'ದಯವಿಟ್ಟು ಬೀಚ್‌ನಲ್ಲಿ ಇದು ಬೇಡ': ನೆದರ್ಲೆಂಡ್ ಸರ್ಕಾರದ ವಿಚಿತ್ರ ಮನವಿ ಏನು? ಯಾವ ದೇಶದಲ್ಲಿ ಎಂತಹ ರೂಲ್ಸ್ ಇದೆ ಗೊತ್ತೆ!

ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುವ ನೆದರ್‌ಲೆಂಡ್ ನ ಪಟ್ಟಣವೊಂದು ಪ್ರವಾಸಿಗರ ಕೃತ್ಯಕ್ಕೆ ಹೈರಾಣಾಗಿ ಹೋಗಿದ್ದು, ಇದೀಗ ಬಹಿರಂಗವಾಗಿಯೇ ಸೆಕ್ಸ್ ಮಾಡಬೇಡಿ ಎಂದು ಮನವಿ ಮಾಡುತ್ತಿದೆ.
ಬೀಚ್ (ಪ್ರಾತಿನಿಧಿಕ ಚಿತ್ರ)
ಬೀಚ್ (ಪ್ರಾತಿನಿಧಿಕ ಚಿತ್ರ)

ನವದೆಹಲಿ: ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುವ ನೆದರ್‌ಲೆಂಡ್ ನ ಪಟ್ಟಣವೊಂದು ಪ್ರವಾಸಿಗರ ಕೃತ್ಯಕ್ಕೆ ಹೈರಾಣಾಗಿ ಹೋಗಿದ್ದು, ಇದೀಗ ಬಹಿರಂಗವಾಗಿಯೇ ಸೆಕ್ಸ್ ಮಾಡಬೇಡಿ ಎಂದು ಮನವಿ ಮಾಡುತ್ತಿದೆ.

ಹೇಳಿಕೇಳಿ ಐರೋಪ್ಯ ರಾಷ್ಟ್ರಗಳ ಸಮುದ್ರತೀರಗಳಲ್ಲಿ ನಗ್ನತೆ ಮತ್ತು ಸೆಕ್ಸ್‌ ಗೆ ಸಂಬಂಧಿಸಿದಂತೆ ಅಂತಾ ತೀರ ಮಡಿವಂತಿಕೆಗಳ ನಿಯಮಗಳಿಲ್ಲ. ಇದೇ ಕಾರಣಕ್ಕೆ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು... ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿನ ಸ್ಥಳೀಯರೇ ಸೆಕ್ಸ್ ಟೂರಿಸಂ ಆಯೋಜಿಸುತ್ತಾರೆ. ಕೆಲವು ಗುಂಪುಗಳು ಮುಂಚಿತವಾಗಿಯೇ ದಿನಾಂಕಗಳನ್ನು ಕಾಯ್ದಿರಿಸಲಾಗುತ್ತಿದೆ. ಪ್ರವಾಸಿಗರ ಈ ನಡೆ ಇದೀಗ ನೆದರ್ಲೆಂಡ್ ಸ್ಥಳೀಯರು ಮತ್ತು ಕುಟುಂಬ ಸಮೇತ ಬೀಚ್ ಆಗಮಿಸುವವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ಇದೇ ಕಾರಣಕ್ಕೆ ದಕ್ಷಿಣ ನೆದರ್‌ಲ್ಯಾಂಡ್‌‌ ವೀರೆ ಎಂಬ ಪಟ್ಟಣದ ಕರಾವಳಿ ತೀರ, ಮರಳಿನ ದಿಬ್ಬಗಳಲ್ಲಿ ಪ್ರವಾಸಿಗರ ಲೈಂಗಿಕ ನಡವಳಿಕೆಯ ಮೇಲೆ ನಿಷೇಧ ಹೇರಿದೆ.  ನೋ ಸೆಕ್ಸ್ ಆನ್ ಬೀಚ್ (No Sex On The Beach) ವಿಶಿಷ್ಟ ಅಭಿಯಾನವನ್ನು ಕೈಗೊಂಡಿದ್ದು, ವೀರೆ ಮುನ್ಸಿಪಾಲ್ಟಿಯು ಬೀಚ್‌ಗಳಲ್ಲಿ ಸೆಕ್ಸ್ ನಿಷೇಧ ಮಾಡಿರುವ ಚಿಹ್ನೆಗಳ ಫಲಕಗಳನ್ನು ಹಾಕಿದೆ.

