ಭಾರತದಲ್ಲಿ ವೀಸಾಗಾಗಿ ಕಾಯುವಿಕೆಯ ಸಮಯ ಕಡಿಮೆಗೊಳಿಸಲು ಅಮೆರಿಕದಿಂದ ಶಕ್ತಿಮೀರಿ ಪ್ರಯತ್ನ: ಅಧಿಕಾರಿಗಳು

ಭಾರತದಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಿ ದೀರ್ಘಕಾಲದವರೆಗೆ ಕಾಯುವಿಕೆಯ ಸಮಸ್ಯೆಯನ್ನು ಬಗೆಹರಿಸಲು ಅಮೆರಿಕ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತಕ್ಕೆ ದೂತಾವಾಸ ಅಧಿಕಾರಿಗಳನ್ನು ಕಳುಹಿಸುವುದು ಮತ್ತು ಭಾರತೀಯ ವೀಸಾ ಅರ್ಜಿದಾರರಿಗಾಗಿ ಜರ್ಮನಿ ಮತ್ತು ಥೈಲ್ಯಾಂಡ್‌ನ ಇತರ ಸಾಗರೋತ್ತರ ರಾಯಭಾರ ಕಚೇರಿಗಳನ್ನು ತೆರೆಯುವುದು ಸೇರಿದಂತೆ ಭಾರತದಲ್ಲಿ ದೀರ್ಘ ಸಮಯದವ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಭಾರತದಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಿ ದೀರ್ಘಕಾಲದವರೆಗೆ ಕಾಯುವಿಕೆಯ ಸಮಸ್ಯೆಯನ್ನು ಬಗೆಹರಿಸಲು ಅಮೆರಿಕ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತಕ್ಕೆ ದೂತಾವಾಸ ಅಧಿಕಾರಿಗಳನ್ನು ಕಳುಹಿಸುವುದು ಮತ್ತು ಭಾರತೀಯ ವೀಸಾ ಅರ್ಜಿದಾರರಿಗಾಗಿ ಜರ್ಮನಿ ಮತ್ತು ಥೈಲ್ಯಾಂಡ್‌ನ ಇತರ ಸಾಗರೋತ್ತರ ರಾಯಭಾರ ಕಚೇರಿಗಳನ್ನು ತೆರೆಯುವುದು ಸೇರಿದಂತೆ ಭಾರತದಲ್ಲಿ ದೀರ್ಘ ಸಮಯದವರೆಗೆ ವೀಸಾ ಕಾಯುವಿಕೆ ಸಮಯವನ್ನು ತೊಡೆದುಹಾಕಲು ಅಮೆರಿಕ ತನ್ನೆಲ್ಲ ಪ್ರಯತ್ನಗಳನ್ನು ಹಾಕುತ್ತಿದೆ ಎಂದು ಅಲ್ಲಿನ ಹಿರಿಯ ವೀಸಾ ಅಧಿಕಾರಿ ತಿಳಿಸಿದ್ದಾರೆ. 

ಕೊರೋನಾ ಸೋಂಕು ಸಂಬಂಧಿತ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಯುಎಸ್ ವೀಸಾಗಳಿಗಾಗಿ ಅರ್ಜಿಗಳು ಪ್ರಮುಖ ಏರಿಕೆ ಕಂಡ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಮೊದಲ ಬಾರಿಗೆ ವೀಸಾ ಅರ್ಜಿದಾರರಿಗೆ, ವಿಶೇಷವಾಗಿ B1 (ವ್ಯಾಪಾರ) ಮತ್ತು B2 (ಪ್ರವಾಸಿ) ವರ್ಗಗಳ ಅಡಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ದೀರ್ಘಾವಧಿಯ ಕಾಯುವಿಕೆಗೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. 

ಭಾರತದಲ್ಲಿ ಮೊದಲ ಬಾರಿಗೆ B1/B2 ವೀಸಾ ಅರ್ಜಿದಾರರ ಕಾಯುವ ಅವಧಿಯು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೂರು ವರ್ಷಗಳವರೆಗೆ ಆಗುತ್ತಿತ್ತು. ಭಾರತದಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಿ ಕಾಯುವ ಸಮಯವನ್ನು ತೊಡೆದುಹಾಕಲು ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ವೀಸಾ ಸೇವೆಗಳ ಉಪ ಸಹಾಯಕ ಕಾರ್ಯದರ್ಶಿ ಜೂಲಿ ಸ್ಟಫ್ಟ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದೀಗ ವಿಶ್ವದಾದ್ಯಂತ ವೀಸಾ ಕಾರ್ಯಾಚರಣೆಗಳ ಸಾಮಾನ್ಯೀಕರಣವು ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ದೂತಾವಾಸಗಳಲ್ಲಿ ನಮ್ಮ ಸಿಬ್ಬಂದಿಗೆ ಸಹಾಯ ಮಾಡಲು ನಾವು ಕಾನ್ಸುಲರ್ ಅಧಿಕಾರಿಗಳ ಕೇಡರ್ ನ್ನು ಕಳುಹಿಸುತ್ತಿದ್ದೇವೆ. ಅವರು ಹಗಲು ಪಾಳಿ ಮತ್ತು ವಾರಾಂತ್ಯಗಳಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಅಮೆರಿಕ ವಿಶ್ವದಲ್ಲೇ ಅತಿ ದೊಡ್ಡ ವೀಸಾ ಕಾರ್ಯಾಚರಣೆಗಳನ್ನು ಹೊಂದಿದೆ. ನಾವು ಭಾರತದಲ್ಲಿ ಸೇವೆ ಸಲ್ಲಿಸಲು ಅಗತ್ಯವಿರುವ ಹಲವು ವಿಭಿನ್ನ ವೀಸಾ ಪ್ರಕಾರಗಳನ್ನು ಹೊಂದಿದ್ದೇವೆ. ಅವುಗಳಲ್ಲಿ ಪ್ರಮುಖವಾದವುಗಳು ವಿದ್ಯಾರ್ಥಿಗಳು, ಟೆಕ್ ಕೆಲಸಗಾರರು, ವಲಸಿಗರು ಶಾಶ್ವತವಾಗಿ ಅಮೆರಿಕಕ್ಕೆ ತೆರಳುತ್ತಿರುವವರು ಮತ್ತು ಸಮುದ್ರಯಾನ ಸಿಬ್ಬಂದಿಗೆ ವೀಸಾಗಳು. ಈ ವರ್ಷ ಆ ವೀಸಾ ಪ್ರಕಾರಗಳ ಮೂಲಕ ಕೆಲಸ ಮಾಡುವಲ್ಲಿ ಯುಎಸ್ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಸ್ಟಫ್ಟ್ ಹೇಳಿದರು.

H-1B ಮತ್ತು L1 ವೀಸಾಗಳಂತಹ ಕೆಲಸದ ವೀಸಾಗಳಿಗಾಗಿ ಸಂದರ್ಶನಕ್ಕಾಗಿ ಕಾಯುವ ಸಮಯ 18 ತಿಂಗಳುಗಳಿಂದ ಸುಮಾರು 60 ದಿನಗಳವರೆಗೆ ಕಡಿಮೆಯಾಗಿದೆ. H-1B ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು US ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತವು ಕಳೆದ ವರ್ಷ ಅತಿ ಹೆಚ್ಚು ವಿದ್ಯಾರ್ಥಿ ವೀಸಾಗಳ ದಾಖಲೆ ಪಡೆದಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com