾದ ರಾಷ್ಟ್ರಗಳು, 6 ಪೂರ್ವ ಯುರೋಪಿಯನ್ ರಾಷ್ಟ್ರಗಳು, 10 ಲ್ಯಾಟಿನ್ ಅಮೆರಿಕನ್ ಮತ್ತು ಕೆರಿಬಿಯನ್ ರಾಷ್ಟ್ರಗಳು,13 ಪಶ್ಚಿಮ ಯುರೋಪಿಯನ್ ಮತ್ತು ಇತರ ರಾಷ್ಟ್ರಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಇಕೋಸಾಕ್ ವೆಬ್‌ಸೈಟ್ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com