ಸುಸ್ಥಿರ ಅಭಿವೃದ್ಧಿ ಸಾಧಿಸುವ ಯಾವುದೇ ಪ್ರಯತ್ನವನ್ನು ಭಾರತ ಬಲಪಡಿಸುತ್ತದೆ: ಪ್ರಧಾನಿ ಮೋದಿ

ಸುಸ್ಥಿರ ಅಭಿವೃದ್ಧಿ ಸಾಧಿಸುವ ಯಾವುದೇ  ಪ್ರಯತ್ನವನ್ನು ಭಾರತ  ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ಗ್ಲಾಸ್ಗೋ: ಸುಸ್ಥಿರ ಅಭಿವೃದ್ಧಿ ಸಾಧಿಸುವ ಯಾವುದೇ  ಪ್ರಯತ್ನವನ್ನು ಭಾರತ  ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. ಹವಾಮಾನ ಬದಲಾವಣೆ ಎದುರಿಸುವಲ್ಲಿ ಭಾರತ ಪ್ರಮುಖ ಪಾಲುದಾರ ಎಂದು ಯುರೋಪಿನ್ ಆಯೋಗದ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್  ಬಣ್ಣಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಸೋಮವಾರ ಇಲ್ಲಿ ನಡೆದ COP26 ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತೋಮ್ಮೆ ಲೇಯನ್ ಅವರನ್ನು ಭೇಟಿಯಾದರು. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಲೇಯೆನ್ ಶುಕ್ರವಾರ ರೋಮ್‌ನಲ್ಲಿ ಜಿ- 20 ಶೃಂಗಸಭೆ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದರು. 

ಇದನ್ನೂ ಓದಿ: COP26 ಶೃಂಗಸಭೆ: ಜಾಗತಿಕ ತಾಪಮಾನ ಬದಲಾವಣೆಯಿಂದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ: ಪ್ರಧಾನಿ ಮೋದಿ ಕಳವಳ
"ಪ್ರಧಾನಿ ನರೇಂದ್ರ ಮೋದಿ COP26 ಜೊತೆಗೆ ನಿಕಟ ಸಹಯೋಗವನ್ನು ಮುಂದುವರಿಸುವುದು ಒಳ್ಳೆಯದು. ಜಾಗತಿಕ ಹವಾಮಾನದ ವಿರುದ್ಧ ಹೋರಾಡುವಲ್ಲಿ ಭಾರತವು ಪ್ರಮುಖ ಪಾಲುದಾರ. ಪ್ರಧಾನಿ ಮೋದಿ ನಾಯಕತ್ವವನ್ನು ನಾನು ಬಹಳವಾಗಿ ಪ್ರಶಂಸಿಸುತ್ತೇನೆ" ಎಂದು ಲೇಯೆನ್ ಸೋಮವಾರ ಟ್ವೀಟ್ ಮಾಡಿದ್ದರು. 

ಇದಕ್ಕೆ ಟ್ವೀಟ್ ಮಾಡಿರುವ ಮೋದಿ, ರೋಮ್‌ನಲ್ಲಿ ಅತ್ಯಂತ ಫಲಪ್ರದ ಸಂವಾದದ ನಂತರ ಗ್ಲಾಸ್ಗೋದಲ್ಲಿ ನಿಮ್ಮನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ನಿನ್ನೆ ನನ್ನ ಭಾಷಣದಲ್ಲಿ ನಾನು ಹೈಲೈಟ್ ಮಾಡಿದಂತೆ, ಭಾರತವು ಸುಸ್ಥಿರ ಅಭಿವೃದ್ಧಿಗಾಗಿ ಯಾವುದೇ ಪ್ರಯತ್ನವನ್ನು ಸದಾ ಬಲಪಡಿಸುತ್ತದೆ ಎಂದಿದ್ದಾರೆ. 

ಸೋಮವಾರ, ಪ್ರಧಾನಿ ಮೋದಿ ಅವರು,  ಭಾರತವು 2070 ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುತ್ತದೆ ಎಂಬ ದಿಟ್ಟ ಪ್ರತಿಜ್ಞೆಯನ್ನು ಘೋಷಿಸಿದರು ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಬದ್ಧತೆಯನ್ನು "ಅಕ್ಷರ ಮತ್ತು ಉತ್ಸಾಹ" ದಲ್ಲಿ ತಲುಪಿಸುತ್ತಿರುವ ಏಕೈಕ ದೇಶವಾಗಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: ಜಾಗತಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿ-20 ಶೃಂಗಸಭೆ 'ಫಲಪ್ರದ': ಪ್ರಧಾನಿ ಮೋದಿ
ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಭಾರತ ಶ್ರಮಿಸುತ್ತಿದೆ ಮತ್ತು ಅದನ್ನು  ಫಲಿತಾಂಶಗಳಲ್ಲಿ ತೋರಿಸುತ್ತದೆ ಎಂದು ಅವರು ಹೇಳಿದ್ದರು.  ಭಾರತವು ಹವಾಮಾನ ಬದಲಾವಣೆಯನ್ನು ತನ್ನ ಪ್ರಮುಖ ನೀತಿಯನ್ನಾಗಿ ಇಟ್ಟಿದ್ದು, ಮುಂದಿನ ಪೀಳಿಗೆಗೆ ಈ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು  ಶಾಲಾ ಪಠ್ಯಕ್ರಮದಲ್ಲಿ ಹವಾಮಾನ ಹೊಂದಾಣಿಕೆ ನೀತಿಗಳನ್ನು ಸೇರಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com