ಸೌದಿ ಸರ್ಕಾರದಿಂದ ತಬ್ಲಿಘಿ ಜಮಾತ್ ನಿಷೇಧ: ನಮಾಜ್ ವೇಳೆ ತಬ್ಲಿಘಿಯ ದುಷ್ಪರಿಣಾಮ ಕುರಿತು ತಿಳಿ ಹೇಳುವಂತೆ ಮಸೀದಿಗಳಿಗೆ ಸೂಚನೆ 

ತಬ್ಲಿಘಿ ಜಮಾತ್ ಸಂಘಟನೆ ಭಯೋತ್ಪಾದನೆಯ ಪ್ರವೇಶದ್ವಾರವಾಗುವ ಸಾಧ್ಯತೆ ಇದೆಯೆಂದು ಸೌದಿ ಅರೇಬಿಯಾ ಸರ್ಕಾರ ಅಭಿಪ್ರಾಯಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಿಯಾದ್: ಪ್ರಮುಖ ಇಸ್ಲಾಂ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ತಬ್ಲಿಘಿ ಜಮಾತ್ ಸಂಘಟನೆಗೆ ನಿಷೇಧ ಹೇರಿದೆ. ತಬ್ಲಿಘಿ ಜಮಾತ್ ಸಂಘಟನೆ ಭಯೋತ್ಪಾದನೆಯ ಪ್ರವೇಶದ್ವಾರವಾಗುವ ಸಾಧ್ಯತೆ ಇದೆಯೆಂದು ಸೌದಿ ಅರೇಬಿಯಾ ಸರ್ಕಾರ ಅಭಿಪ್ರಾಯಪಟ್ಟಿದೆ. ಆ ಕಾರಣಕ್ಕೆ ತಾನು ಸಂಘಟನೆಯನ್ನು ಬ್ಯಾನ್ ಮಾಡಿರುವುದಾಗಿ ತಿಳಿಸಿದೆ. ಮುಂದಿನ ಶುಕ್ರವಾರ ನಮಾಜ್ ವೇಳೆ ತಬ್ಲಿಘಿ ಜಮಾತ್ ನಿಂದ ದೇಶಕ್ಕಾಗುವ ಹಾನಿಯ ಬಗ್ಗೆ ಜನರಿಗೆ ತಿಳಿಹೇಳಬೇಕು ಎಂದು ಮಸೀದಿಗಳಿಗೆ ಸರ್ಕಾರ ಸೂಚನೆ ನೀಡಿದೆ. 

ಸಚಿವ ಅಬ್ದುಲ್ ಅತಿಫ್ ಅಲ್ ಶೇಖ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ತಬ್ಲಿಘಿ ಮತ್ತು ದಾವಾ ಸಂಘಟನೆಯಿಂದ ದಾರಿತಪ್ಪಿಸುವ ಕೆಲಸ ಆಗುತ್ತಿದೆ. ಅದರಿಂಡ ಸಮಾಜಕ್ಕೆ ಅಪಾಯವಿದೆ. ಈ ಗುಂಪುಗಳೊಂದಿಗೆ ಸಂಬಂಧ ಇರಿಸಿಕೊಳ್ಳುವುದನ್ನು ಸೌದಿ ಸರ್ಕಾರ ನಿರ್ಬಂಧಿಸುತ್ತದೆ ಎಂದು ಅವರು ಹೇಳಿದ್ದಾರೆ. 

ಸೌದಿ ಸರ್ಕಾರದ ಪ್ರಕಾರ, ತಬ್ಲಿಘಿ ಜಮಾತ್ ಜನರಲ್ಲಿ ತಪ್ಪು ಸಂದೇಶಗಳನ್ನು ನೀಡುತ್ತಾ ಹೋದಂತೆ ಅದರ ಮೌಲ್ಯ ಕಡಿಮೆಯಾಗುತ್ತಲೇ ಹೋಗುತ್ತದೆ. ಅಲ್ಲದೆ, ಸೌದಿ ಅರೇಬಿಯಾ ಸರ್ಕಾರ ಕೈಗೊಂಡಿರುವ ಈ ಕಠಿಣ ನಿರ್ಧಾರದಿಂದಾಗಿ ತಬ್ಲಿಘಿ ಜಮಾತ್ ಗೆ ಭಾರೀ ಹಿನ್ನೆಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com