ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ 177 ರೂ.: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜೊತೆ ಸರ್ಕಾರ ಮಾತುಕತೆ

ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ನಿಧಿ ಕುಸಿತಗೊಳ್ಳುತ್ತಲೇ ಸಾಗಿದ್ದು ಅದರಿಂದಾಗಿ ದೇಶದ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಲಂಬೊ: ಶ್ರೀಲಂಕಾ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧೀನದ ಸಿಲೋನ್ ತೈಲ ಸಂಸ್ಥೆ ಪೆಟ್ರೋಲ್ ಬೆಲೆಯನ್ನು ಏಕಾಏಕಿ 20 ರೂ. ಏರಿಕೆ ಮಾಡಿದ್ದು, ಪ್ರತಿ ಲೀಟರಿಗೆ 177 ರೂ. ಮಾರಾಟವಾಗುತ್ತಿದೆ. 

ವಿದೇಶಿ ವಿನಿಮಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತೈಲ ಬೆಲೆ ಏರಿಕೆ ಮುಂದುವರಿದಿದೆ. ಈ ಹಿಂದೆಯೂ ಹಲವು ಬಾರಿ ತೈಲ ಬೇಲೆ ಏರಿಸುವಂತೆ ತೈಲ ಸಂಸ್ಥೆಗಳು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದವು. ಅದರೆ ಅಕ್ಟೋಬರಿನಿಂದಲೂ ಸರ್ಕಾರ ಬೆಲೆಯೇರಿಕೆಗೆ ಅವಕಾಶ ನೀಡಿರಲಿಲ್ಲ. 

ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ನಿಧಿ ಕುಸಿತಗೊಳ್ಳುತ್ತಲೇ ಸಾಗಿದ್ದು ಅದರಿಂದಾಗಿ ದೇಶದ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ತೈಲ ಬೆಲೆ ಇಳಿಕೆ ಕುರಿತಾಗಿ ಭಾರತ ಮತ್ತು ಓಮನ್ ಸರ್ಕಾರದ ಜೊತೆ ಮಾತುಕತೆ ಪ್ರಗತಿಯಲ್ಲಿರುವುದಾಗಿ ಶ್ರೀಲಂಕಾ ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com