ಕೊರೋನಾ ಲಸಿಕೆ ತಂತ್ರಜ್ಞಾನವನ್ನು ವರ್ಗಾಯಿಸಲು ಸಿದ್ಧವಿರುವ ವಿಶ್ವದ ಏಕೈಕ ದೇಶ ರಷ್ಯಾ: ಪುಟಿನ್
ಭಾರತದ ಕಂಪನಿಗಳು ರಷ್ಯಾದಸ್ಪುಟ್ನಿಕ್ ವಿ ಆಂಟಿ-ಕೋವಿಡ್ ಲಸಿಕೆ ತಯಾರಿಸಲು ತಯಾರಾಗುತ್ತಿರುವಾಗ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶನಿವಾರ, ತಂತ್ರಜ್ಞಾನವನ್ನು ವರ್ಗಾಯಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಸಿದ್ಧವಾಗಿರುವ ವಿಶ್ವದ ಏಕೈಕ ದೇಶ ರಷ್ಯಾ ಎಂದು ಹೇಳಿದ್ದಾರೆ.
Published: 05th June 2021 06:02 PM | Last Updated: 05th June 2021 06:26 PM | A+A A-

ವ್ಲಾಡಿಮಿರ್ ಪುಟಿನ್
ಪೀಟರ್ಸ್ ಬರ್ಗ್ (ರಷ್ಯಾ): ಭಾರತದ ಕಂಪನಿಗಳು ರಷ್ಯಾದ ಸ್ಪುಟ್ನಿಕ್ ವಿ ಆಂಟಿ-ಕೋವಿಡ್ ಲಸಿಕೆ ತಯಾರಿಸಲು ತಯಾರಾಗುತ್ತಿರುವಾಗ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶನಿವಾರ, ತಂತ್ರಜ್ಞಾನವನ್ನು ವರ್ಗಾಯಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಸಿದ್ಧವಾಗಿರುವ ವಿಶ್ವದ ಏಕೈಕ ದೇಶ ರಷ್ಯಾ ಎಂದು ಹೇಳಿದ್ದಾರೆ. ಇದುವರೆಗೆ ಲಸಿಕೆಯನ್ನು 66 ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಸ್ಪುಟ್ನಿಕ್ ವಿ ತಯಾರಿಸಲು ದೇಶದ ಔಷಧ ನಿಯಂತ್ರಕದಿಂದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಾಥಮಿಕ ಅನುಮೋದನೆ ಪಡೆದಿದೆ ಎಂದು ನವದೆಹಲಿಯ ಅಧಿಕಾರಿಗಳು ಹೇಳಿದ ಒಂದು ದಿನದ ನಂತರ ರಷ್ಯಾದ ಅಧ್ಯಕ್ಷರ ಈ ಹೇಳಿಕೆ ಹೊರಬಿದ್ದಿದೆ
ಈಗಾಗಲೇ ಭಾರತೀಯ ಫಾರ್ಮಾ ಕಂಪನಿಯಾದ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್, ಏಪ್ರಿಲ್ 2021 ರಲ್ಲಿ ರಷ್ಯಾದ ಲಸಿಕೆಗಾಗಿ ತುರ್ತು ಬಳಕೆ ಅಧಿಕಾರವನ್ನು (ಇಯುಎ) ಸ್ವೀಕರಿಸಿದೆ. ಅಲ್ಲದೆ, ಪ್ಯಾನೇಸಿಯಾ ಬಯೋಟೆಕ್ ರಷ್ಯಾದ ಆರ್‌ಡಿಐಎಫ್ ಸಹಯೋಗದೊಂದಿಗೆ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಯನ್ನು ಪ್ರಾರಂಭಿಸಿದೆ.
ಸ್ಪುಟ್ನಿಕ್ ವಿ ಲಸಿಕೆಯ ಪರಿಣಾಮಕಾರಿತ್ವದ ಮೇಲಿನ ಆರೋಪಗಳನ್ನು ತಿರಸ್ಕರಿಸಿದ ರಷ್ಯಾದ ಅಧ್ಯಕ್ಷ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ, ಅಸೋಸಿಯೇಟೆಡ್ ಪ್ರೆಸ್ ಮತ್ತು ರಾಯಿಟರ್ಸ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಹಿರಿಯ ಸಂಪಾದಕರೊಂದಿಗೆ ವರ್ಚುವಲ್ ಸಂವಾದದ ಸಂದರ್ಭದಲ್ಲಿ, ಲಸಿಕೆ ಯುರೋಪಿನಲ್ಲಿ ನೋಂದಾಯಿಸಲು ವಿಳಂಬವಾಗಿದೆ ಎಂದು ಹೇಳಿದರು ಅಲ್ಲಿ "ಸ್ಪರ್ಧಾತ್ಮಕ ಹೋರಾಟ" ಮತ್ತು "ವಾಣಿಜ್ಯ ಹಿತಾಸಕ್ತಿಗಳು" ಲಸಿಕೆ ನೊಂದಣಿ ವಿಳಂಬವಾಗಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಚೀನಾವನ್ನು ಕೆಲವು ದೇಶಗಳು, ವಿಶೇಷವಾಗಿ ಯುಎಸ್ ದೂಷಿಸುತ್ತಿರುವುದರಿಂದ, ಪುಟಿನ್ ಈ ವಿಷಯದ ಬಗ್ಗೆ ಹೆಚ್ಚು ಹೇಳದೆ ಬಿಕ್ಕಟ್ಟನ್ನು "ರಾಜಕೀಯಗೊಳಿಸಬಾರದು" ಎಂದು ಒತ್ತಿ ಹೇಳಿದರು. ಕೋವಿಡ್ ಸಾಂಕ್ರಾಮಿಕದ ಕಾರಣದ ಪ್ರಶ್ನೆಗೆ ಅವರು ಉತ್ತರಿಸಿದರು.
