ಕೊವಾಕ್ಸಿನ್‌ ಗೆ ಬ್ರಿಟನ್‌, ಹಾಂಕಾಂಗ್ ಮಾನ್ಯತೆ, ಲಸಿಕೆ ಪಡೆದವರಿಗಿಲ್ಲ ಕ್ವಾರಂಟೈನ್ ನಿರ್ಬಂಧನೆ

ಭಾರತದಲ್ಲಿ ತಯಾರಾಗುವ ಕೊವಾಕ್ಸಿನ್‌ ಲಸಿಕೆಯನ್ನು ಮಾನ್ಯತೆ ಹೊಂದಿದ ಕೋವಿಡ್‌ ಲಸಿಕೆಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದಾಗಿ ಬ್ರಿಟನ್‌ ಮತ್ತು ಹಾಂಕಾಂಗ್ ಸರ್ಕಾರಗಳು ಹೇಳಿವೆ.
ಕೋವ್ಯಾಕ್ಸಿನ್
ಕೋವ್ಯಾಕ್ಸಿನ್

ಲಂಡನ್: ಭಾರತದಲ್ಲಿ ತಯಾರಾಗುವ ಕೊವಾಕ್ಸಿನ್‌ ಲಸಿಕೆಯನ್ನು ಮಾನ್ಯತೆ ಹೊಂದಿದ ಕೋವಿಡ್‌ ಲಸಿಕೆಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದಾಗಿ ಬ್ರಿಟನ್‌ ಮತ್ತು ಹಾಂಕಾಂಗ್ ಸರ್ಕಾರಗಳು ಹೇಳಿವೆ.

ಈ ನಿರ್ಧಾರ ಈ ತಿಂಗಳ 22 ರಂದು ಬೆಳಿಗ್ಗೆ 4 ರಿಂದ ಅಂತಾರಾಷ್ಟ್ರೀಯ ಪ್ರಯಾಣಗಳಿಗೆ ಅನ್ವಯಿಸುತ್ತದೆ ಎಂದು ಬ್ರಿಟನ್ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ ಭಾರತ್‌ ಬಯೋಟೆಕ್ ತಯಾರಿಸಿರುವ ಕೊವಾಕ್ಸಿನ್ ಲಸಿಕೆಯ ಎರಡು ಡೋಸ್ ಪಡೆದು ಬ್ರಿಟನ್‌ ಗೆ ತೆರಳಿದ ಪ್ರಯಾಣಿಕರು ಇನ್ನು ಮುಂದೆ ಐಸೋಲೇಷನ್‌ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಹೇಳಿದ್ದಾರೆ.

ಹಾಂಕಾಂಗ್ ನಲ್ಲೂ ಕೋವ್ಯಾಕ್ಸಿನ್ ಗೆ ಮಾನ್ಯತೆ
ಇನ್ನು ಬ್ರಿಟನ್ ಬೆನ್ನಲ್ಲೇ ಹಾಂಕಾಂಗ್ ಸರ್ಕಾರ ಕೂಡ ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿದ್ದು, ಅದರೊಂದಿಗೆ ಲಸಿಕೆ ಮಾನ್ಯತೆ ಸಂಬಂಧ ಭಾರತ ಸರ್ಕಾರ ನಡೆಸಿದ್ದ ನಿರಂತರ ಚರ್ಚೆ ಫಲನೀಡಿದಂತಾಗಿದೆ. ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿ ಹಾಂಕಾಂಗ್ ಸರ್ಕಾರ ಆದೇಶ ಹೊರಡಿಸಿದೆ. ಆದರೆ ನಿರ್ಬಂಧ ಸಡಿಲಿಕೆ ಸಂಬಂಧ ಇನ್ನೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಬ್ರಿಟನ್‌ ಪ್ರವೇಶಿಸುವ 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೂ ಪ್ರಯಾಣ ನಿಯಮಗಳನ್ನು ಸರ್ಕಾರ ಸರಳಗೊಳಿಸಿದೆ. ವ್ಯಾಕ್ಸಿನೇಷನ್ ಪೂರ್ಣಗೊಂಡಿದೆ ಎಂದು ಪರಿಗಣಿಸಿ ಐಸೋಲೇಷನ್‌ ನಲ್ಲಿರಿಸುವುದು ಅಗತ್ಯವಿಲ್ಲ ಎಂದು ಅವರಿಗೆ ತಿಳಿಸಲಾಗಿದೆ. ಯುಕೆಗೆ ಬಂದ ನಂತರ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದು, ಪಾಸಿಟಿವ್ ಬಂದರೆ ಮಾತ್ರ ಪಿ ಸಿ ಆರ್ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು. ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣ ಪತ್ರಗಳನ್ನು ಪರಸ್ಪರ ಗುರುತಿಸಲು ಭಾರತ 96 ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com