ಚೀನಾದ ಕಬ್ಬಿಣದ ಅದಿರು ಗಣಿಯಲ್ಲಿ ಭೀಕರ ದುರಂತ; 13 ಮಂದಿ ಕಾರ್ಮಿಕರ ಸಾವು

ಚೀನಾದ ಕಬ್ಬಿಣದ ಅದಿರಿನ ಗಣಿಯಲ್ಲಿ ದುರಂತ ಸಂಭವಿಸಿದ್ದು, ಗಣಿಯಲ್ಲಿ ಸಿಲುಕಿ 13 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಚೀನಾ ಗಣಿ ದುರಂತ
ಚೀನಾ ಗಣಿ ದುರಂತ
Updated on

ಬೀಜಿಂಗ್: ಚೀನಾದ ಕಬ್ಬಿಣದ ಅದಿರಿನ ಗಣಿಯಲ್ಲಿ ದುರಂತ ಸಂಭವಿಸಿದ್ದು, ಗಣಿಯಲ್ಲಿ ಸಿಲುಕಿ 13 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದದಲ್ಲಿರುವ ಕಬ್ಬಿಣದ ಗಣಿಯಲ್ಲಿ ಸಿಲುಕಿದ್ದ ಎಲ್ಲ 13 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕಳೆದ ಒಂದು ವಾರದ ಹಿಂದೆ ಡಾಯಂಗ್ಸಿ ಗಣಿಯ ಆಳ ಪ್ರದೇಶದೊಳಗೆ ಅದಿರು ಕುಸಿದು 13 ಕಾರ್ಮಿಕರು ಸಿಲುಕಿಕೊಂಡಿದ್ದರು. ಈ 13  ಮಂದಿಯನ್ನು ರಕ್ಷಿಸಲು ರಕ್ಷಣಾ ಕಾರ್ಯಚರಣೆ ನಡೆಸಲಾಗಿತ್ತು. ಸತತ 6 ದಿನಗಳ ಬಳಿಕವೂ ರಕ್ಷಣಾ ಕಾರ್ಯಾಚರಣೆ ನಡೆದಿತ್ತಾದರೂ, ಇಂದು ಕಾರ್ಯಾಚರಣೆ ವಿಫಲವಾಗಿದ್ದು, ಎಲ್ಲ 13 ಮಂದಿ ಕಾರ್ಮಿಕರೂ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯಾಡಳಿತ ತಿಳಿಸಿದೆ.

ಮ್ಯಾರಥಾನ್ ಮತ್ತು ಬೃಹತ್ ರಕ್ಷಣಾ ಕಾರ್ಯಾಚರಣೆ ವಿಫಲ
ಜೂನ್ 7ರಂದು ಈ ದುರಂತ ನಡೆದಿತ್ತಾದರೂ ದುರಂತದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಲು ಸತತ 7 ದಿನಗಳ ಕಾಲ ಮ್ಯಾರಥಾನ್ ಕಾರ್ಯಾಚರಣೆ ನಡೆಸಲಾಗಿತ್ತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ 1084 ತಜ್ಞರು ಮತ್ತು ನೂರಾರು ಕಾರ್ಮಿಕರು ಭಾಗವಹಿಸಿದ್ದರು. ಅದಾಗ್ಯೂ  ಕಾರ್ಯಾಚರಣೆ ವಿಫಲವಾಗಿದೆ.

13 ಜನರ ವಿರುದ್ಧ ಮೊಕದ್ದಮೆ
ಇನ್ನು ಘಟನೆಗೆ ಸಂಬಂಧಿಸಿದಂತೆ ಗಣಿ ಪ್ರಾಧಿಕಾರದ 13 ಜನರನ್ನು ವಶಕ್ಕೆ ಪಡೆದು ಅವರ ಮೇಲೆ ಮೊಕದ್ದಮೆ ದಾಖಲಾಗಿದ್ದು, ತನಿಖೆ ನಡೆಸಲು ಸರ್ಕಾರ ಅನುಮತಿಸಿದೆ ಎಂದು ಸರ್ಕಾರದ ಅಧಿಕೃತ ಮುಖವಾಣಿ ಕ್ಸಿನ್‌ಹುವಾ ವರದಿ ಮಾಡಿದೆ.

ಜಗತ್ತಿನಲ್ಲಿಯೇ ಚೀನಾದ ಗಣಿಗಳು ಅತ್ಯಂತ ಅಪಾಯಕಾರಿ ಎನಿಸಿಕೊಂಡಿವೆ. 2009 ರಲ್ಲಿ ಒಂದೇ ವರ್ಷದಲ್ಲಿ 2631 ಗಣಿ ಕಾರ್ಮಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಗಣಿಗಳನ್ನು ನೋಡಿಕೊಳ್ಳುವವರ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದೆ. ಕಳೆದ ವರ್ಷ  ನವೆಂಬರ್‌ನಲ್ಲಿ, ಚೀನಾ ಸರ್ಕಾರವು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಲ್ಲಿದ್ದಲು ಗಣಿಗಳು ಮತ್ತು ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳ ಬಗ್ಗೆ ವರ್ಷಪೂರ್ತಿ ಪರಿಶೀಲನೆ ನಡೆಸಿತು, ಈ ವೇಳೆ ಲಭ್ಯವಾದ ವರದಿಯಲ್ಲಿ ಮೂಲಸೌಕರ್ಯ, ಅಪಾಯ ತಡೆಗಟ್ಟುವಿಕೆ ನಿರ್ವಹಣೆ ಮತ್ತು ತುರ್ತು  ಪ್ರತಿಕ್ರಿಯೆ ಮತ್ತು ರಕ್ಷಣಾ ಕಾರ್ಯಾಚರಣೆ ಸಾಮರ್ಥ್ಯಗಳ ಸಮಸ್ಯೆಗಳನ್ನು ಈ ವರದಿ ಎತ್ತಿ ತೋರಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com