ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರ: ವೈಟ್ ಹೌಸ್

ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರವಾಗಿದ್ದು, ಆರ್ಥಿಕ, ಕಾರ್ಯತಂತ್ರ ಮತ್ತು ಭದ್ರತೆಯಂತಹ ವ್ಯಾಪಕವಾದ ವಿಷಯಗಳ ಬಗ್ಗೆ ಅಮೆರಿಕವು ಭಾರತದೊಂದಿಗೆ ಕೆಲಸ ಮಾಡುತ್ತಿದೆ ಎಂದು ವೈಟ್ ಹೌಸ್ ಹೇಳಿದೆ.
ಜೋ ಬಿಡೆನ್-ಕಮಲ್ ಹ್ಯಾರಿಸ್
ಜೋ ಬಿಡೆನ್-ಕಮಲ್ ಹ್ಯಾರಿಸ್

ವಾಷಿಂಗ್ಟನ್: ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರವಾಗಿದ್ದು, ಆರ್ಥಿಕ, ಕಾರ್ಯತಂತ್ರ ಮತ್ತು ಭದ್ರತೆಯಂತಹ ವ್ಯಾಪಕವಾದ ವಿಷಯಗಳ ಬಗ್ಗೆ ಅಮೆರಿಕವು ಭಾರತದೊಂದಿಗೆ ಕೆಲಸ ಮಾಡುತ್ತಿದೆ ಎಂದು ವೈಟ್ ಹೌಸ್ ಹೇಳಿದೆ.

ಭಾರತ ಮತ್ತು ಅಮೆರಿಕ ಸ್ನೇಹಸಂಬಂಧ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಶ್ವೇತಭವನ, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡಲು ಅಮೆರಿಕ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಾರತ ಅಮೆರಿಕದ ಪರಮಾಪ್ತ  ರಾಷ್ಟ್ರವಾಗಿದ್ದು, ಆರ್ಥಿಕ, ಕಾರ್ಯತಂತ್ರ ಮತ್ತು ಭದ್ರತೆಯಂತಹ ವ್ಯಾಪಕವಾದ ವಿಷಯಗಳ ಬಗ್ಗೆ ಅಮೆರಿಕವು ಭಾರತದೊಂದಿಗೆ ಕೆಲಸ ಮಾಡುತ್ತಿದೆ ಹೇಳಿದೆ.

ಈ ಬಗ್ಗೆ ಶ್ವೇತಭವನದ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಅವರು, 'ಭಾರತವು ಈ ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಅಮೆರಿಕ್ಕೆ ಪರಮಾಪ್ತ ಪಾಲುದಾರ ರಾಷ್ಟ್ರವಾಗಿದೆ. ಸಾಂಕ್ರಾಮಿಕ ರೋಗದ ಏರಿಕೆಯನ್ನು ಎದುರಿಸಲು ಭಾರತವು ಆರಂಭಿಕ  ಹಂತದಲ್ಲಿದ್ದಂತೆಯೇ, ಹಲವಾರು ಶ್ರೇಣಿಯ ಸಹಾಯವನ್ನು ಒದಗಿಸಲು ಅಮೆರಿಕ ಖಂಡಿತವಾಗಿಯೂ ಹಲವಾರು ಕ್ರಮಗಳನ್ನು ತೆಗೆದುಕೊಂಡಿತ್ತು.ಅಂತೆಯೇ ನಾವು ಅದನ್ನು ಈಗಲೂ ಮುಂದುವರಿಸುತ್ತೇವೆ" ಎಂದು ಪ್ಸಾಕಿ ಹೇಳಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಭಾರತ ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಆರ್ಭಟ ಹೆಚ್ಚಾಗಿತ್ತು. ಈ ವೇಳೆ ನಿತ್ಯ 3,00,000 ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿತ್ತು. ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಯಿಂದ ಆಸ್ಪತ್ರೆಗಳು ತತ್ತರಿಸುತ್ತಿದ್ದವು.  ಬಳಿಕ ಮೇ ಮಧ್ಯದಲ್ಲಿ, ಭಾರತದಲ್ಲಿ ಉತ್ತುಂಗಕ್ಕೇರಿದ ಸಾಂಕ್ರಾಮಿಕದಿಂದಾಗಿ ಪ್ರತಿದಿನ 4,12,262 ಹೊಸ ಸೋಂಕು ಪ್ರಕರಣಗಳು ದಾಖಲಾಗಿತ್ತು. ಇದೇ ಮೇ ತಿಂಗಳಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತಕ್ಕೆ 100 ಮಿಲಿಯನ್ ಡಾಲರ್ ಮೌಲ್ಯದ ಕೋವಿಡ್-19 ನೆರವು ಘೋಷಿಸಿದ್ದರು. ಯುಎಸ್-ಇಂಡಿಯಾ  ಚೇಂಬರ್ಸ್ ಆಫ್ ಕಾಮರ್ಸ್ ಫೌಂಡೇಶನ್ ಭಾರತದಲ್ಲಿ ಕೊರೋನವೈರಸ್ ಸಂಬಂಧಿತ ಕಾರ್ಯಕ್ರಮಗಳಿಗಾಗಿ 1.2 ಮಿಲಿಯನ್ ಯುಎಸ್ ಡಾಲರ್ ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿತ್ತು.

ಈ ದಾಖಲೆಯ ನಿಧಿಸಂಗ್ರಹದೊಂದಿಗೆ, ಯುಎಸ್-ಇಂಡಿಯಾ ಚೇಂಬರ್ಸ್ ಆಫ್ ಕಾಮರ್ಸ್ ಫೌಂಡೇಶನ್ ಸುಮಾರು 120 ವೆಂಟಿಲೇಟರ್‌ಗಳು ಮತ್ತು 1,000 ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳನ್ನು ಭಾರತಕ್ಕೆ ರವಾನಿಸಿತ್ತು.ಅಲ್ಲದೆ, ವಿಶ್ವದಾದ್ಯಂತದ ವಿವಿಧ ದೇಶಗಳಿಗೆ 25 ಮಿಲಿಯನ್ ಡೋಸ್  ಕೋವಿಡ್-19 ಲಸಿಕಗೆಗಳನ್ನು ಕಳುಹಿಸುವ ತನ್ನ ಆಡಳಿತದ ನಿರ್ಧಾರದ ವಿವರಗಳನ್ನು ಬೈಡೆನ್ ಘೋಷಿಸಿದ ನಂತರ ಭಾರತವು ಅಮೆರಿಕ ಲಸಿಕೆಗಳನ್ನು ಸ್ವೀಕರಿಸುತ್ತಿದೆ. ಜೂನ್ 4 ರಂದು, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವೈಯಕ್ತಿಕವಾಗಿ ಕರೆ ಮಾಡಿ, ಹತ್ತಾರು  ಸಾವಿರ ಡೋಸ್ ಲಸಿಕೆಗಳನ್ನು ಭಾರತಕ್ಕೆ ಕಳುಹಿಸುವ ಆಡಳಿತದ ನಿರ್ಧಾರದ ಬಗ್ಗೆ ತಿಳಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com