ಚೀನಾದಲ್ಲಿ ಭೂಕಂಪ: ಮೃತರ ಸಂಖ್ಯೆ 74ಕ್ಕೆ ಏರಿಕೆ, 26 ಜನರು ಕಣ್ಮರೆ

ಟಿಬೆಟ್‌ ಸಮೀಪದ ಚೀನಾದ ಸಿಚುವಾನ್‌ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸತ್ತವರ ಸಂಖ್ಯೆ 74ಕ್ಕೆ ಏರಿಕೆಯಾಗಿದ್ದು, ಬಳಿಕ 26 ಜನರು ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಬುಧವಾರ ವರದಿ ಮಾಡಿದೆ.
ಚೀನಾದ ಸಿಚುವಾನ್ ಪ್ರಾಂತ್ಯದ ಲುಡಿಂಗ್ ಕೌಂಟಿಯ ಮೋಕ್ಸಿ ಟೌನ್‌ನಲ್ಲಿ ಸೋಮವಾರ ಸಂಭವಿಸಿದ ಭೂಕಂಪದ ನಂತರ ರಕ್ಷಣಾ ಕಾರ್ಯಾಚರಣೆ
ಚೀನಾದ ಸಿಚುವಾನ್ ಪ್ರಾಂತ್ಯದ ಲುಡಿಂಗ್ ಕೌಂಟಿಯ ಮೋಕ್ಸಿ ಟೌನ್‌ನಲ್ಲಿ ಸೋಮವಾರ ಸಂಭವಿಸಿದ ಭೂಕಂಪದ ನಂತರ ರಕ್ಷಣಾ ಕಾರ್ಯಾಚರಣೆ
Updated on

ಬೀಜಿಂಗ್: ಟಿಬೆಟ್‌ ಸಮೀಪದ ಚೀನಾದ ಸಿಚುವಾನ್‌ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸತ್ತವರ ಸಂಖ್ಯೆ 74ಕ್ಕೆ ಏರಿಕೆಯಾಗಿದ್ದು, ಬಳಿಕ 26 ಜನರು ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಬುಧವಾರ ವರದಿ ಮಾಡಿದೆ.

ಸಿಚುವಾನ್‌ ಪ್ರಾಂತ್ಯದ ಲುಡಿಂಗ್‌ ಕೌಂಟಿಯ ಮುಖ್ಯ ಪಟ್ಟಣದಲ್ಲಿ ಮಧ್ಯಾಹ್ನದ ನಂತರ ಸಂಭವಿಸಿದ 6.8 ತೀವ್ರತೆಯ ಭೂಕಂಪನವು ಗಾಂಝೆ ಟಿಬೆಟಿಯನ್ ಸ್ವಾಯತ್ತ ಪ್ರದೇಶದಲ್ಲಿನ ಮನೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ.

ಭೂಕಂಪನದ ತೀವ್ರತೆಯ ಪರಿಣಾಮ 200 ಕಿ.ಮೀ.ದೂರದ ಚೆಂಗ್‌ಡು ನಗರದಲ್ಲೂ ಕಟ್ಟಡಗಳು ಅಲುಗಾಡಿದ್ದವು. ಆದಾಗ್ಯೂ 2.1 ಕೋಟಿ ಜನಸಂಖ್ಯೆ ಇರುವ ಈ ನಗರದಲ್ಲಿ ಕಠಿಣ ಕೋವಿಡ್‌ ಲಾಕ್‌ಡೌನ್ ಮುಂದುವರಿಸಲಾಗಿದೆ. ಜನರು ಮನೆಯಿಂದ ಹೊರಬರದಂತೆ  ಅಧಿಕಾರಿಗಳು ನಿರ್ಬಂಧಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಪಂಚದ ಉಳಿದ ಭಾಗಗಳಲ್ಲಿ ನಿರ್ಬಂಧಗಳನ್ನು ತೆಗೆದುಹಾಕಿದ್ದರೂ ಕೂಡ, ಸರ್ಕಾರದ ಕಟ್ಟುನಿಟ್ಟಾದ 'ಶೂನ್ಯ ಕೋವಿಡ್ ನೀತಿ'ಯ ಲಾಕ್‌ಡೌನ್‌ಗಳು, ಕ್ವಾರಂಟೈನ್‌ಗಳು ಮತ್ತು ಇತರ ನಿರ್ಬಂಧಗಳನ್ನು ಕಡ್ಡಾಯಗೊಳಿಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ನಿರ್ಬಂಧಗಳು ಆನ್‌ಲೈನ್ ಮತ್ತು ವೈಯಕ್ತಿಕವಾಗಿ ಪ್ರತಿಭಟನೆಗಳಿಗೆ ಕಾರಣವಾಗಿವೆ. ಚೀನಾದ ಕಮ್ಯುನಿಸ್ಟ್ ಪಕ್ಷವು ನಿಯಂತ್ರಿತ ಸಮಾಜದಲ್ಲಿ ಜಗಳಗಳನ್ನು ಮಾಡುವುದು ಮತ್ತು ತೊಂದರೆ ಉಂಟುಮಾಡುವುದನ್ನು ಮಾಡಿದರೆ ಜನರಿಗೆ ಸುಲಭವಾಗಿ ಈ ಆರೋಪಗಳ ಮೇಲೆ ತಿಂಗಳುಗಳು ಅಥವಾ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು.

ಒಟ್ಟಾರೆಯಾಗಿ, ಏಳು ಪ್ರಾಂತೀಯ ರಾಜಧಾನಿಗಳು ಸೇರಿದಂತೆ 33 ನಗರಗಳಲ್ಲಿ 65 ಮಿಲಿಯನ್ ಚೀನಿಯರು ಪ್ರಸ್ತುತ ವಿವಿಧ ಹಂತದ ಲಾಕ್‌ಡೌನ್‌ನಲ್ಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪವೆಂದರೆ 2008 ರಲ್ಲಿ 7.9 ತೀವ್ರತೆಯ ಭೂಕಂಪವಾಗಿದ್ದು, ಸಿಚುವಾನ್‌ನಲ್ಲಿ ಸುಮಾರು 90,000 ಜನರು ಮೃತಪಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com