ಭಿನ್ನ ಅಥವಾ ಹೊಸತಾದ ರೋಗಕಾರಕ ವೈರಾಣು ಪತ್ತೆಯಾಗಿಲ್ಲ: WHO ವಿಚಾರಣೆ ಬೆನ್ನಲ್ಲೇ ಚೀನಾ ಸ್ಪಷ್ಟನೆ

ತಮ್ಮ ದೇಶದಲ್ಲಿ ಭಿನ್ನ ಅಥವಾ ಹೊಸತಾದ ರೋಗಕಾರಕ ವೈರಾಣು ಪತ್ತೆಯಾಗಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿದೆ.
ಚೀನಾದಲ್ಲಿ ಸೋಂಕು ಉಲ್ಬಣ
ಚೀನಾದಲ್ಲಿ ಸೋಂಕು ಉಲ್ಬಣ

ವಾಷಿಂಗ್ಟನ್: ತಮ್ಮ ದೇಶದಲ್ಲಿ ಭಿನ್ನ ಅಥವಾ ಹೊಸತಾದ ರೋಗಕಾರಕ ವೈರಾಣು ಪತ್ತೆಯಾಗಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿದೆ.

ಚೀನಾದಲ್ಲಿ ಹೊಸ ಬಗೆಯ ವೈರಾಣು ಪತ್ತೆಯಾಗಿದ್ದು ಇದು ಅಲ್ಲಿನ ಜನ ಸಮುದಾಯದಲ್ಲಿ ಸೋಂಕು ಉಲ್ಬಣಕ್ಕೆ ಕಾರಣವಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಆರೋಗ್ಯ ಸಚಿವಾಲಯದಿಂದ ವರದಿ ಕೇಳಿತ್ತು. ಈ ದತ್ತಾಂಶ ವರದಿಗೆ ಪ್ರತಿಕ್ರಿಯೆ ನೀಡಿರುವ ಚೀನಾ ಇದೀಗ ಯಾವುದೇ ಅಸಾಮಾನ್ಯ ಅಥವಾ ಹೊಸತಾದ ರೋಗಕಾರಕಗಳು ಪತ್ತೆಯಾಗಿಲ್ಲ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಚೀನಾದಲ್ಲಿ ಡಿಸೆಂಬರ್‌ನಲ್ಲಿ ಸಾಂಕ್ರಾಮಿಕ ರೋಗಕ್ಕೆ ಅಂತ್ಯವನ್ನು ಘೋಷಿಸಿದ ನಂತರ ಚೀನಾ ತನ್ನ ಮೊದಲ ಪೂರ್ಣ ಚಳಿಗಾಲವನ್ನು ಅನುಭವಿಸುತ್ತಿದ್ದು, ಕೋವಿಡ್ -19 ನಿರ್ಬಂಧಗಳನ್ನು ತೆಗೆದುಹಾಕುವುದರೊಂದಿಗೆ ಸೋಂಕು ಉಲ್ಬಣವು ಸಂಬಂಧಿಸಿದೆ ಎಂದು WHO ಹೇಳಿದೆ.

ಈ ಮಧ್ಯೆ, ಚೀನಾದಲ್ಲಿ ಭಿನ್ನ ಅಥವಾ ಹೊಸತಾದ ರೋಗಕಾರಕ ವೈರಾಣು ಪತ್ತೆಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆಗೆ ಚೀನಾ ತಿಳಿಸಿದೆ. ಕೋವಿಡ್‌–19 ನಿರ್ಬಂಧಗಳನ್ನು ಸಡಿಲಿಸಿದ ನಂತರದ ಪ್ರಥಮ ಚಳಿಗಾಲ ಪ್ರವೇಶಿಸಿದ ಹಿಂದೆಯೇ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಏರಿಕೆಯಾಗಿವೆ. ಮುಖ್ಯವಾಗಿ ಬೀಜಿಂಗ್‌, ಲಯೊನಿಂಗ್ ಪ್ರಾಂತ್ಯದಲ್ಲಿ ತೀವ್ರವಾಗಿದ್ದು, ಆಸ್ಪತ್ರೆಗಳಲ್ಲಿ ಉದ್ದನೆಯ ಸಾಲು ಇದೆ.

ಚಳಿಗಾಲ ಮತ್ತು ವಸಂತಕಾಲದಲ್ಲಿ ಮಕ್ಕಳಲ್ಲಿ ಸೋಂಕು, ಜ್ವರದ ಸಮಸ್ಯೆಗಳು ಹೆಚ್ಚಾಗಬಹುದು. ಭವಿಷ್ಯದಲ್ಲಿ ಕೆಲವು ಕಡೆ ಶ್ವಾಸಕೋಶವನ್ನು ಬಾಧಿಸುವ ಮೈಕೋಪ್ಲಾಸ್ಮಾ ನ್ಯುಮೋನಿಯಾ ಸೋಂಕು ಹೆಚ್ಚಾಗಬಹುದು. ಅಲ್ಲದೆ, ಕೋವಿಡ್ ಸೋಂಕು ಮತ್ತೆ ಕಾಡುವ ಸಾಧ್ಯತೆಗಳು ಇವೆ ಎಂದು ಚೀನಾ ಆರೋಗ್ಯ ಸಚಿವಾಲಯ ಜನತೆಗೆ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com