ಜೋ ಬೈಡನ್ ಅಧಿಕಾರಕ್ಕೆ ಬಂದ ನಂತರ ಚೀನಾ, ಅಮೆರಿಕ ಮೊದಲ ಮಿಲಿಟರಿ ಮಟ್ಟದ ಮಾತುಕತೆ: ಆಪ್ಘನ್ ಬಿಕ್ಕಟ್ಟು ಚರ್ಚೆ

ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ವರ್ಷದ ಜನವರಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಚೀನಾ ಮತ್ತು ಅಮೆರಿಕದ ಮೊದಲ ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆ ನಡೆದಿದ್ದು, ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಉಭಯ ರಾಷ್ಟ್ರಗಳು ಚರ್ಚಿಸಿರುವುದಾಗಿ ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.
ಚೀನಾ ಮತ್ತು ಅಮೆರಿಕ ರಾಷ್ಟ್ರಧ್ವಜ
ಚೀನಾ ಮತ್ತು ಅಮೆರಿಕ ರಾಷ್ಟ್ರಧ್ವಜ

ಬೀಜಿಂಗ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ವರ್ಷದ ಜನವರಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಚೀನಾ ಮತ್ತು ಅಮೆರಿಕದ ಮೊದಲ ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆ ನಡೆದಿದ್ದು, ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಉಭಯ ರಾಷ್ಟ್ರಗಳು ಚರ್ಚಿಸಿರುವುದಾಗಿ ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.

ಪೀಪಲ್ಸ್ ಲಿಬರೇಷನ್ ಆರ್ಮಿ ಆಫೀಸ್ ಅಂತಾರಾಷ್ಟ್ರೀಯ ಮಿಲಿಟರಿ ಸಹಕಾರದ ಉಪ ನಿರ್ದೇಶಕ ಮೇಜರ್ ಜನರಲ್ ಹುವಾಂಗ್ ಕ್ಸುಪಿಂಗ್ ತನ್ನ ಅಮೆರಿಕದ ಸಹವರ್ತಿ ಮೈಕಲ್ ಚಾಸ್ ಜೊತೆಗೆ ಕಳೆದ ವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು.ಅಪ್ಘಾನಿಸ್ತಾನದ ಬಿಕ್ಕಟ್ಟು ಕುರಿತಂತೆ ಚರ್ಚಿಸಬೇಕಾದ ಅಗತ್ಯವಿದೆ ಎಂದು ಈ ವರ್ಷದ ಆರಂಭದಲ್ಲಿ ಅಲಾಸ್ಕಾದಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದರು. ಆದರೆ, ಅಮೆರಿಕಾದ ವಿದೇಶಾಂಗ ಸಚಿವರು ಇದನ್ನು ನಿರ್ಲಕ್ಷಿಸಿದ್ದರು ಎಂದು ಚೀನಾ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಾಂಗ್ ಕಾಂಗ್ ಮೂಲದ ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಹೇಳಿದೆ.

 ಗುರುವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಐಎಸ್ ಉಗ್ರರು ನಡೆಸಿದ ಆತ್ಯಾಹುತಿ ಬಾಂಬರ್ ದಾಳಿಗೊಳಗಾಗಿದ್ದವು. ಈ ದಾಳಿಯಲ್ಲಿ 169 ಅಫ್ಘನ್ನರು ಮತ್ತು 13 ಅಮೆರಿಕದ ಸೈನಿಕರು ಸಾವನ್ನಪ್ಪಿದ್ದರು. ಇದರ ಹೊಣೆಯನ್ನು ಐಸಿಸ್ - ಕೆ ಹೊತ್ತಿಕೊಂಡಿತ್ತು.

ಅಪ್ಘಾನಿಸ್ತಾನದ ಅವ್ಯವಸ್ಥೆ ನಡುವೆ ಉಗ್ರಗಾಮಿಗಳು ವಿಶೇಷವಾಗಿ ಪೂರ್ವ ತುರ್ಕಿಸ್ತಾನ್ ಇಸ್ಲಾಮಿಕ್ ಚಳವಳಿ ವಿಸ್ತರಣೆ ಬಗ್ಗೆ ಚೀನಾ ಕಳವಳಗೊಂಡಿದೆ. ಇದು ಆಗದಂತೆ ಚೀನಾ, ಅಮೆರಿಕ ಮತ್ತಿತರ ರಾಷ್ಟ್ರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಚೀನಾದ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com