ನ್ಯೂಯಾರ್ಕ್: ದಶಕಗಳಿಂದ ಉಗ್ರಗಾಮಿಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಚಾಕು ಇರಿತವಾಗಿದೆ. ನಿಗದಿಯಾಗಿದ್ದ ಉಪನ್ಯಾಸ ಕಾರ್ಯಕ್ರಮಕ್ಕೂ ಮುಂಚೆ ಚಾಕು ಇರಿತವಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶಂಕಿತ ವ್ಯಕ್ತಿ ಚೌಟಕ್ವಾ ಸಂಸ್ಥೆಯ ವೇದಿಕೆಗೆ ನುಗ್ಗಿ ರಶ್ದಿ ಮತ್ತು ಸಂದರ್ಶಕರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ರಶ್ದಿ ಕುತ್ತಿಗೆಗೆ ಚಾಕು ಇರಿಯಲಾಗಿದ್ದು, ಅವರನ್ನು ಕೂಡಲೇ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತು.
ಅಧಿಕಾರಿಗಳ ಪ್ರಕಾರ ಸಂದರ್ಶಕರ ತಲೆಗೆ ಸಣ್ಣ ಗಾಯವಾಗಿದೆ. ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದ್ದ ರಾಜ್ಯದ ಯೋಧರು ಶಂಕಿತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆತನ ಹೆಸರನ್ನು ಬಿಡುಗಡೆ ಮಾಡಿಲ್ಲ. ರಶ್ದಿಯವರ ಮೇಲಿನ ದಾಳಿಯನ್ನು ವೀಕ್ಷಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿಗಾರರೊಬ್ಬರು ಹೇಳಿದ್ದಾರೆ.
Advertisement