The New Indian Express
ಕಾರಕಾಸ್: ವೆನಿಜುವೆಲಾದ ವಿವಾದಾತ್ಮಕ ಅಧ್ಯಕ್ಷ ನಿಕೊಲಸ್ ಮದುರೊ ಅವರ ಪಕ್ಷ ಸ್ಥಳೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. 23 ಕ್ಷೇತ್ರಗಳಲ್ಲಿ 20 ಅನ್ನು ಮದುರೊ ಪಕ್ಷ ಗೆದ್ದುಕೊಂಡಿದೆ.
ಇದನ್ನೂ ಓದಿ: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ವೆನಿಜುವೆಲದಲ್ಲಿ ಹೊಸ ಕರೆನ್ಸಿ ನೋಟು ಬಿಡುಗಡೆ
ಜಗತ್ತಿನಲ್ಲಿ ಕ್ರಿಪ್ಟೊ ಕರೆನ್ಸಿಯನ್ನು ಲೀಗಲ್ ಟೆಂಡರ್ ಅನ್ನಾಗಿ ಘೋಷಿಸಿದ ಕೆಲವೇ ದೇಶಗಳಲ್ಲಿ ವೆನಿಜುವೆಲಾ ಕೂಡಾ ಒಂದು. ಅಲ್ಲಿನ ಕರೆನ್ಸಿ ಮೌಲ್ಯವನ್ನೇ ಕಳೆದುಕೊಂಡಿದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಲಕ್ಷ ಮೌಲ್ಯದ ನೋಟುಗಳನ್ನು ಅಲ್ಲಿನ ಸರ್ಕಾರ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: ಚೀನಾ: ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಕಾಣೆಯಾಗಿದ್ದ ಟೆನಿಸ್ ಆಟಗಾರ್ತಿ ಸುರಕ್ಷಿತ: ಸರ್ಕಾರಿ ಸುದ್ದಿವಾಹಿನಿ ಮುಖ್ಯಸ್ಥ ಹೇಳಿಕೆ
ದಿನಸಿ ಸಾಮಗ್ರಿ ಬೆಲೆ ಗಗನಕ್ಕೇರಿದ್ದು ಸಣ್ಣ ವಸ್ತು ಖರೀದಿಸಲೂ ಜೇಬಲ್ಲಿ ಲಕ್ಷ ರೂ.ಗಳನ್ನು ಕೊಂಡೊಯ್ಯಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಇಂಧನ ಕೊರತೆಯನ್ನು ದೇಶ ಎದುರಿಸುತ್ತಿದೆ.
ಇದನ್ನೂ ಓದಿ: ಪಾಕ್ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್: ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು
ಒಟ್ಟಿನಲ್ಲಿ ಇಡೀ ಜಗತ್ತಿನಲ್ಲಿ ಯಾವ ದೇಶವೂ ಪಡಬಾರದ ಸಂಕಷ್ಟಕ್ಕೆ ವೆನಿಜುವೆಲಾ ತುತ್ತಾಗಿದೆ. ಹಾಗಿದ್ದೂ ಸ್ಥಳೀಯ ಚುನಾವಣೆಯಲ್ಲಿ ಮದುರೊ ಪಕ್ಷ ಜಯಭೇರಿ ಬಾರಿಸಿರುವುದು ಅಂತಾರಾಷ್ಟ್ರೀಯ ವಲಯದಲ್ಲಿ ಅಚ್ಚರಿ ಉಂಟುಮಾಡಿದೆ.
ಇದನ್ನೂ ಓದಿ: ಬ್ರಿಟನ್ ನ್ಯಾಯಾಲಯದ ಅಂಗಳದಲ್ಲಿ ಭಾರತ ಪಾಕ್ ವಿಭಜನೆಯ ಕಾಲದ ಲಾರ್ಡ್ ಮೌಂಟ್ ಬ್ಯಾಟನ್ ಡೈರಿ, ಪತ್ರಗಳು