ಲೀಸೆಸ್ಟರ್‌ನಲ್ಲಿರುವ ಹಿಂದೂ ಧಾರ್ಮಿಕ ಸ್ಥಳ ಧ್ವಂಸ; ಭಾರತ ಖಂಡನೆ, ಕ್ರಮಕ್ಕೆ ಒತ್ತಾಯ

ಬ್ರಿಟನ್ ನ ಲೀಸೆಸ್ಟರ್‌ನಲ್ಲಿ ಭಾರತೀಯ ಸಮುದಾಯದ ವಿರುದ್ಧ ನಡೆದ ಹಿಂಸಾಚಾರವನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಇಂದು ತೀವ್ರವಾಗಿ ಖಂಡಿಸಿದೆ.
ಬ್ರಿಟನ್ ನಲ್ಲಿ ಘರ್ಷಣೆಯ ಹಿನ್ನೆಲೆ ಪೊಲೀಸ್ ಭದ್ರತೆ
ಬ್ರಿಟನ್ ನಲ್ಲಿ ಘರ್ಷಣೆಯ ಹಿನ್ನೆಲೆ ಪೊಲೀಸ್ ಭದ್ರತೆ

ಬ್ರಿಟನ್ ನ ಲೀಸೆಸ್ಟರ್‌ನಲ್ಲಿ ಭಾರತೀಯ ಸಮುದಾಯದ ವಿರುದ್ಧ ನಡೆದ ಹಿಂಸಾಚಾರವನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಇಂದು ತೀವ್ರವಾಗಿ ಖಂಡಿಸಿದೆ. ಭಾರತೀಯ ಹೈಕಮಿಷನ್ ತನ್ನ ಹೇಳಿಕೆಯಲ್ಲಿ ಲೀಸೆಸ್ಟರ್‌ನಲ್ಲಿ ಹಿಂದೂ ಧಾರ್ಮಿಕ ಆವರಣಗಳಲ್ಲಿ ಹಿಂಸಾಚಾರ ಮತ್ತು ಧ್ವಂಸವನ್ನು ಬಲವಾಗಿ ಪ್ರತಿಭಟಿಸಿದೆ.

ನಾವು ಈ ವಿಷಯವನ್ನು ಯುಕೆ ಅಧಿಕಾರಿಗಳೊಂದಿಗೆ ಬಲವಾಗಿ ತೆಗೆದುಕೊಂಡಿದ್ದೇವೆ ಮತ್ತು ಈ ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣದ ಕ್ರಮವನ್ನು ಕೋರಿದ್ದೇವೆ. ಸಂತ್ರಸ್ತ ಜನರಿಗೆ ರಕ್ಷಣೆ ನೀಡುವಂತೆ ನಾವು ಅಧಿಕಾರಿಗಳಿಗೆ ಕರೆ ನೀಡುತ್ತೇವೆ ಎಂದು ಭಾರತೀಯ ಹೈಕಮಿಷನ್ ಹೇಳಿಕೆ ತಿಳಿಸಿದೆ. ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಭಾರತೀಯ ಹೈಕಮಿಷನ್ ಕೂಡ ಅಧಿಕಾರಿಗಳನ್ನು ಒತ್ತಾಯಿಸಿದೆ.

ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಇದುವರೆಗೆ ಹದಿನೈದು ಜನರನ್ನು ಬಂಧಿಸಲಾಗಿದೆ ಎಂದು ಲೀಸೆಸ್ಟರ್‌ಶೈರ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೆಲ್ಟನ್ ರಸ್ತೆಯಲ್ಲಿರುವ ಧಾರ್ಮಿಕ ಸ್ಥಳದ ಹೊರಗಿರುವ ಧ್ವಜವನ್ನು ಕೆಳಗಿಳಿಸಿರುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಲೀಸೆಸ್ಟರ್ ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೊಗಳು ಹರಿದಾಡಿದ್ದು ಹಿಂದೂ ಗುಂಪುಗಳು ಜೈ ಶ್ರೀ ರಾಮ್ ಘೋಷಣೆಗಳನ್ನು ಎತ್ತಿದಾಗ  ಮುಸ್ಲಿಂ ಗುಂಪು ಘರ್ಷಣೆ ನಡೆಸಿ ಆಸ್ತಿಗಳನ್ನು ಧ್ವಂಸಗೊಳಿಸಿದೆ ಎಂದು ಆರೋಪ ಕೇಳಿಬಂದಿದೆ. ಲೀಸೆಸ್ಟರ್ ಪೊಲೀಸರು ಶಾಂತವಾಗಿರಲು ಕರೆ ನೀಡಿದ್ದಾರೆ. ಆಗಸ್ಟ್ 28 ರಂದು ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಏಷ್ಯಾಕಪ್ ಕ್ರಿಕೆಟ್ ಪಂದ್ಯದ ನಂತರ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆಯ ಕುರಿತು ವರದಿಗಳಾಗಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com