ವಿಡಿಯೋ: 'ನೀವು F**** ಭಾರತೀಯರು ಎಲ್ಲೆಡೆ ಇದ್ದೀರಿ.. ಅಮೆರಿಕ ಬಿಟ್ಟು ಮೊದಲು ತೊಲಗಿ': ಜನಾಂಗೀಯ ನಿಂದನೆ ಮಾಡಿದ ಮಹಿಳೆ ಬಂಧನ

ಭಾರತೀಯರನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆ ಮಾಡಿ ಹಲ್ಲೆ ಮಾಡಿದ ಆರೋಪದ ಮೇರೆಗೆ ಅಮೆರಿಕದ ಟೆಕ್ಸಾಸ್ ನಲ್ಲಿ ಮೆಕ್ಸಿಕೋ-ಅಮೆರಿಕನ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತೀಯರ ಮೇಲೆ ಹಲ್ಲೆ ಮಾಡಿದ ಅಮೆರಿಕನ್ ಮಹಿಳೆ
ಭಾರತೀಯರ ಮೇಲೆ ಹಲ್ಲೆ ಮಾಡಿದ ಅಮೆರಿಕನ್ ಮಹಿಳೆ
Updated on

ವಾಷಿಂಗ್ಟನ್: ಭಾರತೀಯರನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆ ಮಾಡಿ ಹಲ್ಲೆ ಮಾಡಿದ ಆರೋಪದ ಮೇರೆಗೆ ಅಮೆರಿಕದ ಟೆಕ್ಸಾಸ್ ನಲ್ಲಿ ಮೆಕ್ಸಿಕೋ-ಅಮೆರಿಕನ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಅಮೆರಿಕದ ಟೆಕ್ಸಾಸ್‌ ಪ್ರದೇಶದ ಡಲ್ಲಾಸ್‌ನಲ್ಲಿ ಭಾರತೀಯ ಮೂಲದ ನಾಲ್ವರ ಮೇಲೆ ಹಲ್ಲೆ ನಡೆಸಿ, ಜನಾಂಗೀಯವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಮೆರಿಕದ ಮಹಿಳೆ, ಭಾರತೀಯರನ್ನು ಕಂಡು ಹೀಯಾಳಿಸಿದ್ದಾರೆ. ನಂತರ ಹಲ್ಲೆ ನಡೆಸಿ, ನಿಂದಿಸಿದ್ದು, ವಾಪಸ್ ಭಾರತಕ್ಕೆ ಹೋಗುವಂತೆ ಒತ್ತಾಯಿಸಿದ್ದಾರೆ.

ನೀವು..  F**** ಭಾರತೀಯರು ಎಲ್ಲೆಡೆ ಇದ್ದೀರಿ..ನಿಮ್ಮಿಂದ ನಾವು ಸಾಕಷ್ಟು ಅನುಭವಿಸುತ್ತಿದ್ದೇವೆ. ಅಮೆರಿಕ ಬಿಟ್ಟು ಮೊದಲು ತೊಲಗಿ ಎಂದು ಮನಸೋ ಇಚ್ಛೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಹಲ್ಲೆ ಕೂಡ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರೀಮಾ ರಸೂಲ್ ಎನ್ನುವವರು, 'ಈ ಘಟನೆಯು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆದಿದ್ದು, ನನ್ನ ತಾಯಿ ಮತ್ತು ಅವರ ಮೂವರು ಸ್ನೇಹಿತರು ಊಟಕ್ಕೆ ಹೋಗಿದ್ದ ವೇಳೆ ಇದು ನಡೆದಿದೆ. ಎಲ್ಲವೂ ಶಾಂತವಾಗಿರುವಾಗ ಮೆಕ್ಸಿಕನ್-ಅಮೆರಿಕನ್ ಮಹಿಳೆ ಜಗಳ ತೆಗೆದಿದ್ದಾಳೆ. ಇದಕ್ಕೆ ತಾಯಿ ವಿರೋಧಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಜನಾಂಗೀಯ ನಿಂದನೆಗಳನ್ನು ಮಾಡದಂತೆ ನನ್ನ ತಾಯಿ ವಿನಂತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆದರೆ ಆಕೆ., ಭಾರತೀಯರನ್ನು ನಾನು ದ್ವೇಷಿಸುತ್ತೇನೆ. ನೀವೆಲ್ಲಾ ಉತ್ತಮ ಜೀವನ ನಡೆಸುವ ಸಲುವಾಗಿ ಅಮೆರಿಕಾಗೆ ಬರುತ್ತಿದ್ದೀರಿ ಎಂದು ಮಾತು ಆರಂಭಿಸಿದ ಬಳಿಕ ಮಹಿಳೆ, ನಿಂದಿಸಿ, ವಾಪಸ್ ಹೋಗಿ.. ನೀವು... ಈ ದೇಶವನ್ನು ಹಾಳು ಮಾಡುತ್ತಿದ್ದೀರಿ ಎಂದು ನಿಂದಿಸಿದ್ದಾರೆ. ಜತೆಗೆ ಮಹಿಳೆಯ ಬಳಿ ಗನ್ ಕೂಡ ಇತ್ತು. ಅವರು ಭಾರತೀಯರಿಗೆ ಗುಂಡು ಹಾರಿಸುವ ಉದ್ದೇಶ ಹೊಂದಿರಬಹುದು' ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ಮೂಲದವರಿಗೆ ಹಲ್ಲೆ ನಡೆಸಿ ನಿಂದಿಸುವ ವಿಡಿಯೊ ವೈರಲ್ ಆದ ಬೆನ್ನಲ್ಲೇ, ಪೊಲೀಸರು ಕ್ರಮ ಕೈಗೊಂಡಿದ್ದು, ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಪ್ಲಾನೋ ನಿವಾಸಿ ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದೆ. 

ಪ್ಲಾನೋ ಪೋಲೀಸ್ ಡಿಟೆಕ್ಟಿವ್ಸ್ ಗುರುವಾರ ಮಧ್ಯಾಹ್ನ ಪ್ಲಾನೋದ ಎಸ್ಮೆರಾಲ್ಡಾ ಅಪ್ಟನ್ ರನ್ನು ಬಂಧಿಸಿದ್ದಾರೆ. ಆಕೆಯ ಮೇಲೆ ಹಲ್ಲೆ, ದೈಹಿಕ ಗಾಯ ಮತ್ತು ಭಯೋತ್ಪಾದಕ ಬೆದರಿಕೆಗಳ ಆರೋಪ ಹೊರಿಸಲಾಗಿದೆ ಮತ್ತು ಒಟ್ಟು USD 10,000 ಬಾಂಡ್ ಮೊತ್ತದ ಮೇಲೆ ಬಂಧಿಸಲಾಗಿದೆ ಎಂದು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com