ತಾಲಿಬಾನ್ ಗೆ ಒಂದು ಅವಕಾಶ ಕೊಡಿ ಎಂದ ಬ್ರಿಟನ್ ಸೇನಾ ಮುಖ್ಯಸ್ಥ

1990ರ ಕಾಲಘಟ್ಟದ ತಾಲಿಬಾನಿಗೂ ಈಗಿನ ತಾಲಿಬಾನಿಗೂ ಹೋಲಿಕೆ ಕಲ್ಪಿಸುವುದು ಸರಿಯಲ್ಲ. ಈ ಹಿಂದಿನ ಅವರ ವರ್ತನೆಗೂ ಈಗಿನ ನಡೆಗೂ ಇರುವ ಸಾಮ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ನಾವು ಸ್ವಲ್ಪ ವಿಶಾಲ ಮನೋಭಾವದೊಂದಿಗೆ ತಾಲಿಬಾನಿಗಳನ್ನು ಸ್ವಾಗತಿಸಬೇಕು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ತಾಲಿಬಾನ್ ಸರ್ಕಾರ ರಚಿಸುವ ಕುರಿತಂತೆ ಅಂತಾರಾಷ್ಟ್ರೀಯ ಸಮುದಾಯ ತಾಲಿಬಾನ್ ಗೆ ಒಂದು ಅವಕಾಶವನ್ನು ಕೊಡಬೇಕು ಎಂದು ಬ್ರಿಟನ್ ಸೇನಾ ಮುಖ್ಯಸ್ಥ ನಿಕ್ ಕಾರ್ಟರ್ ಹೇಳಿದ್ದಾರೆ. ಹಳೆಯ ಕತೆಯನ್ನು ಇಟ್ಟುಕೊಂಡು ತಾಲಿಬಾನ್ ಗೆ ಉಗ್ರಗಾಮಿ ಹಣೆಪಟ್ಟಿ ಹಚ್ಚಿ ಅವರನ್ನು ದೂಷಿಸುವುದು ಸರಿಯಲ್ಲ. ಅವರಿಗೆ ಒಂದು ಅವಕಶ ನೀಡಿದಾಗಲಷ್ಟೇ ಅವರ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವುದಕ್ಕೆ ವೇದಿಕೆ ನಿರ್ಮಾಣವಾಗುತ್ತದೆ. ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.  

1990ರ ಕಾಲಘಟ್ಟದ ತಾಲಿಬಾನಿಗೂ ಈಗಿನ ತಾಲಿಬಾನಿಗೂ ಹೋಲಿಕೆ ಕಲ್ಪಿಸುವುದು ಸರಿಯಲ್ಲ. ಈ ಹಿಂದಿನ ಅವರ ವರ್ತನೆಗೂ ಈಗಿನ ನಡೆಗೂ ಇರುವ ಸಾಮ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ನಾವು ಸ್ವಲ್ಪ ವಿಶಾಲ ಮನೋಭಾವದೊಂದಿಗೆ ತಾಲಿಬಾನಿಗಳನ್ನು ಸ್ವಾಗತಿಸಬೇಕು. ಆಗ ಮಾತ್ರ ಅವರೆಷ್ಟು ಉದಾರಿಗಳೆಂದು ಸಾಬೀತುಪಡಿಸಲ್ಲರು ಎಂದು ಕಾರ್ಟರ್ ಹೇಳಿದ್ದಾರೆ. 

ತಾಲಿಬಾನಿಗಳು ಮೂಲತಃ ಬುಡಕಟ್ಟು ಜನಾಂಗದವರು. ಅವರು ಜೀವನಪೂರ್ತಿ ಸಂಪ್ರದಾಯವಾದಿಗಳಾಗಿಯೇ ಬೆಳೆದವರು. ಹಾಗೆಂದು ಅವರ ಆಚರ ವಿಚಾರಗಳನ್ನು ತಿರಸ್ಕರಿಸದೇ ಅವರಿಗೂ ಒಂದು ಅವಕಾಶವನ್ನು ನೀಡಬೇಕು ಎಂದು ಕಾರ್ಟರ್ ಮನವಿ ಮಾಡಿದ್ದಾರೆ. ಅದಕ್ಕೆ ಸಮರ್ಥನೆಯಾಗಿ ತಾಲಿಬಾನ್ ಕಳೆದ ಎರಡು ದಿನಗಳಿಂದ ನಡೆದುಕೊಳ್ಳುತ್ತಿರುವ ರೀತಿಯನ್ನು ಉದಾಹರಿಸಿದ್ದಾರೆ.

ಆದರೆ ಕಾರ್ಟರ್ ಮಾತಿಗೆ ಹಲವು ಬ್ರಿಟಿಷ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ರಿಟಿಷ್ ಸೇನೆಯ ಮಾಜಿ ಮುಖ್ಯಸ್ಥ ಚಾರ್ಲಿ ಹರ್ಬರ್ಟ್ ಕಾರ್ಟರ್ ಮನವಿಯನ್ನು ನಿರಾಕರಿಸಿದ್ದಾರೆ. ತಾಲಿಬಾನ್ ಸೇನಾ ಬಲದ ಮೂಲಕ ಅಧಿಕಾರಕ್ಕೆ ಬರುತ್ತಿದೆ. ಈ ಸಮಯದಲ್ಲಿ ಅದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಬೇಕಾಗಿದೆ. ಅದನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಮಹಿಳೆಯರಿಗೆ ಪ್ರಾಧಾನ್ಯತೆ, ಅವರಿಗೆ ಉದ್ಯೋಗ ಮಾಡಲು ಅನುಮತಿ ಸೇರಿದಂತೆ ಹಲವು ಬಗೆಯಲ್ಲಿ ಮಾತನಾಡುತ್ತಿದೆ. ಅದು ಅಂತಾರಾಷ್ತ್ರೀಯ ಸಮುದಾಯವನ್ನು ದಾರಿತಪ್ಪಿಸಲು. ಹೀಗಾಗಿ ತಾಲಿಬಾನ್ ಏನೇ ಹೇಳಿದರೂ ಅದರ ಹಿಂದಿನ ಮೂಲ ಸ್ವರೂಪವನ್ನು ನಾವು ಮರೆಯಬಾರದು ಎಂದು ಮಾಜಿ ಬ್ರಿಟನ್ ಸೇನಾ ಮುಖ್ಯಸ್ಥ ಹರ್ಬರ್ಟ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com