ವೆನಿಜುವೆಲ: ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗುತ್ತಿದ್ದರೂ ಅಧ್ಯಕ್ಷ ನಿಕೊಲಸ್ ಮದುರೊ ಪಕ್ಷ ಜಯಭೇರಿ
ಕಾರಕಾಸ್: ವೆನಿಜುವೆಲಾದ ವಿವಾದಾತ್ಮಕ ಅಧ್ಯಕ್ಷ ನಿಕೊಲಸ್ ಮದುರೊ ಅವರ ಪಕ್ಷ ಸ್ಥಳೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. 23 ಕ್ಷೇತ್ರಗಳಲ್ಲಿ 20 ಅನ್ನು ಮದುರೊ ಪಕ್ಷ ಗೆದ್ದುಕೊಂಡಿದೆ.
ಜಗತ್ತಿನಲ್ಲಿ ಕ್ರಿಪ್ಟೊ ಕರೆನ್ಸಿಯನ್ನು ಲೀಗಲ್ ಟೆಂಡರ್ ಅನ್ನಾಗಿ ಘೋಷಿಸಿದ ಕೆಲವೇ ದೇಶಗಳಲ್ಲಿ ವೆನಿಜುವೆಲಾ ಕೂಡಾ ಒಂದು. ಅಲ್ಲಿನ ಕರೆನ್ಸಿ ಮೌಲ್ಯವನ್ನೇ ಕಳೆದುಕೊಂಡಿದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಲಕ್ಷ ಮೌಲ್ಯದ ನೋಟುಗಳನ್ನು ಅಲ್ಲಿನ ಸರ್ಕಾರ ಬಿಡುಗಡೆಗೊಳಿಸಿದೆ.
ದಿನಸಿ ಸಾಮಗ್ರಿ ಬೆಲೆ ಗಗನಕ್ಕೇರಿದ್ದು ಸಣ್ಣ ವಸ್ತು ಖರೀದಿಸಲೂ ಜೇಬಲ್ಲಿ ಲಕ್ಷ ರೂ.ಗಳನ್ನು ಕೊಂಡೊಯ್ಯಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಇಂಧನ ಕೊರತೆಯನ್ನು ದೇಶ ಎದುರಿಸುತ್ತಿದೆ.
ಒಟ್ಟಿನಲ್ಲಿ ಇಡೀ ಜಗತ್ತಿನಲ್ಲಿ ಯಾವ ದೇಶವೂ ಪಡಬಾರದ ಸಂಕಷ್ಟಕ್ಕೆ ವೆನಿಜುವೆಲಾ ತುತ್ತಾಗಿದೆ. ಹಾಗಿದ್ದೂ ಸ್ಥಳೀಯ ಚುನಾವಣೆಯಲ್ಲಿ ಮದುರೊ ಪಕ್ಷ ಜಯಭೇರಿ ಬಾರಿಸಿರುವುದು ಅಂತಾರಾಷ್ಟ್ರೀಯ ವಲಯದಲ್ಲಿ ಅಚ್ಚರಿ ಉಂಟುಮಾಡಿದೆ.
Related Article
ಪಾಕಿಸ್ತಾನದಲ್ಲಿ 11 ವರ್ಷದ ಹಿಂದೂ ಬಾಲಕನ ಮೇಲೆ ಅತ್ಯಾಚಾರ, ಕತ್ತು ಕೊಯ್ದು ಕೊಲೆ: ಇಬ್ಬರ ಬಂಧನ!
ಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್ಗಳು ನೋಂದಣಿ ಇಲ್ಲದೇ ಕಾರ್ಯಾರಂಭ; ವಿವಾದ ಸೃಷ್ಟಿ
4 ತಿಂಗಳ ಬಳಿಕ ಟಿಕ್ಟಾಕ್ ಮೇಲಿನ ನಿಷೇಧ ವಾಪಸ್ ತೆಗೆದುಕೊಂಡ ಪಾಕ್
ಉಗ್ರರಿಗೆ ಪಾಕ್ ನಲ್ಲಿ ಸಂಪೂರ್ಣ ಸ್ವಾತಂತ್ರ್ಯದ ಸೌಲಭ್ಯ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಝಾಡಿಸಿದ ಭಾರತ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