ಚೀನಾ ಯುದ್ಧ ವಿಮಾನ
ಚೀನಾ ಯುದ್ಧ ವಿಮಾನ

ಚೀನಾದ ಐದು ವಿಮಾನಗಳು ಜಲಸಂಧಿಯ ಮಧ್ಯದ ರೇಖೆ ದಾಟಿವೆ: ತೈವಾನ್

ತೈವಾನ್ ಸುತ್ತಮುತ್ತ ಚೀನಾದ ಹನ್ನೆರಡು ವಿಮಾನಗಳು ಮತ್ತು ಐದು ಚೀನೀ ಹಡಗುಗಳು ಕಾರ್ಯನಿರ್ವಹಿಸುತ್ತಿದ್ದು ಐದು ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. 

ತೈಪೆ: ತೈವಾನ್ ಸುತ್ತಮುತ್ತ ಚೀನಾದ ಹನ್ನೆರಡು ವಿಮಾನಗಳು ಮತ್ತು ಐದು ಚೀನೀ ಹಡಗುಗಳು ಕಾರ್ಯನಿರ್ವಹಿಸುತ್ತಿದ್ದು ಐದು ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. 

ಚೀನಾದ ಬೆದರಿಕೆಗಳನ್ನು ಧಿಕ್ಕರಿಸಿ ಅಮೆರಿಕಾ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಭೇಟಿ ನೀಡಿದ ನಂತರ ಚೀನಾ ಸುಮಾರು ಎರಡು ವಾರಗಳಿಂದ ತೈವಾನ್ ಸುತ್ತಲಿನ ಮಿಲಿಟರಿ ವ್ಯಾಯಾಮಗಳನ್ನು ನಡೆಸುತ್ತಿದೆ. ಚೀನಾದೊಂದಿಗೆ ದೃಢವಾದ ಆರ್ಥಿಕ ಸಂಬಂಧಗಳನ್ನು ಉಳಿಸಿಕೊಂಡು ವಾಸ್ತವಿಕ ಸ್ವಾತಂತ್ರ್ಯದ ಯಥಾಸ್ಥಿತಿಗೆ ಅಗಾಧವಾಗಿ ಒಲವು ಹೊಂದಿರುವ ತೈವಾನ್‌ನ 23 ಮಿಲಿಯನ್‌ಗಿಂತಲೂ ಹೆಚ್ಚು ಜನರಲ್ಲಿ ಈ ಕಸರತ್ತು ಕಡಿಮೆ ಪ್ರಭಾವವನ್ನು ಬೀರಿವೆ.

ತೈವಾನ್ ವಿರುದ್ಧದ ಚೀನಾದ ಬೆದರಿಕೆಗಳನ್ನು ತನ್ನ ನೆರೆಯ ರಷ್ಯಾದ ಆಕ್ರಮಣಕ್ಕೆ ಹೋಲಿಸಲಾಗಿದೆ. ಫೆಬ್ರವರಿಯಲ್ಲಿ ಮಾಸ್ಕೋ ಪಡೆಗಳನ್ನು ಉಕ್ರೇನ್ ಗೆ ನುಗ್ಗಿಸುವ ಮೊದಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬೀಜಿಂಗ್‌ನಲ್ಲಿ ಭೇಟಿಯಾಗಿದ್ದು, ಅಲ್ಲಿ ಅವರು ತಮ್ಮ ಸಂಬಂಧಕ್ಕೆ 'ಮಿತಿಗಳಿಲ್ಲ' ಎಂದು ಘೋಷಿಸಿದರು. ಅಲ್ಲದೆ ತೈವಾನ್‌ಗೆ ಚೀನಾದ ಹಕ್ಕನ್ನು ರಷ್ಯಾ ಬೆಂಬಲಿಸಿತು.

Related Stories

No stories found.

Advertisement

X
Kannada Prabha
www.kannadaprabha.com