ಬೆಂಕಿ ಜೊತೆ ಸರಸ ಬೇಡ ಎಂದಿದ್ದ ಚೀನಾಗೆ ಜೋ ಬೈಡನ್ ಭರ್ಜರಿ ಟಕ್ಕರ್; ತೈವಾನ್ ಗೆ ಅಧಿಕೃತ ಆಹ್ವಾನ

ತೈವಾನ್ ವಿಷಯವಾಗಿ ಅಮೆರಿಕ- ಚೀನಾ ನಡುವಿನ ಶೀತಲ ಸಮಯ ತೀವ್ರಗೊಳ್ಳುತ್ತಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್- ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್
ಅಮೆರಿಕ ಅಧ್ಯಕ್ಷ ಜೋ ಬೈಡನ್- ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್

ವಾಷಿಂಗ್ ಟನ್: ತೈವಾನ್ ವಿಷಯವಾಗಿ ಅಮೆರಿಕ- ಚೀನಾ ನಡುವಿನ ಶೀತಲ ಸಮಯ ತೀವ್ರಗೊಳ್ಳುತ್ತಿದೆ. ಬೆಂಕಿ ಜೊತೆ ಸರಸ ಬೇಡ ಎಂದು ಕೆಲವೇ ದಿನಗಳ ಹಿಂದೆ ಅಮೆರಿಕ-ಚೀನಾ ನಡುವೆ ನಡೆದಿದ್ದ ವರ್ಚ್ಯುಯಲ್ ಶೃಂಗಸಭೆಯಲ್ಲಿ ಷಿ ಜಿನ್ಪಿಂಗ್ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗೆ  ನೇರವಾಗಿಯೇ ಎಚ್ಚರಿಕೆ ನೀಡಿದ್ದರು. 

ಈಗ ತಾನೇನು ಕಮ್ಮಿ ಇಲ್ಲ ಎಂಬುದನ್ನು ಚೀನಾಗೆ ಸ್ಪಷ್ಟ ಸಂದೇಶದಲ್ಲಿ ತಿಳಿಸುವುದಕ್ಕಾಗಿಯೇನೋ ಎಂಬಂತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಮೆರಿಕದಿಂದ ಆಯೋಜಿಸಲಾಗಿರುವ ಪ್ರಜಾಪ್ರಭುತ್ವ ಶೃಂಗಸಭೆಗೆ 110 ದೇಶಗಳನ್ನು ಆಹ್ವಾನಿಸಿದ್ದು, ಈ ಪೈಕಿ ತೈವಾನ್ ಗೂ ಆಹ್ವಾನ ಹೋಗಿದೆ. ಆದರೆ ಚೀನಾವನ್ನು ಇದರಿಂದ ಹೊರಗಿಡಲಾಗಿದೆ. 

ಚೀನಾ ಅಷ್ಟೇ ಅಲ್ಲದೇ ರಷ್ಯಾ, ಟರ್ಕಿಗಳನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ತೈವಾನ್ ವಿಷಯವಾಗಿ ಅಮೆರಿಕ-ಚೀನಾ ಸಂಬಂಧ ಇತ್ತೀಚಿನ ದಿನಗಳಲ್ಲಿ ಹದಗೆಟ್ಟಿದೆ.

ನ್ಯಾಟೋ ಸದಸ್ಯ ರಾಷ್ಟ್ರವಾಗಿರುವ ಟರ್ಕಿಗೂ ಅಮೆರಿಕ ಆಹ್ವಾನವನ್ನು ನೀಡಿಲ್ಲ. ಭಾರತ, ಪಾಕಿಸ್ತಾನ, ಇರಾಕ್,  ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರಗಾಳಿಗೆ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳಿಗೆ ಆಹ್ವಾನ ನೀಡಲಾಗಿಲ್ಲ.

ಚೀನಾ ತೈವಾನ್ ನ್ನು ತನ್ನದೇ ಪ್ರಾಂತ್ಯ ಎಂದು ಹೇಳಿಕೊಳ್ಳುತ್ತಿದ್ದರೆ, ಒಂದೇ ಚೀನಾ ನೀತಿಯನ್ನು ಕಡೆಗಣಿಸಿ ತೈವಾನ್ ನ್ನು ಪ್ರತ್ಯೇಕ ರಾಷ್ಟ್ರವಾಗಿ ಅಮೆರಿಕ ಗುರುತಿಸಿ ಆಹ್ವಾನ ನೀಡಿರುವುದು ಚೀನಾಗೆ ತೀವ್ರ ಮುಜುಗರ ಉಂಟುಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com