ರಷ್ಯಾ-ಉಕ್ರೇನ್ ಸಂಘರ್ಷ: ಕ್ಷಿಪಣಿ ದಾಳಿಯ ಬಳಿಕ ಉಕ್ರೇನ್‌ನ 2ನೇ ದೊಡ್ಡ ನಗರದಲ್ಲಿ ವಿದ್ಯುತ್ ಕಡಿತ, ಮೂವರು ಸಾವು

ಉಕ್ರೇನ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡ ರಷ್ಯಾದ ಕ್ಷಿಪಣಿ ದಾಳಿಯಿಂದಾಗಿ, ಯುದ್ಧದಿಂದ ಹಾನಿಗೊಳಗಾಗಿರುವ ರಾಷ್ಟ್ರದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ಗಂಟೆಗಳ ಕಾಲ ವಿದ್ಯುತ್ ಇಲ್ಲದಂತಾಯಿತು.
ಕಟ್ಟಡಕ್ಕೆ ಅಪ್ಪಳಿಸಿದ ರಷ್ಯಾದ ಕ್ಷಿಪಣಿ ದಾಳಿ
ಕಟ್ಟಡಕ್ಕೆ ಅಪ್ಪಳಿಸಿದ ರಷ್ಯಾದ ಕ್ಷಿಪಣಿ ದಾಳಿ

ಕೀವ್: ಉಕ್ರೇನ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡ ರಷ್ಯಾದ ಕ್ಷಿಪಣಿ ದಾಳಿಯಿಂದಾಗಿ, ಯುದ್ಧದಿಂದ ಹಾನಿಗೊಳಗಾಗಿರುವ ರಾಷ್ಟ್ರದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ಗಂಟೆಗಳ ಕಾಲ ವಿದ್ಯುತ್ ಇಲ್ಲದಂತಾಯಿತು.

ಸ್ಥಳೀಯ ಅಧಿಕಾರಿಗಳ ಪ್ರಕಾರ, ರಷ್ಯಾದ ಪಡೆಗಳು ಶುಕ್ರವಾರ 76 ಕ್ಷಿಪಣಿಗಳನ್ನು ಹಾರಿಸಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದರಿಂದ ಕನಿಷ್ಠ ಒಂಬತ್ತು ವಿದ್ಯುತ್ ಸೌಲಭ್ಯಗಳಿಗೆ ಹಾನಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಶುಕ್ರವಾರ ಸಂಜೆ ಖಾರ್ಕಿವ್‌ನ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಒಲೆಗ್ ಸಿನೆಗುಬೊವ್, ಶೇ 55ರಷ್ಟು ನಗರ ನಿವಾಸಿಗಳು ಮತ್ತು ಶೇ 85ರಷ್ಟು ಈಶಾನ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಿದ್ಯುತ್ ಸರಬರಾಜುಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಹೇಳಿದರು.

ಇಂಧನ ವಲಯದ ನೌಕರರು ಮಧ್ಯರಾತ್ರಿಯ ವೇಳೆಗೆ ಸಂಪೂರ್ಣ ವಿದ್ಯುತ್ ಪುನಃಸ್ಥಾಪಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಆದಾಗ್ಯೂ, ಉಕ್ರೇನ್‌ನ ಪವರ್ ಗ್ರಿಡ್ ಆಪರೇಟರ್ ಉಕ್ರೆನೆರ್ಗೊ, ರಷ್ಯಾದ ಕ್ಷಿಪಣಿ ದಾಳಿಯಿಂದಾಗಿರುವ ಹಾನಿಯ ಪ್ರಮಾಣವು ವಿದ್ಯುತ್ ಸರಬರಾಜುಗಳನ್ನು ಪುನಃಸ್ಥಾಪಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.

ಇತ್ತೀಚಿನ ದಾಳಿಗಳಿಂದಾಗಿ ಇಂಧನ ವ್ಯವಸ್ಥೆಯು ಅದರ ಅರ್ಥಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಕಳೆದುಕೊಂಡಿದೆ. ನಿರ್ಣಾಯಕ ಮೂಲಸೌಕರ್ಯಗಳಾದ ಆಸ್ಪತ್ರೆಗಳು, ನೀರು ಸರಬರಾಜು, ಶಾಖ ಪೂರೈಕೆ, ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ತುರ್ತು ಸೇವೆಗಳು ವಿದ್ಯುತ್ ಸರಬರಾಜುಗಳನ್ನು ಪುನಃಸ್ಥಾಪಿಸಲು ಕಾರ್ಯನಿರ್ವಹಿಸುತ್ತಿವೆ. ಆದರೆ, ಪರಿಸ್ಥಿತಿ 'ಇನ್ನೂ ಕಷ್ಟಕರವಾಗಿದೆ' ಎಂದು ರಕ್ಷಣಾ ಸಚಿವಾಲಯದ ಸಲಹೆಗಾರ ಯೂರಿ ಸಾಕ್ ಬಿಬಿಸಿಗೆ ತಿಳಿಸಿದ್ದಾರೆ.

