Source : The New Indian Express
ಬೀಜಿಂಗ್: ಚೀನಾ ಸರ್ಕಾರದ ಪ್ರಭಾವಿ ರಾಜಕಾರಣಿಯಾದ ಜಾಂಗ್ ಗೌಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಗಂಭೀರ ಆರೋಪ ಮಾಡಿದ್ದ ರಾಷ್ಟ್ರೀಯ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್ ಸುರಕ್ಷಿತವಾಗಿದ್ದಾರೆ ಎಂದು ಸರ್ಕಾರಿ ಸುದ್ದಿವಾಹಿನಿಯ ಮುಖ್ಯಸ್ಥರು ಹೇಳಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲಿಯೇ ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಗೆ ಭಾರತ- ಚೀನಾ ಒಪ್ಪಿಗೆ
ಈ ಹಿಂದೆ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್ ಅವರು ಪ್ರಭಾವಿ ರಾಜಕಾರಣಿ ವಿರುದ್ಧ ಆರೋಪ ಮಾಡಿದ ನಂತರ ಕಾಣೆಯಾಗಿದ್ದಾರೆ, ಅವರನ್ನು ಸರ್ಕಾರಿ ಏಜೆಂಟರು ಅಪಹರಣ ಮಾಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು.
ಇದನ್ನೂ ಓದಿ: 4 ತಿಂಗಳ ಬಳಿಕ ಟಿಕ್ಟಾಕ್ ಮೇಲಿನ ನಿಷೇಧ ವಾಪಸ್ ತೆಗೆದುಕೊಂಡ ಪಾಕ್
ಸರ್ಕಾರದ ವಿರುದ್ಧ ಮಾತನಾಡುವವರನ್ನು ಕಾಣೆ ಮಾಡುವುದಕ್ಕೆ ಚೀನಾದ ಸರ್ಕಾರ ಕುಖ್ಯಾತಿ ಪಡೆದಿದೆ. ಹಾಗಾಗಿ ಈ ಬಾರಿಯೂ ಅದು ಮುಂದುವರಿದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.
ಇದನ್ನೂ ಓದಿ: ಚೀನಾದೊಂದಿಗಿನ ಸಂಘರ್ಷ: ತೈವಾನ್ ನಿಂದ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳ ನಿಯೋಜನೆ
ಇದೀಗ ಆಟಗಾರ್ತಿ ಸುರಕ್ಷಿತವಾಗಿದ್ದು, ತಮ್ಮ ಮನೆಯಲ್ಲೇ ಇದ್ದಾರೆ. ಶೀಘ್ರದಲ್ಲಿ ಅವರು ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿವಾಹಿನಿ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಶ್ರೀಮಂತ ರಾಷ್ಟ್ರ: ಅಮೆರಿಕಾವನ್ನು ಹಿಂದಿಕ್ಕಿದ ಚೀನಾ ಬಳಿ ಇರುವ ಸಂಪತ್ತು ಎಷ್ಟು ಗೊತ್ತೇ?