'ನಾವೂ ಸಿದ್ಧರಾಗಿದ್ದೇವೆ': ತೈವಾನ್ ಜಲಸಂಧಿಯಲ್ಲಿ ಪರಮಾಣು ಜಲಾಂತರ್ಗಾಮಿ ನೌಕೆ ನಿಯೋಜಿಸಿದ ಚೀನಾಗೆ ಅಮೆರಿಕ ಎಚ್ಚರಿಕೆ

ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಗೆ ಭೇಟಿ ನೀಡಿದ ನಂತರ ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ನಾವೂ ಎಲ್ಲದ್ದಕ್ಕೂ ಸಿದ್ಧರಾಗಿದ್ದೇವೆ ಎಂದು ಪ್ರತಿಕಾರಕ್ಕಿಳಿದಿರುವ...
ಚೀನಾ ಯುದ್ಧ ವಿಮಾನ
ಚೀನಾ ಯುದ್ಧ ವಿಮಾನ

ವಾಷಿಂಗ್ಟನ್: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಗೆ ಭೇಟಿ ನೀಡಿದ ನಂತರ ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ನಾವೂ ಎಲ್ಲದ್ದಕ್ಕೂ ಸಿದ್ಧರಾಗಿದ್ದೇವೆ ಎಂದು ಪ್ರತಿಕಾರಕ್ಕಿಳಿದಿರುವ ಅಮೆರಿಕಕ್ಕೆ ಚೀನಾ ಎಚ್ಚರಿಕೆ ನೀಡಿದೆ.

ತೈವಾನ್ ಜಲಸಂಧಿಯಲ್ಲಿ ಚೀನೀ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿದ ಅಮೆರಿಕ, ಇದು ತೈವಾನ್ ಜಲಸಂಧಿಯಾದ್ಯಂತ ಮತ್ತು ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ದೀರ್ಘಾವಧಿಯ ಉದ್ದೇಶಕ್ಕೆ ವಿರುದ್ಧವಾದ ಕ್ರಮ ಎಂದು ವಿವರಿಸಿದೆ.

ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯಿಂದ ಆಕ್ರೋಶಗೊಂಡಿರುವ ಚೀನಾ "ರಾತ್ರೋರಾತ್ರಿ ತೈವಾನ್ ಅನ್ನು ಗುರಿಯಾಗಿಸಿಕೊಂಡು ಅಂದಾಜು 11 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಇದು ದ್ವೀಪದ ಈಶಾನ್ಯ, ಪೂರ್ವ ಮತ್ತು ಆಗ್ನೇಯಕ್ಕೆ ಪರಿಣಾಮ ಬೀರಿದೆ" ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚೀನಾದ ಈ ಕ್ರಮಗಳನ್ನು ನಾವು ಖಂಡಿಸುತ್ತೇವೆ. ಇದು ಬೇಜವಾಬ್ದಾರಿ ಮತ್ತು ತೈವಾನ್ ಜಲಸಂಧಿಯಾದ್ಯಂತ ಮತ್ತು ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ನಮ್ಮ ದೀರ್ಘಕಾಲದ ಉದ್ದೇಶಕ್ಕೆ ವಿರುದ್ಧವಾಗಿದೆ, ”ಎಂದು ಕಿರ್ಬಿ ಹೇಳಿದ್ದಾರೆ.

"ಈ ಕ್ರಮಗಳು ಮುಂದುವರಿಯುತ್ತವೆ ಮತ್ತು ಮುಂಬರುವ ದಿನಗಳಲ್ಲಿ ಚೀನಿಯರು ಹೀಗೆ ಪ್ರತಿಕ್ರಿಯಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದು, ಇದಕ್ಕೆ ಏನು ಮಾಡಬೇಕೆಂದು ಅಮೆರಿಕ ಸಹ ಸಿದ್ಧವಾಗಿದೆ. ಆದರೆ ನಾವು ಬಿಕ್ಕಟ್ಟನ್ನು ಹುಡುಕುವುದಿಲ್ಲ ಅಥವಾ ಬಯಸುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.

ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಭೇಟಿ ಬಳಿಕ ತೈವಾನ್ ಸುತ್ತಲೂ ಯುದ್ಧ ವಿಮಾನಗಳು, ಸಮರ ನೌಕೆಗಳನ್ನು ನಿಯೋಜಿಸುವ ಮೂಲಕ ದಿಗ್ಬಂಧನ ವಿಧಿಸುವಂತೆ ಅತಿ ದೊಡ್ಡ ಸೇನಾ ತಾಲೀಮನ್ನು ಚೀನಾ ಮಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com