
ಇಸ್ಲಾಮಾಬಾದ್: ಕುಖ್ಯಾತ ಭಯೋತ್ಪಾದಕ ಹಾಗೂ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಕಮಾಂಡರ್ ಅಬ್ದುಲ್ ಜಬರ್ ಷಾನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ.
ಧಾರ್ಮಿಕ ಗುಂಪುಗಳು, ಪೋಲಿಯೊ ಲಸಿಕೆ ನೀಡುವ ತಂಡಗಳ ಮೇಲಿನ ದಾಳಿ ಸೇರಿದಂತೆ ಅನೇಕ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬ್ದುಲ್ ಜಬರ್ ಷಾನನ್ನು ಪಾಕಿಸ್ತಾನದ ಭದ್ರತಾ ಪಡೆಗಳು ಮಂಗಳವಾರ ಹತ್ಯೆ ಮಾಡಿವೆ ಎಂದು ತಿಳಿದುಬಂದಿದೆ.
ಸೋಮವಾರ ಖೈಬರ್ ಪ್ರಾಂತ್ಯದ ದಕ್ಷಿಣ ವಜಿರಿಸ್ತಾನ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ ಗ್ರಾಮವೊಂದರಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ದಾಳಿ ಮಾಡಿ ಅಬ್ದುಲ್ ಜಬರ್ ಷಾನನ್ನು ಹತ್ಯೆ ಮಾಡಿವೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ಗುಪ್ತಚರ ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಲಾಗಿದ್ದು, ಈ ಘಟನೆಯಲ್ಲಿ ಅಬ್ದುಲ್ ಜಬರ್ ಷಾ ಹತ್ಯೆಯಾಗಿದ್ದರೆ, ಇನ್ನು ಇಬ್ಬರು ಭಯೋತ್ಪಾದಕರು ಗಾಯಗೊಂಡಿದ್ದಾರೆ. ಇದು ಈ ಪ್ರದೇಶದಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳ ಸತತ ಎರಡನೇ ಯಶಸ್ವಿ ಕಾರ್ಯಾಚರಣೆಯಾಗಿದೆ.
ಕಾನೂನುಬಾಹಿರ TTP ಸಂಘಟನೆ ಇತ್ತೀಚಿನ ತಿಂಗಳುಗಳಲ್ಲಿ ದಾಳಿಗಳನ್ನು ಹೆಚ್ಚಿಸಿದೆ ಮತ್ತು ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಸ್ಪಷ್ಟವಾಗಿ ಪ್ರಬಲವಾಗಿದೆ. 2007 ರಲ್ಲಿ ಹಲವಾರು ಉಗ್ರಗಾಮಿ ಸಂಘಟನೆಗಳ ಸಮೂಹ ಗುಂಪಿನಂತೆ ಸ್ಥಾಪಿಸಲಾದ ಉಗ್ರಗಾಮಿ ಗುಂಪು ಸರ್ಕಾರದೊಂದಿಗೆ ಕದನ ವಿರಾಮವನ್ನು ರದ್ದುಗೊಳಿಸಿತು ಮತ್ತು ದೇಶಾದ್ಯಂತ ಭಯೋತ್ಪಾದಕ ದಾಳಿಗಳನ್ನು ನಡೆಸಲು ತನ್ನ ಉಗ್ರಗಾಮಿಗಳಿಗೆ ಆದೇಶ ನೀಡಿತ್ತು.
Advertisement