ಪಾಕಿಸ್ತಾನಕ್ಕೆ ಅತ್ಯಾಧುನಿಕ, ಬೃಹತ್ ಯುದ್ಧನೌಕೆ ರವಾನಿಸಿದ ಚೀನಾ

ಚೀನಾವು ಅತಿದೊಡ್ಡ ಮತ್ತು ಅತ್ಯಾಧುನಿಕ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ತಲುಪಿಸಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಚೀನಾವು ಅತಿದೊಡ್ಡ ಮತ್ತು ಅತ್ಯಾಧುನಿಕ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ತಲುಪಿಸಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾಪೋರೇಷನ್ ಲಿಮಿಟೆಡ್ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಯುದ್ಧನೌಕೆಯನ್ನು ಪಾಕಿಸ್ತಾನ ನೌಕಾಪಡೆಗೆ ಶಾಂಘೈನ ಸಮಾರಂಭದಲ್ಲಿ ವಿತರಿಸಲಾಯಿತು.

ಗ್ಲೋಬಲ್ ಟೈಮ್ಸ್‍ಗೆ ಮಾಹಿತಿ ನೀಡಿದ ಪಾಕಿಸ್ತಾನ ನೌಕಾಪಡೆ ಟೈಪ್ 054ಎ/ಪಿ ಯುದ್ಧನೌಕೆಗೆ ಪಿಎನ್‍ಎಸ್ ತುಗ್ರಿಲ್ ಎಂದು ಹೆಸರಿಸಲಾಗಿದೆ. ಪಿಎನ್‍ಎಸ್ ತುಗ್ರಿಲ್ ಪಾಕಿಸ್ತಾನ ನೌಕಾಪಡೆಗಾಗಿ ನಿರ್ಮಿಸಲಾಗುತ್ತಿರುವ ನಾಲ್ಕು ವಿಧದ 054 ಯುದ್ಧನೌಕೆಗಳ ಮೊದಲ ಕವಚ ಎಂದು ಪಾಕಿಸ್ತಾನ ನೌಕಾಪಡೆ ತಿಳಿಸಿದೆ.

ಹಡಗು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು ಹೆಚ್ಚು ಸಾಮಥ್ರ್ಯವನ್ನು ಹೊಂದಿದೆ. ವ್ಯಾಪಕವಾದ ಕಣ್ಗಾವಲು ಸಾಮಥ್ರ್ಯಗಳ ಜೊತೆಗೆ ಅಗಾಧವಾದ ಗಾಳಿ ಮತ್ತು ನೀರೊಳಗಿನ ಫೈರ್‍ಪವರ್ ಕೂಡ ಇದೆ. ಇದು ಆಧುನಿಕ ಸ್ವರಕ್ಷಣೆ ಸಾಮಥ್ರ್ಯದ ಜೊತೆಗೆ ಅತ್ಯಾಧುನಿಕ ಮಾದರಿಯಲ್ಲಿ ಯುದ್ಧ ನಿರ್ವಹಣೆ ಮತ್ತು ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ಹೊಂದಿದೆ.

ಟೈಪ್ 054ಎ/ಪಿ ಯುದ್ಧನೌಕೆಯು ಏಕಕಾಲದಲ್ಲಿ ಹಲವಾರು ನೌಕಾ ಯುದ್ಧ ಕಾರ್ಯಾಚರಣೆಗಳನ್ನು ಅತ್ಯಂತ ತೀವ್ರವಾದ ಬಹುವೇಗವಾಗಿ ಕಾರ್ಯಗತಗೊಳಿಸಬಲ್ಲದು ಎಂದು ಪಾಕಿಸ್ತಾನ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com