ಒಸಾಮಾ ಬಿನ್ ಲಾಡೆನ್‌ ಕೊಂದಿದ್ದಾಗಿ ಹೇಳಿದ್ದ ಅಮೆರಿಕದ ಮಾಜಿ ನೇವಿ ಸೀಲ್ ಯೋಧನ ಬಂಧನ

2011ರಲ್ಲಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದ ಅಮೆರಿಕದ ಮಾಜಿ ಸೈನಿಕ ನೇವಿ ಸೀಲ್‌ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮೆರಿಕದ ಮಾಜಿ ನೇವಿ ಸೀಲ್ ಯೋಧನ ಬಂಧನ
ಅಮೆರಿಕದ ಮಾಜಿ ನೇವಿ ಸೀಲ್ ಯೋಧನ ಬಂಧನ

ವಾಷಿಂಗ್ಟನ್: 2011ರಲ್ಲಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದ ಅಮೆರಿಕದ ಮಾಜಿ ಸೈನಿಕ ನೇವಿ ಸೀಲ್‌ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಾರದ ಆರಂಭದಲ್ಲಿ ಟೆಕ್ಸಾಸ್‌ನಲ್ಲಿ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪದ ಮೇಲೆ ರಾಬರ್ಟ್ ಓ'ನೀಲ್ ಅವರನ್ನು ಬಂಧಿಸಲಾಯಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ರಾಬರ್ಟ್ ಓ'ನೀಲ್ ಅವರನ್ನು ಬುಧವಾರ ಫ್ರಿಸ್ಕೊದಲ್ಲಿ ಬಂಧಿಸಲಾಗಿದ್ದು, ಅದೇ ದಿನ $3,500 ಬಾಂಡ್‌ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು ಎಂದು ವರದಿ ಹೇಳಿದೆ.

2011 ರಲ್ಲಿ ಪಾಕಿಸ್ತಾನದಲ್ಲಿ ಅಮೆರಿಕ ರಹಸ್ಯ ದಾಳಿಯ ಸಂದರ್ಭದಲ್ಲಿ 9/11 ಮಾಸ್ಟರ್ ಮೈಂಡ್ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅನ್ನು ಕೊಂದು ಗುಂಡು ಹಾರಿಸಿದ್ದು ತಾವೇ ಎಂದು ಓ'ನೀಲ್ ಹೇಳಿಕೊಂಡಿದ್ದರು. ಅವರು ತಮ್ಮ 2017 ರ ಆತ್ಮಚರಿತ್ರೆ "ದಿ ಆಪರೇಟರ್" ನಲ್ಲಿ ಈ ಕಥೆಯನ್ನು ವಿವರಿಸಿದ್ದಾರೆ. ಆದರೆ ಅವರ ಈ ಹೇಳಿಕೆಯನ್ನು ಅಮೆರಿಕ ಸರ್ಕಾರವು ಎಂದಿಗೂ ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಯೂಲ್ಲ ಎಂದು ಹೇಳಲಾಗಿದೆ.

ಈ ಹಿಂದೆ ಅಂದರೆ 2016 ರಲ್ಲಿ, ಮೊಂಟಾನಾದಲ್ಲಿ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ನೀಲ್ ರನ್ನು ಬಂಧಿಸಲಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com