ಅಂತಾರಾಷ್ಟ್ರೀಯ ಅಂಹಿಸೆ ದಿನಾಚರಣೆ: ವಿಶ್ವಸಂಸ್ಥೆಯಲ್ಲಿ ಗಾಂಧಿಯ ಹೊಲೊಗ್ರಾಮ್ ಪ್ರತ್ಯಕ್ಷ, ಶಿಕ್ಷಣದ ಕುರಿತು ಸಂದೇಶ

ನಾಳೆ ಅಕ್ಟೋಬರ್.2, ಗಾಂಧಿ ಜಯಂತಿ. ಈ ಹಿನ್ನೆಲೆಯಲ್ಲಿ ಆಚರಣೆ ಮಾಡಲಾಗುವ ಅಂತಾರಾಷ್ಟ್ರೀಯ ಅಂಹಿಸೆ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. 
ವಿಶ್ವಸಂಸ್ಥೆ ಕಾರ್ಯಕ್ರಮದಲ್ಲಿ  ಗಾಂಧಿ ಅವರ ಜೀವಂತ ಪ್ರಮಾಣದ ಹೊಲೊಗ್ರಾಮ್
ವಿಶ್ವಸಂಸ್ಥೆ ಕಾರ್ಯಕ್ರಮದಲ್ಲಿ ಗಾಂಧಿ ಅವರ ಜೀವಂತ ಪ್ರಮಾಣದ ಹೊಲೊಗ್ರಾಮ್
Updated on

ವಿಶ್ವಸಂಸ್ಥೆ: ನಾಳೆ ಅಕ್ಟೋಬರ್.2, ಗಾಂಧಿ ಜಯಂತಿ. ಈ ಹಿನ್ನೆಲೆಯಲ್ಲಿ ಆಚರಣೆ ಮಾಡಲಾಗುವ ಅಂತಾರಾಷ್ಟ್ರೀಯ ಅಂಹಿಸೆ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. 

ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಮಹಾತ್ಮಾ ಗಾಂಧಿ ಪ್ರತ್ಯಕ್ಷವಾಗಿದ್ದರು!! 

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್ ಹಾಗೂ ಯುನೆಸ್ಕೋದ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಮಹಾತ್ಮಾ ಗಾಂಧಿ ಶಿಕ್ಷಣ ಸಂಸ್ಥೆ (MGIEP) ನಿಂದ ಅಂತಾರಾಷ್ಟ್ರೀಯ ಅಹಿಂಸೆ ದಿನಾಚರಣೆಯ ನಿಮಿತ್ತ ಆಯೋಜಿಸಲಾದ ಪ್ಯಾನಲ್ ಚರ್ಚೆಯ ಸಮಯದಲ್ಲಿ ಮಹಾತ್ಮಾ ಗಾಂಧಿ ಅವರ ಜೀವಂತ ಪ್ರಮಾಣದ ಹೊಲೊಗ್ರಾಮ್ ನ್ನು ಪ್ರದರ್ಶಿಸಲಾಯಿತು.

"ಮಾನವನ ಏಳಿಗೆಗಾಗಿ ಶಿಕ್ಷಣ" ಎಂಬ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದ್ದು, ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಚರ್ಚೆಯಲ್ಲಿ ಮಹಾತ್ಮಾ ಗಾಂಧಿ ಅವರ ಜೀವಂತ ಪ್ರಮಾಣದ ಹೊಲೊಗ್ರಾಮ್ ನ್ನು ಪ್ರದರ್ಶಿಸಲಾಗಿದೆ. ಗಾಂಧಿಯ ಹೊಲೊಗ್ರಾಮ್ ನೊಂದಿಗೆ ಧ್ವನಿಯನ್ನು ಅಳವಡಿಸಿ, ಶಿಕ್ಷಣದ ಬಗ್ಗೆ ಗಾಂಧಿ ಅವರ ಚಿಂತನೆಗಳನ್ನು ಹಂಚಿಕೊಳ್ಳಲಾಯಿತು..

ಸಾಕ್ಷರತೆ ಶಿಕ್ಷಣದ ಆರಂಭ ಅಥವಾ ಅಂತ್ಯ ಅಲ್ಲ. ಶಿಕ್ಷಣವೆಂದರೆ ದೇಹ, ಮನಸ್ಸು ಮತ್ತು ಚೈತನ್ಯ, ವ್ಯಕ್ತಿತ್ವ ಸೇರಿದಂತೆ  ಒಂದು ಮಗುವಿನಲ್ಲಿರುವ ಅತ್ಯುತ್ತಮವಾದ ಎಲ್ಲವನ್ನೂ ಹೊರತರುವುದಾಗಿದೆ. ಆಧ್ಯಾತ್ಮಿಕ ತರಬೇತಿ ಎಂದರೆ ಹೃದಯದ ಶಿಕ್ಷಣ ಎಂದು ಗಾಂಧಿ ಈ ಕಾರ್ಯಕ್ರಮದಲ್ಲಿ ಶಿಕ್ಷಣದ ಕುರಿತ ತಮ್ಮ ಸಂದೇಶ, ದೃಷ್ಟಿಕೋನಗಳನ್ನು ಹಂಚಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com