ಕೋವಿಡ್ ಸಂಕಷ್ಟ ಸಮಯದಲ್ಲಿ ಪರಸ್ಪರ ಸಹಕಾರ ಭವಿಷ್ಯದಲ್ಲಿ ಭಾರತ-ಆಸಿಯಾನ್ ಸಂಬಂಧವನ್ನು ಬಲಪಡಿಸುತ್ತದೆ: ಪ್ರಧಾನಿ ಮೋದಿ

ಆಸಿಯಾನ್‌ ರಾಷ್ಟ್ರಗಳ ಏಕತೆ ಮತ್ತು ಕೇಂದ್ರೀಯತೆಯು ಭಾರತಕ್ಕೆ ಯಾವಾಗಲೂ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಆಸಿಯಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
ಆಸಿಯಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

ನವದೆಹಲಿ: ಆಸಿಯಾನ್‌ ರಾಷ್ಟ್ರಗಳ ಏಕತೆ ಮತ್ತು ಕೇಂದ್ರೀಯತೆಯು ಭಾರತಕ್ಕೆ ಯಾವಾಗಲೂ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಭಾರತ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ 10 ಸದಸ್ಯರ ಒಕ್ಕೂಟದ ನಡುವಿನ ಆಳವಾದ ಐತಿಹಾಸಿಕ ಸಂಬಂಧಗಳ ಬಗ್ಗೆ ಒತ್ತಿ ಹೇಳಿದ ಪ್ರಧಾನಿ, ಆಸಿಯಾನ್ ಮತ್ತು ಭಾರತವು 30 ವರ್ಷಗಳ ಪಾಲುದಾರಿಕೆ ಪೂರ್ಣಗೊಳಿಸುವಿಕೆ ಮತ್ತು ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುವುದರೊಂದಿಗೆ 2022 ಅನ್ನು ಆಸಿಯಾನ್-ಭಾರತ ಸ್ನೇಹ ವರ್ಷವಾಗಿ ಆಚರಿಸುವ ಕುರಿತು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಭಾರತ-ಆಸಿಯಾನ್ ಸಹಭಾಗಿತ್ವ ಮುಂದಿನ ವರ್ಷಕ್ಕೆ 30 ವರ್ಷಗಳನ್ನು ಪೂರೈಸುತ್ತಿದ್ದು, ಮಹತ್ವದ ಮೈಲಿಗಲ್ಲನ್ನು 'ಆಸಿಯಾನ್-ಭಾರತ ಸ್ನೇಹ ವರ್ಷ' ಎಂದು ಆಚರಿಸಲಾಗುವುದು. ಕೋವಿಡ್ ಸಂಕಷ್ಟ ಸಮಯದಲ್ಲಿ ಪರಸ್ಪರ ಸಹಕಾರ ಭಾರತ-ಆಸಿಯಾನ್ ಸಂಬಂಧಗಳನ್ನು ಭವಿಷ್ಯದಲ್ಲಿ ಮತ್ತಷ್ಟು ಬಲವರ್ಧನೆ ಮಾಡುತ್ತದೆ ಎಂದರು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಜಗತ್ತು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿತ್ತು, ಆದರೆ ಆಸಿಯಾನ್ ಮತ್ತು ಭಾರತದ ನಡುವಿನ ಸಹಕಾರ ಮತ್ತು ಸ್ನೇಹವು ಅತ್ಯುತ್ತಮವಾಗಿತ್ತು. ಈ ಸಮಯದಲ್ಲಿ ಎರಡು ಕಡೆಯ ಸಹಕಾರ ಮತ್ತು ಸೌಹಾರ್ದತೆಯು ಭವಿಷ್ಯದ ಸಂಬಂಧಗಳನ್ನು ನಿರ್ಮಿಸಲು ಮತ್ತು ಬಲಪಡಿಸಲು ತಳಹದಿಯಾಗಿ ಹೊರಹೊಮ್ಮಿದೆ ಎಂದರು.

“ಭಾರತ ಮತ್ತು ಆಸಿಯಾನ್ ಆಳವಾದ ಐತಿಹಾಸಿಕ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ. ಇದು ನಮ್ಮ ಮೌಲ್ಯಗಳು, ನಮ್ಮ ಸಂಸ್ಕೃತಿ, ಸಂಪ್ರದಾಯಗಳು, ಭಾಷೆ ಮತ್ತು ಆಹಾರ ಪದ್ಧತಿಗಳಲ್ಲಿನ ಹೋಲಿಕೆಯಲ್ಲಿ ಗೋಚರಿಸುತ್ತದೆ. ಹೀಗಾಗಿಯೇ ಆಸಿಯಾನ್‌ನ ಏಕತೆ ಮತ್ತು ಕೇಂದ್ರೀಕರಣವು ಯಾವಾಗಲೂ ಭಾರತಕ್ಕೆ ಪ್ರಮುಖವಾದುದು”ಎಂದು ತಿಳಿಸಿದರು.

ಭಾರತದ ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ ಮತ್ತು ಇಂಡೋ-ಪೆಸಿಫಿಕ್‌ಗಾಗಿ ಆಸಿಯಾನ್‌ನ ಔಟ್‌ಲುಕ್ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನಮ್ಮ ಹಂಚಿಕೆಯ ದೃಷ್ಟಿ ಮತ್ತು ಸಹಕಾರದ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

18ನೇ ಆಸಿಯಾನ್-ಭಾರತ ಶೃಂಗಸಭೆಯು ಪ್ರಧಾನ ಮಂತ್ರಿಗಳು ಭಾಗವಹಿಸುವ ಒಂಬತ್ತನೇ ಆಸಿಯಾನ್-ಭಾರತ ಶೃಂಗಸಭೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com