ವಾಷಿಂಗ್ ಟನ್ ತಲುಪಿದ ಪ್ರಧಾನಿ: ಬೈಡನ್ ಜೊತೆ ಔತಣಕೂಟ, ಅಮೆರಿಕಾ ಕಾಂಗ್ರೆಸ್ ಉದ್ದೇಶಿಸಿ ಮೋದಿ ಭಾಷಣ

ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ ಟನ್ ತಲುಪಿದ್ದು, ಅಲ್ಲಿರುವ ಅನಿವಾಸಿ ಭಾರತೀಯ ಸಮೂಹ ಅದ್ಧೂರಿಯಿಂದ ಸ್ವಾಗತಿಸಿದ್ದಾರೆ.
ವಾಷಿಂಗ್ ಟನ್ ಗೆ ಆಗಮಿಸಿದ ಪ್ರಧಾನಿ ಮೋದಿ
ವಾಷಿಂಗ್ ಟನ್ ಗೆ ಆಗಮಿಸಿದ ಪ್ರಧಾನಿ ಮೋದಿ

ವಾಷಿಂಗ್ ಟನ್: ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ ಟನ್ ತಲುಪಿದ್ದು, ಅಲ್ಲಿರುವ ಅನಿವಾಸಿ ಭಾರತೀಯ ಸಮೂಹ ಅದ್ಧೂರಿಯಿಂದ ಸ್ವಾಗತಿಸಿದ್ದಾರೆ.

ಆಂಡ್ರ್ಯೂಸ್ ವಾಯುನೆಲೆಯಲ್ಲಿ ಪ್ರಧಾನಿ ಮೋದಿ ಅವರನ್ನು ಅನಿವಾಸಿ ಭಾರತೀಯರು ಸ್ವಾಗತಿಸಿದ್ದಾರೆ. ವಾಷಿಂಗ್ ಟನ್ ತಲುಪುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ,  ಭಾರತೀಯ ಸಮುದಾಯದ ಪ್ರೀತಿಪೂರ್ವಕ ಹಾಗೂ ಇಂದ್ರ ದೇವರ ಆಶೀರ್ವಾದ ನನಗೆ ಇನ್ನಷ್ಟು ವಿಶೇಷವಾಗಿತ್ತು ಎಂದು ಹೇಳಿದ್ದಾರೆ.

ವಾಷಿಂಗ್ ಟನ್ ನಲ್ಲಿ ಪ್ರಧಾನಿ ಮೋದಿ ಕೈಗಾರಿಕೆಗಳ ನಾಯಕರು ಹಾಗೂ ಸಿಇಒಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಈ ಪೈಕಿ ಪ್ರಧಾನಿ ಮೋದಿ ಮೈಕ್ರಾನ್ ನ ಸಿಇಒ ಸಂಜಯ್ ಮೆಹ್ರೋತ್ರ, ಜಿಇ ಮುಖ್ಯಸ್ಥ ಹೆಚ್ ಲಾರೆನ್ಸ್ ಕಲ್ಪ್ ಜ್ಯೂನಿಯರ್ ಹಾಗೂ ಅಪ್ಲೈಡ್ ಮೆಟೀರಿಯಲ್ಸ್ ಮುಖ್ಯಸ್ಥ ಗ್ಯಾರಿ ಡಿಕರ್ಸನ್ ಅವರನ್ನು ಭೇಟಿ ಮಾಡಲಿದ್ದಾರೆ.

ಈ ಬಳಿಕ ದಿನಾಂತ್ಯಕ್ಕೆ ಪ್ರಧಾನಿ ಮೋದಿ ಜೋ ಬೈಡನ್ ದಂಪತಿಯ ಆತಿಥ್ಯ ಸ್ವೀಕರಿಸಲಿದ್ದು, ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನ ಮೋದಿ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಭಾಗಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com