ಜಗತ್ತಿನಾಧ್ಯಂತ ಧಿಡೀರ್ ಇಂಟರ್ನೆಟ್ ಸ್ಥಗಿತ; ಬಿಬಿಸಿ, ಸಿಎನ್ಎನ್, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ ಗಳು ಡೌನ್

ಜಗತ್ತಿನಾಧ್ಯಂತ ಇಂದು ಕೆಲಕಾಲ ದಿಢೀರ್ ಇಂಟರ್ನೆಟ್ ಸ್ಥಗಿತವಾಗಿ ಬಿಬಿಸಿ, ಸಿಎನ್ಎನ್, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ ಗಳು ಡೌನ್ ಆಗಿದ್ದವು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಗತ್ತಿನಾಧ್ಯಂತ ಇಂದು ಕೆಲಕಾಲ ದಿಢೀರ್ ಇಂಟರ್ನೆಟ್ ಸ್ಥಗಿತವಾಗಿ ಬಿಬಿಸಿ, ಸಿಎನ್ಎನ್, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ ಗಳು ಡೌನ್ ಆಗಿದ್ದವು.

ಇಂದು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಉಂಟಾದ ದಿಢೀರ್ ಇಂಟರ್ ನೆಟ್ ನಿಲುಗಡೆ (ಇಂಟರ್ನೆಟ್ ಔಟೇಜ್‌)ಯಿಂದಾಗಿ ಜಗತ್ತಿನಾದ್ಯಂತ ಹಲವಾರು ವೆಬ್ ಸೈಟ್ ಗಳು ಕೆಲಕಾಲ ಸಮಸ್ಯೆ ಎದುರಿಸಿದ್ದವು. ಪರಿಣಾಮ ಬಿಬಿಸಿ, ಅಮೆಜಾನ್, ಗಾರ್ಡಿಯನ್, ಫೈನಾನ್ಷಿಯಲ್ ಟೈಮ್ಸ್, ಇಂಡಿಪೆಂಡೆಂಟ್, ನ್ಯೂಯಾರ್ಕ್  ಟೈಮ್ಸ್, ಈವ್ನಿಂಗ್ ಸ್ಟ್ಯಾಂಡರ್ಡ್ ಮತ್ತು ರೆಡ್ಡಿಟ್ ಸೇರಿದಂತೆ ಹಲವಾರು ಪ್ರಮುಖ ಮಾಧ್ಯಮ ವೆಬ್‌ಸೈಟ್‌ಗಳು ಸ್ಥಗಿತವಾಗಿದ್ದವು, ಕೆಲ ವೆಬ್ ಸೈಟ್ ಗಳು ಸಂಪೂರ್ಣವಾಗಿ ಸ್ಥಿಗತಗೊಂಡರೆ ಮತ್ತೆ ಕೆಲವು ವೆಬ್ ಸೈಟ್ ಗಳಲ್ಲಿ ಸಣ್ಣ, ಪುಟ್ಟ ಅಡಚಣೆ ಕಾಣಿಸಿಕೊಂಡಿತ್ತು. 

ವಿಶ್ವದ ಪ್ರಮುಖ ವಿಷಯ ವಿತರಣಾ ನೆಟ್‌ವರ್ಕ್‌ಗಳಲ್ಲಿ (ಸಿಡಿಎನ್‌ಗಳು) ಈ ಸಮಸ್ಯೆಯು ಪ್ರಮುಖವಾಗಿ ಬೆಳಕಿಗೆ ಬಂದಿದೆ. ಸಿಡಿಎನ್ ಎನ್ನುವುದು ವೆಬ್‌ಸೈಟ್‌ಗಳನ್ನು ಮತ್ತು ಅವುಗಳ ವಿಷಯವನ್ನು ಅಂತರ್ಜಾಲದಲ್ಲಿ ನಿರ್ವಹಿಸುವ ಹಾಗೂ ಮಾಹಿತಿಯನ್ನು ಬಳಕೆದಾರರಿಗೆ ಪೂರೈಸಲು ಬಳಸುವ ಒಂದು  ವ್ಯವಸ್ಥೆಯಾಗಿದ್ದು, ಅದರ ಜಾಗತಿಕ ನೆಟ್‌ವರ್ಕ್‌ನಾದ್ಯಂತ ಪ್ರಮುಖವಾಗಿ ಇಂಟರ್ನೆಟ್ ಕ್ರ್ಯಾಶ್ ಕಾಣಿಸಿಕೊಂಡಿದೆ. ಇದು ಪ್ರಮುಖ ವೆಬ್‌ಸೈಟ್‌ಗಳಲ್ಲಿ ಇಂಟರ್ನೆಟ್ ಕ್ರಾಶ್‌ಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಈ ದಿಢೀರ್ ಸಮಸ್ಯೆಯಿಂದಾಗಿ ಸುಮಾರು 21,000 ರೆಡ್ಡಿಟ್ ಬಳಕೆದಾರರು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಸಮಸ್ಯೆಗಳಾದ ಕುರಿತು ಮಾಹಿತ ನೀಡಿದ್ದಾರೆ. ಅಂತೆಯೇ ಫೈನಾನ್ಷಿಯಲ್ ಟೈಮ್ಸ್, ದಿ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್ ಮತ್ತು ಬ್ಲೂಮ್‌ಬರ್ಗ್ ನ್ಯೂಸ್ ಸೇರಿದಂತೆ ಸುದ್ದಿ  ಕೇಂದ್ರಗಳು ನಿರ್ವಹಿಸುವ ವೆಬ್‌ಸೈಟ್‌ಗಳು ಸಹ ಈ ಸಮಸ್ಯೆಯನ್ನು ಎದುರಿಸಿವೆ. 2,000 ಕ್ಕೂ ಹೆಚ್ಚು ಬಳಕೆದಾರರು ಅಮೆಜಾನ್‌ ವೆಬ್ ಸೈಟ್ ನಲ್ಲಿ ಸಮಸ್ಯೆ ಎದುರಿಸಿರುವುದಾಗಿ ಹೇಳಿಕೊಂಡಿದ್ದು. ಈ ಬಗ್ಗೆ ಇಂಟರ್ನೆಟ್ ನಿಲುಗಡೆ ಮೇಲ್ವಿಚಾರಣಾ ವೆಬ್‌ಸೈಟ್ ಡೌಂಡೆಟೆಕ್ಟರ್.ಕಾಮ್ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎಸ್ ಸಂಸ್ಥೆ, "ಪ್ರಸ್ತುತ ನಮ್ಮ ಸಿಡಿಎನ್ ಸೇವೆಯಲ್ಲಿ ಕಂಡು ಬಂದಿರುವ ಸಮಸ್ಯೆಯ ಪರಿಣಾಮದ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com