ತಾಂಜಾನಿಯ ಪ್ರಧಾನಿಯನ್ನು ಭೇಟಿ ಮಾಡಿದ ಸಂಜಯ್ ದತ್: ಅಲ್ಲಿನ ಚಿತ್ರೋದ್ಯಮಕ್ಕೆ ನೆರವಿನ ಭರವಸೆ
ಪ್ರಧಾನಿ ಭೇಟಿಯ ಕುರಿತು ಸಂಜಯ್ ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಸಂಜಯ್ ದತ್ ತಾಂಜಾನಿಯ ಪ್ರಧಾನಿ ಜೊತೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿದೆ.
Published: 12th November 2021 01:24 PM | Last Updated: 12th November 2021 01:46 PM | A+A A-

ಸಂಜಯ್ ದತ್ ಮತ್ತು ತಾಂಜಾನಿಯ ಪ್ರಧಾನಿ ಕಾಸಿಂ ಮಜಲಿವ
ಡೊಡೊಮ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟ ಸಂಜಯ್ ದತ್ ತಾಂಜಾನಿಯ ಪ್ರಧಾನಿ ಕಾಸಿಮ್ ಮಜಲಿವ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ನಿವಾಸದಲ್ಲಿ ನಡೆದ ಭೇಟಿಯ ಕುರಿತು ಸಂಜಯ್ ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತಕ್ಕಿಂತ ಹೆಚ್ಚಾಗಿ ವರ್ಣಭೇದ ತಾಂಡವ: ನವಾಜುದ್ದೀನ್ ಸಿದ್ದಿಕಿ ಬಾಂಬ್
ಫೋಟೋಗಳಲ್ಲಿ ಸಂಜಯ್ ದತ್ ತಾಂಜಾನಿಯ ಪ್ರಧಾನಿ ಜೊತೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಈ ಬಗ್ಗೆ ಹಂಚಿಕೊಂಡ ಸಂದೇಶದಲ್ಲಿ ತಾಂಜಾನಿಯ ಚಿತ್ರೋದ್ಯಮಕ್ಕೆ ನೆರವು ನೀಡಲು ಹಾಗೂ ಸುಂದರ ತಾಂಜಾನಿಯಾ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
It was truly an honour to have met the honorable Prime Minister Kassim Majaliwa! I'm glad to be able to support the Tanzanian film industry and also invest in the tourism of your beautiful country! Hoping to visit again soon! pic.twitter.com/AJbXS6v5lw
— Sanjay Dutt (@duttsanjay) November 11, 2021
ಇದನ್ನೂ ಓದಿ: 'ಓ ಮೈ ಗಾಡ್' ಅಕ್ಷಯ್ ಕುಮಾರ್ ಗೆ 'ಶೀಲಾ ಕಿ ಜವಾನಿ' ಕತ್ರೀನಾ ಕೈಫ್ ಕಪಾಳ ಮೋಕ್ಷ ಮಾಡಿದ್ದೇಕೆ?
ಇದೇ ವೇಳೆ ತಾಂಜಾನಿಯಾ ಅರೆ ಸ್ವಾಯತ್ತ ಪ್ರದೇಶ ಜಂಜಿಬರ್ ನ ರಾಯಭಾರಿಯಾಗಿ ಸಂಜಯ್ ದತ್ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ರಣ್ ಬೀರ್ ಜೊತೆಗೆ ರಿಲೇಷನ್ ಶಿಪ್ ಅಧಿಕೃತವಾಗಿ ಬಹಿರಂಗಪಡಿಸಿದ ಆಲಿಯಾ