ಕಳೆದ ವಾರ, ಯುಎಸ್ ಅಧ್ಯಕ್ಷ ಜೋ ಬೈಡನ್ ಕೋವಿಡ್ -19 ರ ಮೂಲದ ಬಗ್ಗೆ ಹೆಚ್ಚಿನ ಗುಪ್ತಚರ ತನಿಖೆಗೆ ಆದೇಶಿಸಿದ್ದಾಗಿ ಘೋಷಿಸಿದರು, ಚೀನಾದ ವುಹಾನ್ ನಗರದ ಪ್ರಯೋಗಾಲಯದಿಂದ ಕೋವಿಡ್ ಹುಟ್ಟಿಕೊಂಡಿದೆ ಎಂಬ ಆರೋಪದ ನಡುವೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ ಟ್ರಂಪ್ ಚೀನಾಗೆ ಅದು ಉಂಟು ಮಾಡಿದ್ದ ಸಾವು ನೋವಿಗಾಗಿ ದಂಡ ವಿಧಿಸಬೇಕೆಂದು ಕರೆ ನೀಡಿದ್ದಾರೆ
"ಈ ವಿಷಯದ ಬಗ್ಗೆ ಈಗಾಗಲೇ ಹಲವಾರು ಬಾರಿ ಹೇಳಲಾಗಿದೆ, ಆದ್ದರಿಂದ ಈ ಬಗ್ಗೆ ಹೆಚ್ಚಿನ ಮಾತಾಡುವುದರಲ್ಲಿ ಅರ್ಥವಿಲ್ಲ ಎಂದು ನನಗೆ ತೋರುತ್ತದೆ. ನಾನು ಹೊಸ ಅಥವಾ ಆಸಕ್ತಿದಾಯಕವಾದದ್ದನ್ನು ಮಾತಾಡಲು ಬಯಸುತ್ತೇನೆ" ಎಂದು ಪುಟಿನ್ ಹೇಳಿದರು.
ಸ್ಪುಟ್ನಿಕ್ ವಿ ವಿರುದ್ಧ ಸ್ಪರ್ಧಾತ್ಮಕ ಹೋರಾಟ ನಡೆದಿರುವುದನ್ನು ಗಮನಿಸಿದ ಪುಟಿನ್, "66 ದೇಶಗಳಲ್ಲಿ, ನಾವು ನಮ್ಮ ಲಸಿಕೆಯನ್ನು ಮಾರಾಟ ಮಾಡುತ್ತಿದ್ದೇವೆ, ಇದು ನಮಗೆ ಒಂದು ದೊಡ್ಡ ಮಾರುಕಟ್ಟೆಯಾಗಿದೆ. ಆರೋಪಗಳು ವಾಣಿಜ್ಯ ಕಾರಣಗಳಿಂದಾಗಿವೆ ಎಂದು ನನಗೆ ಖಾತ್ರಿಯಿದೆ ಆದರೆ ನಾವು ಮಾನವೀಯ ಕಾರಣಗಳನ್ನು ಮಾತ್ರ ಗಮನಿಸುತ್ತೇವೆ,ಇದನ್ನು ಅಂತರರಾಷ್ಟ್ರೀಯ ತಜ್ಞರು ಗುರುತಿಸಿದ್ದಾರೆ, ಲಸಿಕೆ ಸಮರ್ಥವಾಗಿದೆ, ಅದರ ಪರಿಣಾಮಕಾರಿತ್ವವು ಶೇಕಡಾ 97.6 ಆಗಿದೆ" ಎಂದು ಅವರು ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕದಿಂದ ಸೃಷ್ಟಿಸಲ್ಪಟ್ಟ ಸವಾಲುಗಳು ಪರಸ್ಪರರ ರಾಜಕೀಯ ಪ್ರೇರಿತ ನಿರ್ಬಂಧಗಳನ್ನು ತೆಗೆದುಹಾಕಲು ದೇಶಗಳನ್ನು ಉತ್ತೇಜಿಸುತ್ತದೆ ಎಂದು ಪುಟಿನ್ ಭರವಸೆ ವ್ಯಕ್ತಪಡಿಸಿದರು.