ಪಾಕ್ ಸಂಸತ್ ಚುನಾವಣೆ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಾಮಪತ್ರ ತಿರಸ್ಕೃತ

ಪಾಕಿಸ್ತಾನದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗಳು ಶನಿವಾರ ತಿರಸ್ಕರಿಸಿದ್ದಾರೆ. ಮೇಲ್ಮನವಿ ಸಲ್ಲಿಸುವುದಾಗಿ ಅವರ ವಕೀಲರು ಹೇಳಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಲಾಹೋರ್: ಪಾಕಿಸ್ತಾನದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗಳು ಶನಿವಾರ ತಿರಸ್ಕರಿಸಿದ್ದಾರೆ. ಮೇಲ್ಮನವಿ ಸಲ್ಲಿಸುವುದಾಗಿ ಅವರ ವಕೀಲರು ಹೇಳಿದ್ದಾರೆ.

ಭ್ರಷ್ಟಾಚಾರಕ್ಕಾಗಿ ಖಾನ್ ಅವರು ಮೂರು ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಇತರ ಆರೋಪ ಗಳನ್ನು  ಎದುರಿಸುತ್ತಿದ್ದಾರೆ. ಆದರೂ  ಅವರು ನಾಮಪತ್ರಗಳನ್ನು ಸಲ್ಲಿಸಿದ್ದರು. ದೋಷಾರೋಪಣೆ ಮತ್ತು ದಾಖಲೆಗಳ ಪ್ರಕಾರ ಸಂವಿಧಾನದ ಅಡಿಯಲ್ಲಿ ಖಾನ್ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಲಾಗಿದೆ ಎಂದು  ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.

ಸಚಿವ ಸಂಪುಟದ ಮಾಜಿ ಸದಸ್ಯರ ಉಮೇದುವಾರಿಕೆಗಳನ್ನೂ ಸಹ ತಿರಸ್ಕರಿಸಲಾಗಿದೆ. ಈ ನಿರ್ಧಾರಗಳು ಖಾನ್‌ರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷಕ್ಕೆ ಹೊಸ ಹೊಡೆತವಾಗಿದೆ. 71 ವರ್ಷದ ಮಾಜಿ ಕ್ರಿಕೆಟಿಗ ದೇಶದ ಅತ್ಯಂತ ಜನಪ್ರಿಯ ವಿರೋಧ ಪಕ್ಷದ ವ್ಯಕ್ತಿಯಾಗಿದ್ದಾರೆ. 

ಸಂಸತ್ತಿನಲ್ಲಿ ಅವಿಶ್ವಾಸ ಮತದ ಮೂಲಕ  ಖಾನ್ ಅವರನ್ನು ಏಪ್ರಿಲ್ 2022 ರಲ್ಲಿ ಪ್ರಧಾನಿ ಕಚೇರಿಯಿಂದ ಹೊರಹಾಕಲಾಯಿತು. ಅಂದಿನಿಂದ ಸರ್ಕಾರಿ ಸಂಸ್ಥೆಗಳು ನ್ಯಾಯಾಲಯಗಳಲ್ಲಿ ಅವರನ್ನು ಹಿಂಬಾಲಿಸಿವೆ. ಈ ತಿರಸ್ಕಾರವು ಚುನಾವಣಾ ಆಯೋಗದ ಪಕ್ಷಪಾತವನ್ನು ಬಹಿರಂಗಪಡಿಸಿದೆ ಎಂದು ಅವರ ವಕೀಲ ಅಜರ್ ಸಿದ್ದಿಕ್ ಹೇಳಿದ್ದಾರೆ.

ಖಾನ್ ಅವರ ಪತ್ರಗಳನ್ನು ತಿರಸ್ಕರಿಸುವುದನ್ನು ಪಾಕಿಸ್ತಾನಕ್ಕೆ ಮಾಡಿದ ಅನ್ಯಾಯ ಎಂದು ಅವರ ಇನ್ನೊಬ್ಬ ವಕೀಲ ರಾಯ್ ಮುಹಮ್ಮದ್ ಅಲಿ ಬಣ್ಣಿಸಿದ್ದು, ಉದ್ದೇಶಪೂರ್ವಕವಾಗಿ ಈ ಸನ್ನಿವೇಶಗಳನ್ನು ಸೃಷ್ಟಿಸಲಾಗುತ್ತಿದೆ. ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com