140ಕ್ಕೂ ಹೆಚ್ಚು ಯುಎಫ್ಒಗಳು ಕಾಣಿಸಿಕೊಂಡಿವೆ: ಅಮೆರಿಕ ಗುಪ್ತಚರ ಇಲಾಖೆ

ಕಳೆದ ಹಲವಾರು ದಶಕಗಳಲ್ಲಿ ನಿರ್ಬಂಧಿತ ಮಿಲಿಟರಿ ವಾಯುಪ್ರದೇಶದ ಮೂಲಕ ಹಾದು ಹೋದ ಸುಮಾರು 140 ಯುಎಫ್ಒ (ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್)ಗಳು ಕಾಣಿಸಿಕೊಂಡಿವೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ.
ಯುಎಫ್ಒ
ಯುಎಫ್ಒ

ವಾಷಿಂಗ್ಟನ್: ಕಳೆದ ಹಲವಾರು ದಶಕಗಳಲ್ಲಿ ನಿರ್ಬಂಧಿತ ಮಿಲಿಟರಿ ವಾಯುಪ್ರದೇಶದ ಮೂಲಕ ಹಾದು ಹೋದ ಸುಮಾರು 140 ಯುಎಫ್ಒ (ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್)ಗಳು ಕಾಣಿಸಿಕೊಂಡಿವೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ.

ಸಾಕಷ್ಟು ದಶಕಗಳಿಂದಲೇ ಭೂಮಿಯಲ್ಲಿ ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನಗಳು ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ಅಮೆರಿಕ ಗುಪ್ತಚರ ಇಲಾಖೆ ಯುಎಫ್ಒಗಳ ಕುರಿತು ಅಧಿಕೃತ ಹೇಳಿಕೆ ನೀಡಿದೆ. 

ಈ ಕುರಿತಂತೆ ಸಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದ್ದು, ನೌಕಾಪಡೆಯ ಪೈಲಟ್‌ಗಳು ಮತ್ತು ಇತರೆ ಭದ್ರತಾ ಸಿಬ್ಬಂದಿಗಳು ಗುರುತಿಸಿರುವಂತೆ ಈ ವರೆಗೂ ವಿವಿಧ ಪ್ರಕರಣಗಳಲ್ಲಿ ಸುಮಾರು 144ಯುಎಫ್ಒಗಳು ಪತ್ತೆಯಾಗಿವೆ. ಅಂತೆಯೇ ಈ ಯುಎಫ್ಒಗಳು ಅನ್ಯಗ್ರಹಗಳಿಂದ ಬಂಜ ಜೀವಿಗಳ ಅತ್ಯಾಧುನಿಕ  ವಾಹಕಗಳು ಅಥವಾ ಚೀನಾ, ರಷ್ಯಾಗಳ ಭ್ಯೋಮ ನೌಕೆ ಎನ್ನಲು ಯಾವುದೇ ಪುರಾವೆಗಳು ಲಭಿಸಿಲ್ಲ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವು ಕಾಲ್ಪನಿಕ ವಸ್ತುಗಳಲ್ಲ ಎಂಬುದು ಸ್ಪಷ್ಟವಾಗಿದ್ದು, ಇವು ಭೌತಿಕವಾಗಿ ಅಸ್ತಿತ್ವದಲ್ಲಿವೆ. ದಶಕಗಳಿಂದಲೂ ಈ ಬಗ್ಗೆ ಪೆಂಟಗನ್ ತನಿಖೆ ನಡೆಸುತ್ತಿದ್ದು, ಅಂತಿಮವಾಗಿ ಇದನ್ನು ಗಂಭೀರ ಸಮಸ್ಯೆಯೆಂದು ಪರಿಗಣಿಸಿದೆ. ಈ ಬಗ್ಗೆ ಅಮೆರಿಕ ಕಾಂಗ್ರೆಸ್ ಕೂಡ ಒಮ್ಮತದ ನಿರ್ಣಯಕೈಗೊಂಡಿದೆ ಎಂದು ವರದಿಗಳು  ಹೇಳಿವೆ.

ಅಮೆರಿಕಕ್ಕೆ ತಿಳಿಯದ ಸಾಕಷ್ಟು ಮುಂದುವರೆದ ತಂತ್ರಜ್ಞಾನದ ಮುಂದಿನ ಪೀಳಿಗೆಯ ವಿಮಾನಗಳನ್ನು ಕಂಡಿರುವುದಾಗಿ ಸಾಕಷ್ಟು ಪೈಲಟ್ ಗಳು ಮತ್ತು ಭದ್ರತಾ ಸಿಬ್ಬಂದಿಗಳು ಹೇಳಿಕೆ ನೀಡಿದ್ದಾರೆ. ಈ ಎಲ್ಲ ವಿಚಾರದ ಬಗ್ಗೆಯೂ ತಾವು ತನಿಖೆ ನಡೆಸುತ್ತಿರುವದಾಗಿ ಅಧಿಕಾರಿ ಹೇಳಿದ್ದಾರೆ. ಇದೇ ವಿಚಾರವಾಗಿ  ಮಾತನಾಡಿರುವ ಫ್ಲೋರಿಡಾದ ರಿಪಬ್ಲಿಕನ್ ಸೆನೆಟರ್ ಮಾರ್ಕೊ ರುಬಿಯೊ ಅವರು ಯುಎಫ್ಒಗಳ ಅಸ್ತಿತ್ವದ ಕುರಿತು ಸಾಕಷ್ಟು ಬಾರಿ ಸುದ್ದಿಗಳು ಬಂದಿದೆ. ಆಗೆಲ್ಲಾ ನಾವು ಕೇವಲ ಕಪೋಲಕಲ್ಪಿತ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆಧಾರ ಸಹಿತ ದಾಖಲೆಗಳು ಲಭ್ಯವಾಗಿದ್ದರಿಂದ ಈ  ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಸೆನೆಟ್ ಉಪಾಧ್ಯಕ್ಷ ಗುಪ್ತಚರ ಸಮಿತಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಈ ಘಟನೆಗಳನ್ನು ಪಟ್ಟಿಮಾಡುವಲ್ಲಿ ಈ ವರದಿಯು ಒಂದು ಪ್ರಮುಖ ಮೊದಲ ಹೆಜ್ಜೆಯಾಗಿದ್ದು,  ಇದು ಕೇವಲ ಒಂದು ಮೊದಲ ಹೆಜ್ಜೆ. ಈ ವೈಮಾನಿಕ ಬೆದರಿಕೆಗಳು ಗಂಭೀರವಾದ ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಪ್ರಸ್ತುತಪಡಿಸುತ್ತದೆಯೆ ಎಂದು ನಾವು ಅರ್ಥಮಾಡಿಕೊಳ್ಳುವ ಮೊದಲು ರಕ್ಷಣಾ ಇಲಾಖೆ ಮತ್ತು  ಗುಪ್ತಚರ ಸಮುದಾಯಕ್ಕೆ ಸಾಕಷ್ಟು ಕೆಲಸಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ರುಬಿಯೋ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com