ಪೂರ್ವ ಅಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಫೋಟ ಕನಿಷ್ಠ 30 ಮಂದಿ ಸಾವು

ಆಫ್ಘಾನಿಸ್ತಾನದ ಪೂರ್ವ ಲೋಗರ್ ಪ್ರಾಂತ್ಯದ ರಾಜಧಾನಿ ಪುಲ್-ಎ-ಆಲಂನಲ್ಲಿರುವ ಪ್ರಾಂತೀಯ ಆಸ್ಪತ್ರೆಯ ಹೊರಗೆ ಕಾರ್ ಬಾಂಬ್ ಸ್ಫೋಟಿಸಿ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದು, ಇತರ 70 ಮಂದಿ ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಸ್ಥಳೀಯ ಮೂಲವೊಂದು ದೃಢಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪುಲ್-ಇ-ಆಲಂ (ಕ್ಸಿನ್ಹುವಾ): ಆಫ್ಘಾನಿಸ್ತಾನದ ಪೂರ್ವ ಲೋಗರ್ ಪ್ರಾಂತ್ಯದ ರಾಜಧಾನಿ ಪುಲ್-ಎ-ಆಲಂನಲ್ಲಿರುವ ಪ್ರಾಂತೀಯ ಆಸ್ಪತ್ರೆಯ ಹೊರಗೆ ಕಾರ್ ಬಾಂಬ್ ಸ್ಫೋಟಿಸಿ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದು, ಇತರ 70 ಮಂದಿ ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಸ್ಥಳೀಯ ಮೂಲವೊಂದು ದೃಢಪಡಿಸಿದೆ.

ಆರಂಭಿಕ ಮಾಹಿತಿಯಂತೆ, ಗುರುವಾರ ಸ್ಥಳೀಯ ಕಾಲಮಾನ ಸಂಜೆ 6.50 ಕ್ಕೆ ಪವಿತ್ರ ರಂಜಾನ್ ತಿಂಗಳಲ್ಲಿ ಜನರು ಉಪವಾಸ ಮುರಿದ ಕೆಲವೇ ನಿಮಿಷಗಳಲ್ಲಿ ಆತ್ಮಾಹುತಿ ಬಾಂಬರ್ ಕಾರ್ ಬಾಂಬ್ ಸ್ಫೋಟಿಸಿದ್ದಾನೆ ಮೂಲವೊಂದು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದೆ.

ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬಾಂಬ್‍ ಸ್ಫೋಟದಿಂದ ಮುಖ್ಯ ಪ್ರಾಂತೀಯ ಆಸ್ಪತ್ರೆಯ ಕಟ್ಟಡ ಮತ್ತು ಆಂಬುಲೆನ್ಸ್‌ಗಳು ನಾಶಗೊಂಡಿವೆ. ಅನೇಕ ವೈದ್ಯಕೀಯ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ರಕ್ಷಣೆ ಮತ್ತು ನೆರವಿಗಾಗಿ ಖಾಸಗಿ ಆಸ್ಪತ್ರೆಗಳು ಮತ್ತು ಹತ್ತಿರದ ಜಿಲ್ಲೆಗಳ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com