'ಪ್ರಾಜೆಕ್ಟ್ ಆರೆಂಜೋನ್' ಎಂಬ ಹೆಸರಿನಲ್ಲಿ ಈ ಅಭಿಯಾನ ಆರಂಭಿಸಲಾಗಿದ್ದು, ನೋ ಸೆಕ್ಸ್ ಆನ್ ಬೀಚ್ ವಿಶಿಷ್ಟ ಅಭಿಯಾನವನ್ನು ಕೈಗೊಂಡಿದ್ದು, ವೀರೆ ಮುನ್ಸಿಪಾಲ್ಟಿಯು ಬೀಚ್‌ಗಳಲ್ಲಿ ಸೆಕ್ಸ್ ನಿಷೇಧ ಮಾಡಿರುವ ಚಿಹ್ನೆಗಳ ಫಲಕಗಳನ್ನು ಹಾಕಿದೆ. 

ಅಲ್ಲದೆ ಇಲ್ಲಿನ ಸ್ವಯಂ ಕಾರ್ಯಕರ್ತರೂ ಕೂಡ ಈ ವಿಶೇಷ ಅಭಿಯಾನಕ್ಕೆ ಕೈಜೋಡಿಸಿದ್ದು, ಸಾರ್ವಜನಿಕ ಸೆಕ್ಸ್ ನಿಷೇಧಿಸಲಾಗಿದೆ ಎಂದು ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ತಿಳಿಸುತ್ತಿದ್ದಾರೆ. ವಿಶೇವಾಗಿ ಮರಳಿನ ದಿಬ್ಬಗಳಲ್ಲಿ ರತಿಕ್ರೀಡೆಗೆ ಅವಕಾಶವಿಲ್ಲ. ಅವುಗಳನ್ನು ಕಾನೂನುಬದ್ಧಗೊಳಿಸಲಾಗಿದೆ. ಅಲ್ಲದೇ ದಿಬ್ಬಗಳು, ಮೀಸಲು ಕಾಡು ಮತ್ತು ಬೀಚ್‌ಗಳಲ್ಲಿ ಸೆಕ್ಸ್ ಮಾಡುವುದನ್ನು ತಪ್ಪಿಸಲು ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗುತ್ತಿದೆ.

ಮನರಂಜನೆಗೆಂದು ಆಗಮಿಸುವ ಜನರು ಸಾರ್ವಜನಿಕವಾಗಿ ನಡೆಸುವ ಸೆಕ್ಸ್‌ ಕ್ರಿಯೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರ, ಜಲಮಂಡಳಿ ಮತ್ತು ನಿಸರ್ಗ ಸಂಸ್ಥೆಗಳಿಗೆ ಹಲವಾರು ದೂರುಗಳ ಬಂದಿವೆ.  ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ವೀರೆ ಪಟ್ಟಣದ ಮೇಯರ್ ಫ್ರೆಡೆರಿಕ್ ಶೌವೆನಾರ್ ಅವರು, ಸ್ಥಳೀಯ ಸಮುದಾಯಕ್ಕೆ ಈ ಮರಳಿನ ದಿಬ್ಬಗಳು ತುಂಬ ಮಹತ್ವದ್ದಾಗಿವೆ. ಹಾಗಾಗಿ, ನೈಸರ್ಗಿಕ ಪರಿಸರವನ್ನು ಹಾನಿಗೊಳಿಸುವಂತಹ ಅನಪೇಕ್ಷಿತ ನಡವಳಿಕೆಯಿಂದ ರಕ್ಷಿಸಬೇಕಾದ ಅಗತ್ಯವಿದೆ. ಪ್ರವಾಸಿಗರ ಸೆಕ್ಸ್ ಚಟುವಟಿಕೆಯು ರಜೆ ಆಸ್ವಾದಿಸಲು ಬರುವ ಇತರರಿಗೂ ತೊಂದರೆಯಾಗಬಹುದು ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರವು ಇನ್ನು ಮುಂದೆ ಎಚ್ಚರಿಕೆಗಳನ್ನು ನೀಡುವುದಿಲ್ಲ, ಬದಲಿಗೆ, ತ್ವರಿತ “ಮೌಖಿಕ”ವಾಗಿ ತಿಳಿಸಲಾಗುತ್ತದೆ ಮತ್ತು ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಎಂಟು ಹೊಸ ಮಾಹಿತಿ ಫಲಕಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