ಶುಕ್ರವಾರದ ಕ್ಷಿಪಣಿ ದಾಳಿಗಳು ಕ್ರೈವಿ ರಿಹ್‌ನಲ್ಲಿ ವಸತಿ ಕಟ್ಟಡವೊಂದಕ್ಕೆ ಅಪ್ಪಳಿಸಿ ಮೂರು ಜನರು ಮೃತಪಟ್ಟಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ. ಖೆರ್ಸನ್ ನಗರದಲ್ಲೂ ಒಬ್ಬರು ಸಾವಿಗೀಡಾಗಿದ್ದಾರೆ.

ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಮೆಟ್ರೋ ಸೇವೆಗಳನ್ನು ನಿಲ್ಲಿಸಲಾಗಿದೆ.

ಅವರು ಹಾರಿಸಿದ 76 ಕ್ಷಿಪಣಿಗಳಲ್ಲಿ 60 ಕ್ಷಿಪಣಿಗಳನ್ನು ವಾಯು ರಕ್ಷಣಾ ಪಡೆಗಳು ತಡೆಹಿಡಿದಿದೆ. ಅವುಗಳಲ್ಲಿ ಹೆಚ್ಚಿನವು ಕ್ರೂಸ್ ಕ್ಷಿಪಣಿಗಳಾಗಿವೆ ಎಂದು ಉಕ್ರೇನ್‌ನ ಕಮಾಂಡರ್-ಇನ್-ಚೀಫ್ ಜನರಲ್ ವ್ಯಾಲೆರಿ ಜಲುಜ್ನಿ ತಿಳಿಸಿದ್ದಾರೆ.

ರಾಜಧಾನಿಯೊಂದರಲ್ಲೇ ಸುಮಾರು 40 ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಕೀವ್ ನಗರದ ಅಧಿಕಾರಿಗಳು ಹೇಳಿದ್ದಾರೆ. ಫೆಬ್ರವರಿ 24 ರಂದು ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಇದು ಅತ್ಯಧಿಕ ಸಂಖ್ಯೆಯಲ್ಲಿದೆ.

ಈ ಪೈಕಿ 37 ಕ್ಷಿಪಣಿಗಳನ್ನು ವಾಯು ರಕ್ಷಣೆಯಿಂದ ಕೆಳಗಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ನಡೆದ ದಾಳಿಯಿಂದಾಗಿ ರಷ್ಯಾದ ಗಡಿಯಲ್ಲಿರುವ ಈಶಾನ್ಯ ಸುಮಿ ಪ್ರದೇಶದಲ್ಲಿ ಮತ್ತು ಕೇಂದ್ರ ನಗರಗಳಾದ ಪೋಲ್ಟವಾ ಮತ್ತು ಕ್ರೆಮೆನ್‌ಚುಕ್‌ನಲ್ಲಿ ವಿದ್ಯುತ್ ಕಡಿತಕ್ಕೆ ಕಾರಣವಾದವು. ದಕ್ಷಿಣದ ಝಪೊರಿಝಿಯಾದಲ್ಲಿ ಹದಿನೈದು ರಾಕೆಟ್‌ಗಳನ್ನು ಹಾರಿಸಲಾಯಿತು ಎಂದು ವರದಿಯಾಗಿದೆ.

ಕ್ಷಿಪಣಿ ದಾಳಿ ಆರಂಭಿಸಿದ ಅಕ್ಟೋಬರ್ 10 ರಿಂದ ರಷ್ಯಾ 1,000ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಇರಾನ್ ನಿರ್ಮಿತ ದಾಳಿ ಡ್ರೋನ್‌ಗಳನ್ನು ಉಡಾಯಿಸಿದೆ. ಆದರೂ, ಅವುಗಳಲ್ಲಿ ಹೆಚ್ಚಿನವು ವಾಯು ರಕ್ಷಣೆಯಿಂದ ಪ್ರತಿಬಂಧಿಸಲ್ಪಟ್ಟಿವೆ. ನವೆಂಬರ್ ಮಧ್ಯದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಒಳಗೊಂಡಿದ್ದ ಅತಿದೊಡ್ಡ ಬ್ಯಾರೇಜ್ ಅನ್ನು ಉಡಾಯಿಸಲಾಗಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com