ತವಾಂಗ್ ನಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆ: ಅರುಣಾಚಲ ಗಡಿಯಲ್ಲಿ ಪರಿಸ್ಥಿತಿ 'ಸ್ಥಿರವಾಗಿದೆ' ಎಂದ ಚೀನಾ
ಕಳೆದ ವಾರ ಅರುಣಾಚಲ ಗಡಿಯ ಯಾಂಗ್ಟ್ಸೆ ಪ್ರದೇಶದಲ್ಲಿ ಭಾರತ - ಚೀನಾ ಸೇನಿಕರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾದ ನಂತರ ಭಾರತದೊಂದಿಗಿನ ತನ್ನ ಗಡಿಯಲ್ಲಿ ಪರಿಸ್ಥಿತಿ "ಸ್ಥಿರವಾಗಿದೆ" ಎಂದು ಚೀನಾ ಮಂಗಳವಾರ ಹೇಳಿದೆ.
Published: 13th December 2022 03:02 PM | Last Updated: 16th December 2022 12:20 PM | A+A A-

ಚೀನಾದ ವಿದೇಶಾಂಗ ವಕ್ತಾರ ವಾಂಗ್ ವೆನ್ಬಿನ್
ಬೀಜಿಂಗ್: ಕಳೆದ ವಾರ ಅರುಣಾಚಲ ಗಡಿಯ ಯಾಂಗ್ಸ್ಟೆ ಪ್ರದೇಶದಲ್ಲಿ ಭಾರತ - ಚೀನಾ ಸೇನಿಕರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾದ ನಂತರ ಭಾರತದೊಂದಿಗಿನ ತನ್ನ ಗಡಿಯಲ್ಲಿ ಪರಿಸ್ಥಿತಿ "ಸ್ಥಿರವಾಗಿದೆ" ಎಂದು ಚೀನಾ ಮಂಗಳವಾರ ಹೇಳಿದೆ.
ಆದರೆ ಇಂದು ನಡೆದ ಘರ್ಷಣೆಯ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, "ನಮಗೆ ತಿಳಿದಿರುವಂತೆ, ಚೀನಾ-ಭಾರತದ ಗಡಿ ಪರಿಸ್ಥಿತಿ ಒಟ್ಟಾರೆ ಸ್ಥಿರವಾಗಿದೆ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಉಭಯ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಚಾನೆಲ್‌ಗಳ ಮೂಲಕ ಗಡಿ ಸಮಸ್ಯೆಯ ಕುರಿತು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲಿವೆ. ಭಾರತ ಸಹ ಚೀನಾದ ದಿಕ್ಕಿನಲ್ಲಿಯೇ ಮುನ್ನಡೆಯುತ್ತದೆ ಎಂದು ಭಾವಿಸುವುದಾಗಿ" ಎಂದು ಅವರು ಹೇಳಿದ್ದಾರೆ.
"ಉಭಯ ದೇಶಗಳ ನಾಯಕರು ಮಾಡಿಕೊಂಡ ಒಪ್ಪಂದವನ್ನು ಶ್ರದ್ಧೆಯಿಂದ ಜಾರಿಗೆ ತರಬೇಕು ಎಂದು ಒತ್ತಾಯಿಸಿದ ವಾಂಗ್ ವೆನ್‌ಬಿನ್, ಎರಡೂ ಕಡೆಯವರು ಸಹಿ ಮಾಡಿದ ಒಪ್ಪಂದಗಳು ಮತ್ತು ಒಪ್ಪಂದಗಳ ಮನೋಭಾವವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಚೀನಾ-ಭಾರತ ಒಟ್ಟಾಗಿ ಗಡಿ ಪ್ರದೇಶದ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿಹಿಡಿಯಬೇಕು" ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಕಳೆದ ಶುಕ್ರವಾರ ನಡೆದ ಮುಖಾಮುಖಿ ಸಂಘರ್ಷದಲ್ಲಿ ಭಾರತೀಯ ಸೈನಿಕರಿಗಿಂತ ಚೀನಾ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.