ಇಮ್ರಾನ್ ಖಾನ್ ಗೆ ಸಂಕಷ್ಟ: ಪಾಕ್ ಮಾಜಿ ಪ್ರಧಾನಿ ವಿರುದ್ಧ ಭಯೋತ್ಪಾದನಾ ಕಾಯ್ದೆಯಡಿ ಪ್ರಕರಣ ದಾಖಲು

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನ್ ಪೊಲೀಸರು ಭಯೋತ್ಪಾದನೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನ್ ಪೊಲೀಸರು ಭಯೋತ್ಪಾದನೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಶನಿವಾರ ಎಫ್-9 ಪಾರ್ಕ್ ನಲ್ಲಿ ನಡೆದ ಸಾರ್ವಜನಿಕ ರ್ಯಾಲಿ ವೇಳೆ ನ್ಯಾಯಾಧೀಶರು ಹಾಗೂ ಇಬ್ಬರು ಉನ್ನತ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರ್ಯಾಲಿಯಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಬೆದರಿಕೆ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಕೆಲವೇ ಗಂಟೆಗಳ ನಂತರ ಇಮ್ರಾನ್ ಖಾನ್ ರ ನೇರ ಭಾಷಣದ ಪ್ರಸಾರವನ್ನು ಪಾಕ್ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ ನಿಷೇಧಿಸಿತ್ತು.

ಖಾನ್ ಅವರ ವಿರುದ್ಧದ ಇತ್ತೀಚಿನ ಆರೋಪಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಆದಾಗ್ಯೂ, ಇಸ್ಲಾಮಾಬಾದ್‌ನ ನ್ಯಾಯಾಲಯವು ಖಾನ್‌ಗೆ ಮುಂದಿನ ಮೂರು ದಿನಗಳ 'ರಕ್ಷಣಾತ್ಮಕ ಜಾಮೀನು' ನೀಡಿದೆ ಎಂದು ತೆಹ್ರೀಕ್-ಇ-ಇನ್ಸಾಫ್ ವಿರೋಧ ಪಕ್ಷದ ಹಿರಿಯ ನಾಯಕ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ.

ನೂರಾರು ತೆಹ್ರೀಕ್-ಇ-ಇನ್ಸಾಫ್ ಸದಸ್ಯರು ಸೋಮವಾರ ಖಾನ್ ಅವರ ಮನೆಯ ಹೊರಗೆ ನೆರೆದಿದ್ದು ಮಾಜಿ ಪಿಎಂ ಒಳಗೆ ಸಭೆಗಳನ್ನು ನಡೆಸಿದರು. ಈ ವೇಳೆ ಇಮ್ರಾನ್ ಖಾನ್ ರನ್ನು ಬಂಧಿಸಿದರೆ ರಾಷ್ಟ್ರವ್ಯಾಪಿ ರ್ಯಾಲಿಗಳನ್ನು ನಡೆಸುವುದಾಗಿ ಪಕ್ಷ ಎಚ್ಚರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com