ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದ ಎಲಾನ್ ಮಸ್ಕ್: ಹೌದು ಎಂದ ಶೇ.58 ರಷ್ಟು ಮಂದಿ!
ಟೆಕ್ ಬಿಲಿಯನೇರ್ ಆಗಿರುವ ಸ್ಪೇಸ್ ಎಕ್ಸ್ ಸಿಇಓ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ದಿನೇ ದಿನೇ ಟ್ವಿಟರ್ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಈ ನಡುವಲ್ಲೇ ಮಸ್ಕ್ ಅವರು ನೆಟ್ಟಿಗರ ಮುಂದೆ ಇಟ್ಟಿದ್ದ ನಿರ್ಣಾಯಕ ಪ್ರಶ್ನೆಯೊಂದಕ್ಕೆ ಶೇ.58 ರಷ್ಟು ಮಂದಿ ಹೌದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Published: 19th December 2022 11:38 AM | Last Updated: 19th December 2022 01:25 PM | A+A A-

ಎಲಾನ್ ಮಸ್ಕ್
ವಾಷಿಂಗ್ಟನ್: ಟೆಕ್ ಬಿಲಿಯನೇರ್ ಆಗಿರುವ ಸ್ಪೇಸ್ ಎಕ್ಸ್ ಸಿಇಓ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ದಿನೇ ದಿನೇ ಟ್ವಿಟರ್ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಈ ನಡುವಲ್ಲೇ ಮಸ್ಕ್ ಅವರು ನೆಟ್ಟಿಗರ ಮುಂದೆ ಇಟ್ಟಿದ್ದ ನಿರ್ಣಾಯಕ ಪ್ರಶ್ನೆಯೊಂದಕ್ಕೆ ಶೇ.58 ರಷ್ಟು ಮಂದಿ ಹೌದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸ್ಥಾನಕ್ಕೆ ಸಂಬಂಧಿಸಿದ್ದ ಪ್ರಶ್ನೆ ಕೇಳಿದ್ದ ಮಸ್ಕ್ ಅವರು, ನಾನು ಟ್ವಿಟರ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ನಾನು ಈ ಸಮೀಕ್ಷೆಯ ಫಲಿತಾಂಶಗಳಿಗೆ ಬದ್ಧನಾಗಿರುತ್ತೇನೆಂದು ಹೇಳಿದ್ದರು. ಈ ಪ್ರಶ್ನೆಗೆ ‘ಹೌದು’ ‘ಬೇಡ’ ಎಂಬ ಆಯ್ಕೆಗಳನ್ನು ನೀಡಿದ್ದರು.
ಇದನ್ನೂ ಓದಿ: ಟ್ವಿಟರ್ ಬ್ಲೂ ಟಿಕ್ ಗೆ ಹೊಸ ವ್ಯವಸ್ಥೆಗೆ ತಾತ್ಕಾಲಿಕ ಬ್ರೇಕ್ ಹಾಕಿದ ಎಲಾನ್ ಮಸ್ಕ್
ಟ್ವಿಟರ್ ಸಿಇಓ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಬೆಳಗ್ಗೆ 4.50ಕ್ಕೆ ಮಸ್ಕ್ ಅವರ ಕೇಳಿದ ಪ್ರಶ್ನೆಗೆ ಈವರೆಗೆ 6,192,394 ಮತ ಚಲಾವಣೆಯಾಗಿದ್ದು, ಈ ಪೈಕಿ ಕೆಲವರು ಸಿಇಓ ಸ್ಥಾನದಿಂದ ಕೆಳಗಿಳಿಯುವುದು ಬೇಡ ಎಂದರೆ ಇನ್ನೂ ಕೆಲವರು ಸ್ಥಾನದಿಂದ ಕೆಳಗಿಳಿಯುವಂತೆ ಹೇಳಿದ್ದಾರೆ. ಅಲ್ಲದೆ, 29 ಲಕ್ಷಕ್ಕೂ ಅಧಿಕ ರೀಟ್ವೀಟ್ಗಳು ಆಗಿದ್ದು, 1.81 ಲಕ್ಷಕ್ಕೂ ಅಧಿಕ ಕಾಮೆಂಟ್ಗಳು ಬಂದಿವೆ. 2.72 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
ಇದರೊಂದಿಗೆ ಶೇ.58 ರಷ್ಟು ಮಂದಿ ಹೌದು ಎಂದು ಪ್ರತಿಕ್ರಿಯೆ ನೀಡಿದ್ದು, ಶೇ.42ರಷ್ಟು ಮಂದಿ ಬೇಡ ಎಂದು ಹೇಳಿರುವುದು ಕಂಡು ಬಂದಿದೆ. ಫಲಿತಾಂಶ ಆಧರಿಸಿ ಮಸ್ಕ್ ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.