ಹೆಚ್ಚುತ್ತಿರುವ ಚೀನಾ ಬೆದರಿಕೆ ನಡುವೆ ತೈವಾನ್ ಗೆ ಟ್ಯಾಂಕ್ ನಿಗ್ರಹ ಸಿಸ್ಟಮ್ ಮಾರಾಟ ಮಾಡಲು ಅಮೆರಿಕ ಅಸ್ತು
ವಾಷಿಂಗ್ಟನ್: ಚೀನಾದಿಂದ ಹೆಚ್ಚುತ್ತಿರುವ ಸೇನಾ ಬೆದರಿಕೆಯ ಮಧ್ಯೆ ತೈವಾನ್‌ಗೆ ಟ್ಯಾಂಕ್ ನಿಗ್ರಹ ಮೈನ್-ಲೇಯಿಂಗ್ ಸಿಸ್ಟಮ್ ಅನ್ನು ಮಾರಾಟ ಮಾಡಲು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಅನುಮೋದನೆ ನೀಡಿದೆ.
ಈ ಆ್ಯಂಟಿ- ಟ್ಯಾಂಕ್ ಸಿಸ್ಟಮ್ ಮತ್ತು ಇತರ ಎಲ್ಲಾ ಸಂಬಂಧಿತ ಉಪಕರಣಗಳಿಗೆ ಅಂದಾಜು 180 ಮಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಇಲಾಖೆ ಬುಧವಾರ ಹೇಳಿದೆ.
ಇದು ಗ್ರೌಂಡ್ ವೆಹಿಕಲ್ ಅಥವಾ ಹೆಲಿಕಾಪ್ಟರ್‌ನಿಂದ ಟ್ಯಾಂಕ್ ಅನ್ನು ಮತ್ತು ಸಿಬ್ಬಂದಿ ನಿಗ್ರಹ ಗಣಿಗಳನ್ನು ಚದುರುವ ಸಾಮರ್ಥ್ಯವನ್ನು ಹೊಂದಿದೆ.
ಕಳೆದ ವಾರಾಂತ್ಯದ ಮಿಲಿಟರಿ ತಾಲೀಮಿನಲ್ಲಿ ಚೀನಾ 71 ಯುದ್ಧ ವಿಮಾನಗಳನ್ನು ಮತ್ತು ಏಳು ಹಡಗುಗಳನ್ನು ಹಾಗೂ ಹಲವು ಫೈಟರ್ ಜೆಟ್ ಗಳನ್ನು ತೈವಾನ್ ಸುತ್ತ ನಿಯೋಜಿಸಿದೆ ತೈವಾನ್ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿತ್ತು.
ಇತ್ತೀಚಿನ ವರ್ಷಗಳಲ್ಲಿ ತೈವಾನ್‌ನ ಮೇಲೆ ಚೀನಾದ ಮಿಲಿಟರಿ ಆಕ್ರಮಣ ತೀವ್ರಗೊಂಡಿದೆ, ದ್ವೀಪ ರಾಷ್ಟ್ರ ಅಂತಿಮವಾಗಿ ಚೀನಿ ಆಡಳಿತವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