ಪಾಕ್ ತನ್ನ ನೆರೆರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಬಯಸುತ್ತೆ, ಆದರೆ ಭಾರತ ಇದನ್ನು ದೌರ್ಬಲ್ಯವೆಂದು ಪರಿಗಣಿಸಿದೆ: ಅಧ್ಯಕ್ಷ ಅಲ್ವಿ

ಪಾಕಿಸ್ತಾನ ಯಾವಾಗಲೂ ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿತ್ತು. ಆದರೆ ಭಾರತ ಮಾತ್ರ ನಮ್ಮ ಉದ್ದೇಶವನ್ನು ಒಂದು ದೌರ್ಬಲ್ಯವೆಂದು ಪರಿಗಣಿಸಿದೆ ಎಂದು ಅಧ್ಯಕ್ಷ ಆರಿಫ್ ಅಲ್ವಿ ಹೇಳಿದ್ದಾರೆ. 
ಆರಿಫ್ ಅಲ್ವಿ
ಆರಿಫ್ ಅಲ್ವಿ

ಇಸ್ಲಾಮಾಬಾದ್: ಪಾಕಿಸ್ತಾನ ಯಾವಾಗಲೂ ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿತ್ತು. ಆದರೆ ಭಾರತ ಮಾತ್ರ ನಮ್ಮ ಉದ್ದೇಶವನ್ನು ಒಂದು ದೌರ್ಬಲ್ಯವೆಂದು ಪರಿಗಣಿಸಿದೆ ಎಂದು ಅಧ್ಯಕ್ಷ ಆರಿಫ್ ಅಲ್ವಿ ಹೇಳಿದ್ದಾರೆ. 

ಇದೇ ವೇಳೆ ಬೀಜಿಂಗ್ ಜೊತೆ ಇಸ್ಲಾಮಾಬಾದ್ ನ ಸಂಬಂಧವನ್ನು ಹಾಳುಗೆಡವಲು ಭಾರತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಅಸೆಂಬ್ಲಿಯ ನಾಲ್ಕನೇ ಸಂಸತ್ ವರ್ಷದ ಆರಂಭದಲ್ಲಿ ಉಭಯ ಸದನಗಳ ಸಂಸತ್ತು, ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅಲ್ವಿ ಈ ಹೇಳಿಕೆ ನೀಡಿದ್ದಾರೆ. 

ಪಾಕಿಸ್ತಾನವು ಯಾವಾಗಲೂ ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿತ್ತು. ಆದರೆ ಭಾರತವು ಈ ಆಸೆಯನ್ನು ಒಂದು ದೌರ್ಬಲ್ಯವೆಂದು ಪರಿಗಣಿಸಿದೆ. ಇದೇ ವೇಳೆ ಅಲ್ವಿ 2019ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನಾ ಶಿಬಿರದ ಮೇಲೆ ಭಾರತೀಯ ವಾಯುದಾಳಿಯನ್ನು ನೆನಪಿಸಿಕೊಂಡರು.

ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತದ ಯುದ್ಧ ವಿಮಾನಗಳು ಫೆಬ್ರವರಿ 26, 2019ರಂದು ಪಾಕಿಸ್ತಾನದೊಳಗೆ ನುಗ್ಗಿ ಜೈಶ್-ಎ-ಮೊಹಮ್ಮದ್(ಜೆಇಎಂ) ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದವು.

ಭಯೋತ್ಪಾದನೆ, ಹಗೆತನ ಮತ್ತು ಹಿಂಸೆಯಿಲ್ಲದ ಪರಿಸರದಲ್ಲಿ ಇಸ್ಲಾಮಾಬಾದ್‌ನೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ ಎಂದು ಭಾರತವು ಪಾಕಿಸ್ತಾನಕ್ಕೆ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com