ಮಂಕಿಪಾಕ್ಸ್ ಹರಡುವುದನ್ನು ತಪ್ಪಿಸಬೇಕೇ? ಹಾಗಿದ್ದರೆ ಹೆಚ್ಚು ಪಾರ್ಟ್ನರ್ ಗಳ ಜೊತೆ ಸೆಕ್ಸ್ ಬೇಡ: WHO

ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ಭೀತಿ ಹುಟ್ಟಿಸಿರುವ ಮಂಕಿಪಾಕ್ಸ್ ಸೋಂಕು ಪ್ರಸರಣವಾಗದಿರಲು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ಸಲಹೆಯೊಂದನ್ನು ನೀಡಿದ್ದು, ಮಂಕಿಪಾಕ್ಸ್ ತಪ್ಪಿಸಲು ಲೈಂಗಿಕ ಪಾಲುದಾರರನ್ನು ಕಡಿಮೆ ಮಾಡಿ ಎಂದು ಹೇಳಿದೆ.
ಮಂಕಿಪಾಕ್ಸ್
ಮಂಕಿಪಾಕ್ಸ್
Updated on

ಜಿನೀವಾ: ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ಭೀತಿ ಹುಟ್ಟಿಸಿರುವ ಮಂಕಿಪಾಕ್ಸ್ ಸೋಂಕು ಪ್ರಸರಣವಾಗದಿರಲು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ಸಲಹೆಯೊಂದನ್ನು ನೀಡಿದ್ದು, ಮಂಕಿಪಾಕ್ಸ್ ತಪ್ಪಿಸಲು ಲೈಂಗಿಕ ಪಾಲುದಾರರನ್ನು ಕಡಿಮೆ ಮಾಡಿ ಎಂದು ಹೇಳಿದೆ.

ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯು ಅನೇಕ ದೇಶಗಳಲ್ಲಿ ಉಲ್ಬಣಗೊಳ್ಳುತ್ತಿರುವ ಮಂಕಿಪಾಕ್ಸೋ ಸೋಂಕು ಹಿನ್ನಲೆಯಲ್ಲಿ ಏಕಾಏಕಿ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದ ನಂತರ ಮಂಕಿಪಾಕ್ಸ್‌ಗೆ ಒಳಗಾಗುವ ಅಪಾಯದಲ್ಲಿರುವ ಪುರುಷರಿಗೆ ತಮ್ಮ ಲೈಂಗಿಕ ಪಾಲುದಾರರನ್ನು "ಸದ್ಯಕ್ಕೆ" ಕಡಿಮೆ ಮಾಡುವಂತೆ ಸಲಹೆ ನೀಡಿದೆ.

ಮೇ ತಿಂಗಳಲ್ಲಿ ಏಕಾಏಕಿ ಕಾಣಿಸಿಕೊಂಡ ನಂತರ ಪತ್ತೆಯಾದ 98% ಮಂಕಿಪಾಕ್ಸ್ ಪ್ರಕರಣಗಳು ಸಲಿಂಗಕಾಮಿ, ದ್ವಿಲಿಂಗಿ ಮತ್ತು ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಇತರ ಪುರುಷರಲ್ಲಿವೆ. ಅಪಾಯದಲ್ಲಿರುವವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕ್ರಮಕೈಗೊಳ್ಳಬೇಕು ಎಂದು WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

'ಪುರುಷರೊಂದಿಗೆ ಸಂಭೋಗಿಸುವ ಪುರುಷರು ನಿಮಗಾಗಿ ಮತ್ತು ಇತರರಿಗಾಗಿ ಸುರಕ್ಷಿತ ಆಯ್ಕೆಗಳನ್ನು ಮಾಡುವುದು ಸೂಕ್ತ. ಸದ್ಯಕ್ಕೆ ನಿಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡಿ ಎಂದು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರು ತಮ್ಮ ಲೈಂಗಿಕ ಪಾಲುದಾರರನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿಲ್ಲ, ಅವರು ಮಂಕಿಪಾಕ್ಸ್ ನಿಂದ ಆಗಬಹುದಾದ ದದ್ದು ಹೊಂದಿರುವ ಜನರೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕವನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

WHO ಅಧಿಕಾರಿಗಳು ಮಂಕಿಪಾಕ್ಸ್ ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿರುವ ಯಾರಿಗಾದರೂ ಅಥವಾ ಅವರ ಕಲುಷಿತ ಬಟ್ಟೆ ಅಥವಾ ಬೆಡ್‌ಶೀಟ್‌ಗಳಿಗೆ ಸೋಂಕು ತಗುಲಿಸಬಹುದು. ಮಕ್ಕಳು ಅಥವಾ ಗರ್ಭಿಣಿಯರಂತಹ ದುರ್ಬಲ ಜನಸಂಖ್ಯೆಯಲ್ಲಿ ರೋಗವು ಹೆಚ್ಚು ತೀವ್ರವಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಇಲ್ಲಿಯವರೆಗೆ, 75 ಕ್ಕೂ ಹೆಚ್ಚು ದೇಶಗಳಲ್ಲಿ 19,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ; ಆಫ್ರಿಕಾದಲ್ಲಿ ಮಾತ್ರ ಸಾವುಗಳು ವರದಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com