ಆಗ ರಾಮನ ಅಯೋಧ್ಯೆ ಈಗ ಯೋಗ ನಮ್ಮದು ಎಂದ ನೇಪಾಳ ಪ್ರಧಾನಿ ಒಲಿ!

ಇಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಆದರೆ ಭಾರತದ ನೆರೆರಾಷ್ಟ್ರ ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಯೋಗದ ಬಗ್ಗೆ ಹೇಳಿಕೆಯನ್ನು ನೀಡಿ ವಿವಾದ ಸೃಷ್ಟಿಸಿದ್ದಾರೆ. "ಯೋಗ" ನೇಪಾಳದಲ್ಲಿ ಹುಟ್ಟಿಕೊಂಡಿದ್ದು ಹೊರತು ಭಾರತದಲ್ಲಲ್ಲ ಎಂದಿದ್ದಾರೆ.
ಕೆ.ಪಿ.ಶರ್ಮಾ ಒಲಿ
ಕೆ.ಪಿ.ಶರ್ಮಾ ಒಲಿ
Updated on

ಕಠ್ಮಂಡು: ಇಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಆದರೆ ಭಾರತದ ನೆರೆರಾಷ್ಟ್ರ ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಯೋಗದ ಬಗ್ಗೆ ಹೇಳಿಕೆಯನ್ನು ನೀಡಿ ವಿವಾದ ಸೃಷ್ಟಿಸಿದ್ದಾರೆ. "ಯೋಗ" ನೇಪಾಳದಲ್ಲಿ ಹುಟ್ಟಿಕೊಂಡಿದ್ದು ಹೊರತು ಭಾರತದಲ್ಲಲ್ಲ ಎಂದಿದ್ದಾರೆ.

"ಯೋಗವು ನೇಪಾಳದಲ್ಲಿ ಹುಟ್ಟಿಕೊಂಡಿತು, ಭಾರತದಲ್ಲಿ ಅಲ್ಲ. ಯೋಗ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ, ಭಾರತದ ಸ್ವರೂಪ ಈಗಿನಂತಿರಲಿಲ್ಲ ಬದಲಾಗಿ  ವಿವಿಧ ವಿಭಾಗಗಳಲ್ಲಿ ವಿಂಗಡನೆಯಾಗಿತ್ತು." ಒಲಿ ಹೇಳಿದರು.

ಅಂತರಾಷ್ಟ್ರೀಯ  ಯೋಗ ದಿನಾಚರಣೆಯಂದು ತಮ್ಮ ನಿವಾಸ ಬಾಲುವತಾರ್‌ನಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಒಲಿ  ಈ ಹೇಳಿಕೆ ನೀಡಿದ್ದಾರೆ. ಭಾರತೀಯ ತಜ್ಞರು ಇದರ ಬಗ್ಗೆ ಸತ್ಯವನ್ನು ಮರೆಮಾಡುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ. "ಈಗ ಇರುವ ಭಾರತವು ಹಿಂದೆ ಇರಲಿಲ್ಲ. ಆ ಸಮಯದಲ್ಲಿ ಭಾರತವನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಮತ್ತು ಆಗ ಭಾರತ ಉಪಖಂಡ ಅಥವಾ ಒಂದು ಖಂಡವಾಗಿತ್ತು ಎಂದರು.

2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗಕ್ಕೆ ಮಾನ್ಯತೆ ಸಿಕ್ಕಿದ ನಂತರ  2015 ರಿಂದ ಜೂನ್ 21 ರಂದು ಅಂತ ರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುಎನ್ ಭಾಷಣದಲ್ಲಿ ಜೂನ್ 21 ರ ದಿನಾಂಕವನ್ನು ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವೆಂದು ಸೂಚಿಸಿದ್ದು ವಿಶ್ವದ ಅನೇಕ ಭಾಗಗಳಲ್ಲಿ  ಅದರ ವಿಶೇಷ ಮಹತ್ವವನ್ನು ಹೇಳಿದ್ದರು.

ಈ ಮುನ್ನ ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆ ನೇಪಾಳದಲ್ಲಿದೆ ಮತ್ತು ಭಗವಾನ್ ರಾಮ ನೇಪಾಳಿ ಎಂದು ಕಳೆದ ಜುಲೈನಲ್ಲಿ ಒಲಿ ಹೇಳಿಕೊಂಡಿದ್ದರು.

"ನಿಜವಾದ ಅಯೋಧ್ಯೆ ಬಿರ್ಗುಂಜ್ ನ  ಪಶ್ಚಿಮದಲ್ಲಿರುವ ಥೋರಿ ಎಂಬ ನಗರದಲ್ಲಿದ್ದರೂ, ಭಗವಾನ್ ರಾಮನು ಅಲ್ಲಿಯೇ ಜನಿಸಿದನೆಂದು ಭಾರತ ಹೇಳಿಕೊಂಡಿದೆ. ಈ ಹಕ್ಕುಗಳಿಂದ ಸೀತಾದೇವಿ  ಭಾರತದ ರಾಜಕುಮಾರ ರಾಮನನ್ನು ಮದುವೆಯಾದಳೆಂದು  ನಾವು ನಂಬಿದ್ದೇವೆ. ಆದಾಗ್ಯೂ, ವಾಸ್ತವದಲ್ಲಿ , ಅಯೋಧ್ಯೆ ಬಿರ್ಗುಂಜ್‌ನ ಪಶ್ಚಿಮಕ್ಕೆ ಇರುವ ಹಳ್ಳಿಯಾಗಿದೆ ”ಎಂದು ಓಲಿ ಕಠ್ಮಂಡುವಿನ ಪ್ರಧಾನ ಮಂತ್ರಿಯ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. "ನಕಲಿ ಅಯೋಧ್ಯೆಯನ್ನು ಸೃಷ್ಟಿಸುವ ಮೂಲಕ" ಸಾಂಸ್ಕೃತಿಕ ಅತಿಕ್ರಮಣಕ್ಕೆ ಭಾರತವನ್ನು ದೂಷಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com