ಆಕ್ಷೇಪ
ಈ ಮಧ್ಯೆ, ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಆಕ್ಷೇಪ ಕೂಡ ವ್ಯಕ್ತವಾಗಿದೆ. ಲೈಂಗಿಕ ನಡವಳಿಕೆಯಿಂದ ಬೆತ್ತಲೆ ಸೂರ್ಯ ಸ್ನಾನ (ಸನ್ ಬಾತ್) ಪ್ರಕ್ರಿಯೆಯನ್ನು ಪ್ರತ್ಯೇಕಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಬೆತ್ತಲೆ ಸೂರ್ಯ ಸ್ನಾನವು ಲೈಂಗಿಕತೆಯಲ್ಲ. ಅದು ಸ್ವಾತಂತ್ರ್ಯದ ಭಾವನೆಯನ್ನು ನೀಡುತ್ತದೆ. ಫೋಟೋಶಾಪ್ ಮಾಡದ ನೈಜ, ಬೆತ್ತಲೆ ದೇಹಗಳನ್ನು ನೋಡುವುದು ತುಂಬಾ ಆರೋಗ್ಯಕರ. ಆದರೆ ನಾವು ಹೊರಾಂಗಣದಲ್ಲಿ ಲೈಂಗಿಕತೆಯಿಂದ ದೂರವಿರುತ್ತೇವೆ ಎಂದು ಸಂಘಟನೆಯೊಂದು ತಿಳಿಸಿದೆ. 

ಪ್ರಪಂಚದ ವಿವಿಧೆಡೆಯೂ ಇದೆ ಸೆಕ್ಸ್ ಟೂರಿಸಂ
ಕೇವಲ ನೆದರ್ಲೆಂಡ್ ಮಾತ್ರವಲ್ಲದೇ ಜಗತ್ತಿನ ಹಲವು ದೇಶಗಳು ಈ ಸೆಕ್ಸ್ ಟೂರಿಸಂನಿಂದಾಗಿ ಸಮಸ್ಯೆ ಅನುಭವಿಸುತ್ತಿವೆ. ಇದಕ್ಕೆ ಈಗಾಗಲೇ ಸಾಕಷ್ಟು ದೇಶಗಳ ಕ್ರಮ ಕೂಡ ಕೈಗೊಂಡಿವೆ. ಅಂತಹ ಕೆಲ ದೇಶಗಳ ಪಟ್ಟಿ ಇಂತಿದೆ.

ಜರ್ಮನಿ 
ಜರ್ಮನ್ ಕಾನೂನಿನ ಪ್ರಕಾರ, ಕೆಲವು ಸ್ಥಳಗಳಲ್ಲಿ ನಗ್ನತೆ ಮತ್ತು ಸಾರ್ವಜನಿಕ ಲೈಂಗಿಕತೆಯ ಮೇಲೆ ಯಾವುದೇ ನಿಷೇಧವಿಲ್ಲ. ಆದರೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ. ಮೊದಲನೆಯದು ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಸಂಪೂರ್ಣ ಕವರ್ ಇರಬೇಕು. ಜೋಡಿ ಸಾರ್ವಜನಿಕ ಪ್ರದರ್ಶನವಾಗದಂತೆ ದೈಹಿಕ ಗೌಪ್ಯತೆ ನಿರ್ವಹಿಸಬೇಕು. ಇದು ಸಂಭವಿಸದಿದ್ದರೆ ದಂಡವನ್ನು ವಿಧಿಸಲಾಗುತ್ತದೆ.

