ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ, 2 ಸರ್ಕಾರಿ ಕಟ್ಟಡಗಳಿಗೆ ಹಾನಿ, ವಿಮಾನ ನಿಲ್ದಾಣ ಬಂದ್

ರಷ್ಯಾ ಮೇಲೆ ಮತ್ತೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು ಶನಿವಾರ ತಡರಾತ್ರಿ ಮಾಸ್ಕೋದ 2 ಸರ್ಕಾರಿ ಕಟ್ಟಡಗಳ ಮೇಲೆ ಡ್ರೋನ್ ದಾಳಿಯಾಗಿದೆ ಎಂದು ತಿಳಿದುಬಂದಿದೆ.
ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ
ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ

ಮಾಸ್ಕೋ: ರಷ್ಯಾ ಮೇಲೆ ಮತ್ತೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು ಶನಿವಾರ ತಡರಾತ್ರಿ ಮಾಸ್ಕೋದ 2 ಸರ್ಕಾರಿ ಕಟ್ಟಡಗಳ ಮೇಲೆ ಡ್ರೋನ್ ದಾಳಿಯಾಗಿದೆ ಎಂದು ತಿಳಿದುಬಂದಿದೆ.

ಉಕ್ರೇನ್​ ಶನಿವಾರ ರಾತ್ರಿ ಮಾಸ್ಕೋದಲ್ಲಿ ಡ್ರೋನ್ ದಾಳಿ ನಡೆಸಿದ್ದು, 3 ಡ್ರೋನ್ ಗಳ ದಾಳಿಯಲ್ಲಿ 2 ಕಟ್ಟಡಗಳಿಗೆ ಹಾನಿಯುಂಟಾಗಿದೆ. ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ನಗರದ ಎರಡು ಕಟ್ಟಡದ ಮುಂಭಾಗಗಳು ಅತ್ಯಲ್ಪವಾಗಿ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಸ್ಕೋ ವಿಮಾನ ನಿಲ್ದಾಣ ಬಂದ್
ಇನ್ನು ಡ್ರೋನ್ ದಾಳಿ ಹಿನ್ನಲೆಯಲ್ಲಿ ರಾಜಧಾನಿ ಮಾೃಸ್ಕೋದಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಮಾಸ್ಕೋದ ವ್ನುಕೊವೊ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಈ ತಿಂಗಳ ಆರಂಭದಲ್ಲಿ, ಡ್ರೋನ್ ದಾಳಿಗಳು ನಗರದ ನೈಋತ್ಯಕ್ಕೆ ಅದೇ ವಿಮಾನ ನಿಲ್ದಾಣದಲ್ಲಿ ವಾಯು ಸಂಚಾರವನ್ನು ಸಂಕ್ಷಿಪ್ತವಾಗಿ ಅಡ್ಡಿಪಡಿಸಿದ್ದವು. ಆ ರಾತ್ರಿ ಐದು ಉಕ್ರೇನಿಯನ್ ಡ್ರೋನ್‌ಗಳನ್ನು ರಷ್ಯಾ ಸೇನೆ ಹೊಡೆದುರುಳಿಸಿತ್ತು ಎಂದು ರಷ್ಯಾ ಹೇಳಿತ್ತು. ಅಲ್ಲದೆ ಶುಕ್ರವಾರ ರಷ್ಯಾ, ಉಕ್ರೇನ್‌ನ ಗಡಿಯಲ್ಲಿರುವ ದಕ್ಷಿಣ ರೋಸ್ಟೋವ್ ಪ್ರದೇಶದ ಮೇಲೆ ಎರಡು ಉಕ್ರೇನಿಯನ್ ಕ್ಷಿಪಣಿಗಳನ್ನು ತಡೆದಿರುವುದಾಗಿ ಹೇಳಿತ್ತು.

ಕಳೆದ ವರ್ಷ ಫೆಬ್ರವರಿಯಲ್ಲಿ ಮಾಸ್ಕೋ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಉಕ್ರೇನ್‌ನ ಗಡಿಯಲ್ಲಿರುವ ಪ್ರದೇಶಗಳು ನಿಯಮಿತ ಡ್ರೋನ್ ದಾಳಿಗಳು ಮತ್ತು ಶೆಲ್ ದಾಳಿಗಳನ್ನು ಕಂಡಿವೆ, ಆದರೆ ಇದುವರೆಗೆ ಕ್ಷಿಪಣಿಗಳ ದಾಳಿಗೆ ಗುರಿಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com