ಭಾರತದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲಾಗಿದೆ: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ

ನೆರೆಯ ಭಾರತದೊಂದಿಗಿನ ತಪ್ಪು ತಿಳುವಳಿಕೆಯನ್ನು ಪರಿಹರಿಸಲಾಗಿದೆ ಎಂದು ನೇಪಾಳದ ಪ್ರಧಾನ ಮಂತ್ರಿ ಕೆ ಪಿ ಶರ್ಮಾ ಒಲಿ ಹೇಳಿದ್ದಾರೆ.
ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ
ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ

ಕಠ್ಮಂಡು: ನೆರೆಯ ಭಾರತದೊಂದಿಗಿನ ತಪ್ಪು ತಿಳುವಳಿಕೆಯನ್ನು ಪರಿಹರಿಸಲಾಗಿದೆ ಎಂದು ನೇಪಾಳದ ಪ್ರಧಾನ ಮಂತ್ರಿ ಕೆ ಪಿ ಶರ್ಮಾ ಒಲಿ ಹೇಳಿದ್ದಾರೆ. ನೆರೆಹೊರೆಯವರು ಪ್ರೀತಿ ಮತ್ತು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ ಎಂದು ಅವರು ಪ್ರತಿಪಾದಿಸಿದ್ದು, ಉಭಯ ದೇಶಗಳು ಭವಿಷ್ಯವನ್ನು ನೋಡುತ್ತಾ ಮುಂದೆ ಸಾಗಬೇಕು ಎಂದಿದ್ದಾರೆ.

ಇತ್ತೀಚಿಗೆ ಬಿಬಿಸಿ ಹಿಂದಿ ಸರ್ವಿಸ್ ಗೆ ನೀಡಿದ್ದ ಸಂದರ್ಶನದಲ್ಲಿ  ಉಭಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯ ಇದದ್ದನ್ನು ಓಲಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಈ ವಿಚಾರವನ್ನು ಎಳೆಯುವುದಿಲ್ಲ ಎಂದಿದ್ದಾರೆ.

ಕಳೆದ ತಿಂಗಳು ರಾಷ್ಟ್ರವನ್ನುದ್ದೇಶಿಸಿ ಟಿವಿಯೊಂದರಲ್ಲಿ ಮಾತನಾಡಿದ ಅವರು, ಭಾರತದೊಂದಿಗೆ ಗಡಿ ಸಂಘರ್ಷ ಐತಿಹಾಸಿಕ ಒಪ್ಪಂದ, ನಕ್ಷೆಗಳು ಮತ್ತು ವಾಸ್ತವ ದಾಖಲೆಗಳ ಆಧಾರದ ಮೇಲೆ ಮಾತುಕತೆ ಮೂಲಕ ಪರಿಹರಿಸಲಾಗಿದೆ ಎಂದು ಹೇಳಿದ್ದರು.

ಹೌದು. ಒಂದು ಕಾಲದಲ್ಲಿ ತಪ್ಪಾಗಿ ಗ್ರಹಿಸಲಾಗಿತ್ತು. ಆದರೆ, ಈಗ ಆ ತಪ್ಪು ಗ್ರಹಿಕೆ ಹೋಗಿದೆ. ಹಿಂದಿನ ತಪ್ಪು ತಿಳುವಳಿಕೆಗಳಿಗೆ ಅಂಟಿಕೂರಬಾರದು, ಆದರೆ, ಮುಂದಿನ ಭವಿಷ್ಯದತ್ತ ನೋಡಬೇಕಾಗಿದೆ. ಸಂಬಂಧ ವೃದ್ದಿಯತ್ತ ಗಮನ ಹರಿಸಬೇಕಾಗಿದೆ ಎಂದು 69 ವರ್ಷದ ನೇಪಾಳದ ಪ್ರಧಾನಿ ಬಿಬಿಸಿಗೆ ಹೇಳಿದ್ದಾರೆ.ಇತರ ಯಾವುದೇ ರಾಷ್ಟ್ರಗಳಂತೆ ಭಾರತದೊಂದಿಗೆ ನೇಪಾಳ ಅನನ್ಯ ಸಂಬಂಧ ಹೊಂದಿರುವುದಾಗಿ ಕೆ ಪಿ ಶರ್ಮಾ ಒಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com