ಗ್ವಾಡಲಜರಾ, ಮೆಕ್ಸಿಕೋ
2018 ರಲ್ಲಿ, ಮೆಕ್ಸಿಕೋದ ಗ್ವಾಡಲಜಾರಾ ನಗರದಲ್ಲಿ ಸಾರ್ವಜನಿಕ ಲೈಂಗಿಕತೆಯನ್ನು ಕಾನೂನುಬದ್ಧಗೊಳಿಸಲಾಯಿತು. ಇಲ್ಲಿ ಇದು ಕಾನೂನುಬದ್ಧವಾಗಿ ಮಾನ್ಯವಾಗಿದೆ, ಇದನ್ನು ಮಾಡುವಾಗ ಮೂರನೇ ವ್ಯಕ್ತಿ ದೂರು ನೀಡಿದರೆ ಪೊಲೀಸರು ದೂರು ದಾಖಲಿಸುವುದಿಲ್ಲ. ಇಂತಹ ಕೆಲಸಗಳಿಂದ ಪೊಲೀಸರನ್ನು ದೂರವಿಡಲಾಗುತ್ತಿದ್ದು, ಇತರ ಅಪರಾಧಗಳನ್ನು ತಡೆಯುವತ್ತ ಗಮನ ಹರಿಸಲಾಗುತ್ತಿದೆ ಎಂದು ಇಲ್ಲಿನ ಸರ್ಕಾರ ಹೇಳುತ್ತಿದೆ.

ವೊಂಡೆಲ್ಪಾರ್ಕ್, ನೆದರ್ಲ್ಯಾಂಡ್ಸ್
ನೆದರ್‌ಲ್ಯಾಂಡ್ಸ್‌ನ ವೊಂಡೆಲ್‌ಪಾರ್ಕ್‌ನಲ್ಲಿ 2008 ರಿಂದ ಮುಕ್ತ ಲೈಂಗಿಕತೆಯು ಕಾನೂನುಬದ್ಧವಾಗಿದೆ. ಆದಾಗ್ಯೂ, ಅನುಸರಿಸಬೇಕಾದ ಕೆಲವು ನಿಯಮಗಳಿವೆ. ಈ ಉದ್ಯಾನವನದಲ್ಲಿ ರಾತ್ರಿ ವೇಳೆ ಲೈಂಗಿಕ ಕ್ರಿಯೆಯನ್ನು ನಿಷೇಧಿಸಲಾಗಿದೆ ಮತ್ತು ಯಾರೂ ಸಹ ಉದ್ಯಾನವನದಲ್ಲಿ ಉಳಿಯುವಂತಿಲ್ಲ. ಇಲ್ಲಿಂದ ಹೊರಡುವ ಮೊದಲು ನೀವು ಇದ್ದ ಜಾಗವನ್ನು ಸ್ವಚ್ಚಗೊಳಿಸಬೇಕು.

ಓಸ್ಟ್ರಾಡೆನ್‌ಪಾರ್ಕ್, ಡೆನ್ಮಾರ್ಕ್
ನೆದರ್ಲೆಂಡ್ಸ್‌ನಲ್ಲಿರುವಂತೆಯೇ ಕೋಪನ್‌ಹೇಗನ್‌ನ ಓಸ್ಟ್ರಾಡೆನ್‌ಪಾರ್ಕ್‌ನಲ್ಲಿ ಮುಕ್ತ ಲೈಂಗಿಕತೆಯು ಕಾನೂನುಬದ್ಧವಾಗಿದೆ. ಮಕ್ಕಳೂ ಇಲ್ಲಿಗೆ ಬರುತ್ತಾರೆ. ಹಾಗಾಗಿ ಕೆಲವು ನಿಯಮಗಳನ್ನು ಮಾಡಲಾಗಿದೆ. ನಿರ್ದಿಷ್ಟ ಸ್ಥಳಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಇಲ್ಲಿ ಲೈಂಗಿಕ ಕ್ರಿಯೆ ಮಾಡುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com