ಪಾಕಿಸ್ತಾನದಿಂದ ಮೇ 12 ರಂದು 199 ಭಾರತೀಯ ಮೀನುಗಾರರ ಬಿಡುಗಡೆ

ಪಾಕಿಸ್ತಾನದ ನೀರಿನಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾದ 199 ಭಾರತೀಯ ಮೀನುಗಾರರನ್ನು ಮೇ 12 ರಂದು ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇಸ್ಲಾಮಾಬಾದ್: ಪಾಕಿಸ್ತಾನದ ನೀರಿನಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾದ 199 ಭಾರತೀಯ ಮೀನುಗಾರರನ್ನು ಮೇ 12 ರಂದು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಶುಕ್ರವಾರ 199 ಭಾರತೀಯ ಮೀನುಗಾರರ ಬಿಡುಗಡೆ ಮತ್ತು ವಾಪಸಾತಿಗೆ ತಯಾರಿ ನಡೆಸುವಂತೆ ಸಂಬಂಧಿಸಿದ ಸರ್ಕಾರಿ ಸಚಿವಾಲಯಗಳಿಗೆ ತಿಳಿಸಲಾಗಿದೆ ಎಂದು ಸಿಂಧ್‌ನ ಜೈಲು ಮತ್ತು ತಿದ್ದುಪಡಿ ವಿಭಾಗದ ಉನ್ನತ ಪೊಲೀಸ್ ಅಧಿಕಾರಿ ಕಾಜಿ ನಜೀರ್ ಅವರು ಹೇಳಿದ್ದಾರೆ.

ಈ ಮೀನುಗಾರರನ್ನು ಲಾಹೋರ್‌ಗೆ ಕಳುಹಿಸಲಾಗುವುದು ಮತ್ತು ನಂತರ ವಾಘಾ ಗಡಿಯಲ್ಲಿ ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಸದ್ಯ ಈ ಮೀನುಗಾರರನ್ನು ಇಲ್ಲಿನ ಲಾಂಧಿ ಜೈಲಿನಲ್ಲಿ ಇರಿಸಲಾಗಿದೆ.

ಇನ್ನು ಮೀನುಗಾರರೊಂದಿಗೆ ವಾಪಸಾಗಬೇಕಿದ್ದ ಭಾರತೀಯ ನಾಗರಿಕ ಕೈದಿ ಜುಲ್ಫಿಕರ್ ಅನಾರೋಗ್ಯದ ಕಾರಣ ಶನಿವಾರ ಕರಾಚಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

"ಲಾಂಧಿ ಜೈಲಿನ ಅಧಿಕಾರಿಗಳ ಪ್ರಕಾರ, ಭಾರತೀಯ ಕೈದಿ ಜುಲ್ಫಿಕರ್ ತೀವ್ರ ಜ್ವರ ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು. ಕಳೆದ ವಾರ ಈ ಕೈದಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅಲ್ಲಿ ಅವರು ಶ್ವಾಸಕೋಶದ ಸೋಂಕಿನಿಂದ ನಿಧನರಾದರು" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com