ಪಾಕಿಸ್ತಾನ: ರಾಜಕಾರಣಿ ಸಂಬಂಧಿಯ ಕಾರ್ ಓವರ್ ಟೇಕ್ ಮಾಡಲು ಯತ್ನಿಸಿದ ಹಿಂದೂ ಕುಟುಂಬದ ಮೇಲೆ ಹಲ್ಲೆ
ಪಾಕಿಸ್ತಾನದಲ್ಲಿ ರಾಜಕಾರಣಿಯೊಬ್ಬರ ಸಂಬಂಧಿಕರ ಕಾರನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಿರೋದಾಗಿ ವರದಿಯಾಗಿದೆ.
Published: 09th August 2022 05:43 PM | Last Updated: 09th August 2022 06:19 PM | A+A A-

ಪ್ರತ್ಯಕ್ಷ ದೃಶ್ಯ
ಸಿಂಧ್: ಪಾಕಿಸ್ತಾನದಲ್ಲಿ ರಾಜಕಾರಣಿಯೊಬ್ಬರ ಸಂಬಂಧಿಕರ ಕಾರನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಿರೋದಾಗಿ ವರದಿಯಾಗಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ ಓರ್ವ ಪುರುಷ, ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಒಳಗೊಂಡಿದ್ದ ಕುಟುಂಬವು ರಹರ್ಕಿ ಸಾಹಿಬ್ ಎಂಬ ಪ್ರದೇಶದ ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಮೀರ್‌ಪುರ್ ಮಾಥೆಲೋ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘೋಟ್ಕಿ ಬಳಿಯ ರೆಸ್ಟೋರೆಂಟ್‌ನಲ್ಲಿ ಅವರ ಮೇಲೆ ದಾಳಿ ನಡೆಸಲಾಯಿತು ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಇದನ್ನೂ ಓದಿ: ಗರ್ಭಿಣಿಗೆ ಒದೆದಿದ್ದ ವಿಡಿಯೊ ವೈರಲ್ ಬಳಿಕ ಪಾಕಿಸ್ತಾನದ ಭದ್ರತಾ ಸಿಬ್ಬಂದಿ ಬಂಧನ!
ಸ್ಥಳೀಯ ರಾಜಕಾರಣಿಯೊಬ್ಬರ ಸೋದರ ಸಂಬಂಧಿ ಶಂಶೇರ್ ಪಿತಾಫಿ ಅವರ ವಾಹನವನ್ನು ತಾವು ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಅವರು ನಮ್ಮನ್ನು ಹಿಂಬಾಲಿಸಿಕೊಂಡು ಬಂದರು ಎಂದು ಕುಟುಂಬದ ಆಪ್ತರು ಹೇಳಿದರು. ರೆಸ್ಟೋರೆಂಟ್ ವರೆಗೂ ಕುಟುಂಬವನ್ನು ಹುಡುಕಿಕೊಂಡು ಬಂದ ಎಂಎಲ್ ಎ ಸಂಬಂಧಿಗಳು ಕಾರನ್ನು ಒಡೆದು ಕುಟುಂಬಸ್ಥರನ್ನು ಗಾಯಗೊಳಿಸಿದ್ದಾಗಿ ಹೇಳಿದರು.
ದಾಳಿಕೋರರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪವಿದ್ದು, ದಾಳಿಕೋರರನ್ನು ಬಂಧಿಸಲಾಗುವುದು ಎಂದು ಸಿಂಧ್ ಪೊಲೀಸರು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.