ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿಯಲ್ಲಿ ಚೀನಾದಿಂದ ಪ್ರತ್ಯೇಕತಾ ರೇಖೆ!
ನೇಪಾಳದ ಕಡೆಯ ಪರ್ವತಾರೋಹಿಗಳಿಂದ ಕೊರೋನಾವೈರಸ್ ಸೋಂಕನ್ನು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮೌಂಟ್ ಎವೆರಸ್ಟ್ ತುತ್ತ ತುದಿಯಲ್ಲಿ ಚೀನಾ ಪ್ರತ್ಯೇಕವಾದ ಮಾರ್ಗವನ್ನು ಮಾಡಲಿದೆ ಎಂದು ಚೀನಾದ ರಾಷ್ಟ್ರೀಯ ಮಾಧ್ಯಮ ಸೋಮವಾರ ವರದಿ ಮಾಡಿದೆ.
Published: 10th May 2021 05:32 PM | Last Updated: 10th May 2021 06:00 PM | A+A A-

ಮೌಂಟ್ ಎವರೆಸ್ಟ್ ಶಿಖರ
ಬೀಜಿಂಗ್: ನೇಪಾಳದ ಕಡೆಯ ಪರ್ವತಾರೋಹಿಗಳಿಂದ ಕೊರೋನಾವೈರಸ್ ಸೋಂಕನ್ನು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮೌಂಟ್ ಎವೆರಸ್ಟ್ ತುತ್ತ ತುದಿಯಲ್ಲಿ ಚೀನಾ ಪ್ರತ್ಯೇಕತ ರೇಖೆಯನ್ನು ಎಳೆಯಲಿದೆ ಎಂದು ಚೀನಾದ ರಾಷ್ಟ್ರೀಯ ಮಾಧ್ಯಮ ಸೋಮವಾರ ವರದಿ ಮಾಡಿದೆ.
ಚೀನಾದ ಕಡೆಯಿಂದ ಪರ್ವತಾರೋಹಿಗಳು ತಲುಪುವುದಕ್ಕೆ ಮುನ್ನ ಶಿಖರದ ತುತ್ತ ತುದಿಯಲ್ಲಿ ಪ್ರತ್ಯೇಕತಾ ರೇಖೆಯನ್ನು
ಟಿಬೆಟಿಯನ್ ಪರ್ವಾತಾರೋಹಿ ಗೈಡ್ ಗಳ ತಂಡವೊಂದು ಅಳವಡಿಸಲಿದೆ ಎಂದು ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಅಧಿಕೃತವಾಗಿ
ವರದಿ ಮಾಡಿದೆ.
ಪ್ರತ್ಯೇಕತಾ ರೇಖೆ ಮಾಡುವ ಬಗ್ಗೆ ಸ್ಪಷ್ಟತೆ ಇಲ್ಲ. ಚೀನಾದಿಂದ ಉತ್ತರ ಕಡೆಯಿಂದ ಶಿಖರವೇರುವ ಪರ್ವತಾರೋಹಿಗಳು,
ಪ್ರತ್ಯೇಕತಾ ರೇಖೆ ದಾಟದಂತೆ ಅಥವಾ ದಕ್ಷಿಣ ಅಥವಾ ನೇಪಾಳದ ಕಡೆಯಿಂದ ಶಿಖರ ವೇರುವ ಪರ್ವತಾ ರೋಹಿಗಳ
ಸಂಪರ್ಕಕ್ಕೆ ಬರದಂತೆ ನಿರ್ಬಂಧಿಸಲಾಗುವುದು ಎಂದು ಅದು ಹೇಳಿದೆ.
ಪ್ರತ್ಯೇಕತಾ ಮಾರ್ಗದ ಬಗ್ಗೆ ನೇಪಾಳ ಸರ್ಕಾರ ಮತ್ತು ಪರ್ವತಾರೋಹಿಗಳ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಂಕ್ರಾಮಿಕ ಉಲ್ಬಣದ ನಂತರ ಕಳೆದ ವರ್ಷದಿಂದ ಪರ್ವತ ಹತ್ತುವುದನ್ನು ಉಭಯ ದೇಶಗಳು ನಿಷೇಧಿಸಿವೆ. ಪ್ರವಾಸದ್ಯೋಮದಿಂದ ಆದಾಯ ಪಡೆಯುವ ನಿಟ್ಟಿನಲ್ಲಿ ಈ ವರ್ಷ 408 ವಿದೇಶಿಗರಿಗೆ ನೇಪಾಳ ಅವಕಾಶ ನೀಡಿತ್ತು. ಚೀನಾ 38 ಜನರಿಗೆ ಅವಕಾಶ ನೀಡಿತ್ತು.
ನೇಪಾಳದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳು ಹೆಚ್ಚಾಗಿದ್ದು,
ಪ್ರಮುಖ ನಗರಗಳಲ್ಲಿ ಲಾಕ್ ಡೌನ್ ಹೇರಲಾಗಿದೆ. ಎಲ್ಲಾ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು
ನಿಷೇಧಿಸಲಾಗಿದೆ.