ಇರಾಕ್ ನಲ್ಲಿ ಐಸಿಸ್ ಉಗ್ರರ ಭೀಕರ ದಾಳಿ; 13 ಮಂದಿ ಪೊಲೀಸರ ಸಾವು, ಹಲವರಿಗೆ ಗಾಯ

ಇರಾಕ್ ನಲ್ಲಿ ಐಸಿಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಉಗ್ರರ ದಾಳಿಯಿಂದಾಗಿ ಕನಿಷ್ಛ 13 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇಸಿಸ್ ಉಗ್ರರ ದಾಳಿ
ಇಸಿಸ್ ಉಗ್ರರ ದಾಳಿ

ಬಾಗ್ದಾದ್: ಇರಾಕ್ ನಲ್ಲಿ ಐಸಿಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಉಗ್ರರ ದಾಳಿಯಿಂದಾಗಿ ಕನಿಷ್ಛ 13 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದ್ದು, 'ಇರಾಕ್​​ನ ಉತ್ತರದ ಪ್ರದೇಶ ಕಿರ್ಕುಕ್​ ಸಮೀಪದ ಚೆಕ್​ಪಾಯಿಂಟ್​ ಮೇಲೆ ಐಸಿಸ್​ ಉಗ್ರರು (ISIS Group) ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಮಾರು 13 ಪೊಲೀಸರು ಹತರಾಗಿದ್ದಾರೆ ಎನ್ನಲಾಗಿದೆ.

ಇದೇ ವಿಚಾರವಾಗಿ ಇರಾಕ್​ನ ವೈದ್ಯಕೀಯ ಮತ್ತು ಭದ್ರತಾ ಮೂಲಗಳು ಮಾಹಿತಿ ನೀಡಿದ್ದು, ಕಿರ್ಕುಕ್​​ ನಗರದ ದಕ್ಷಿಣ ಭಾಗದಲ್ಲಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 13 ಮಂದಿ ಪೊಲೀಸರು ಹತರಾಗಿ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿದೆ.

ಇರಾಕ್​ ಸೇನೆ ಮತ್ತು ಪೊಲೀಸರ ಮೇಲೆ ಸದಾ ಜಿಹಾದಿಗಳ ಗುಂಪು ದಾಳಿ ನಡೆಸುತ್ತಿರುತ್ತದೆ. ಆದರೆ ಈ ದಾಳಿ, ಪ್ರಸಕ್ತ ವರ್ಷದ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ದಾಳಿಯಾಗಿದೆ. ‘ಫೆಡರಲ್‌ ಪೊಲೀಸ್‌ ಚೆಕ್‌ ಪಾಯಿಂಟ್‌ ಅನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್‌ ಸ್ಟೇಟ್‌ನ ಉಗ್ರರು ದಾಳಿ ನಡೆಸಿದ್ದಾರೆ. ಆದರೆ, ಈ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತಿಲ್ಲ ಎಂದು ಇರಾಕ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com